ಹೀಗಾದರೆ.. ರಾಜಸ್ಥಾನ್ ಫೈನಲ್‌ಗೆ ಹೋಗೋದು ಪಕ್ಕಾ.. ಹೈದರಾಬಾದ್‌ ಗೆಲ್ಲೋದು ಕಷ್ಟ.. ಯಾಕಂದರೆ..!

author-image
Ganesh
Updated On
ಹೀಗಾದರೆ.. ರಾಜಸ್ಥಾನ್ ಫೈನಲ್‌ಗೆ ಹೋಗೋದು ಪಕ್ಕಾ.. ಹೈದರಾಬಾದ್‌ ಗೆಲ್ಲೋದು ಕಷ್ಟ.. ಯಾಕಂದರೆ..!
Advertisment
  • ಹೈದರಾಬಾದ್-ರಾಜಸ್ಥಾನ್ ನಡುವೆ ಹೈ-ವೋಲ್ಟೇಜ್ ಪಂದ್ಯ
  • ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಪೈನಲ್​​ಗಾಗಿ ಸೆಣಸಾಟ
  • ಐಪಿಎಲ್ ಪ್ಲೇ-ಆಫ್​ನ ಕೊನೆಯ ರೋಚಕ ಹಣಾಹಣಿ

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಐಪಿಎಲ್ ಎರಡನೇ ಕ್ವಾಲಿಫೈಯರ್ ಇಂದು ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗಲಿವೆ.

ಚೆಪಾಕ್‌ನಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್​ನ ಅಂಕಿ-ಅಂಶಗಳು ಭಯಾನಕವಾಗಿವೆ. ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಇಲ್ಲಿಯವರೆಗೆ ಚೆಪಾಕ್ ಸ್ಟೇಡಿಯಂನಲ್ಲಿ 10 ಪಂದ್ಯಗಳನ್ನು ಆಡಿದೆ. ಅದರಲ್ಲಿ ಅದು ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಈ ಮೂಲಕ ಚೆಪಾಕ್‌ನಲ್ಲಿ ಹೈದರಾಬಾದ್ ಶೇ.90 ರಷ್ಟು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ.

ಇದನ್ನೂ ಓದಿ:ಅಪಘಾತಕ್ಕೆ ಕ್ರೆಟಾ ಕಾರು ಪುಡಿಪುಡಿ.. 15 ನಿಮಿಷ ಲಾಕ್ ಆಗಿ ತಾಯಿ-ಮಗಳು ಕಿರುಚಾಡಿದ ಹೃದಯ ವಿದ್ರಾವಕ Video

publive-image

ಇತಿಹಾಸವನ್ನು ನೋಡಿದ್ರೆ ಚೆಪಾಕ್ ಸ್ಟೇಡಿಯಂನಲ್ಲಿ ಹೈದರಾಬಾದ್​ಗೆ ರಾಜಸ್ಥಾನ್ ತಂಡವನ್ನು ಸೋಲಿಸುವುದು ದೊಡ್ಡ ಸವಾಲಾಗಿದೆ. ಐಪಿಎಲ್ ಪ್ಲೇ-ಆಫ್‌ನಲ್ಲಿ ಹೈದರಾಬಾದ್ ಒಟ್ಟು 12 ಬಾರಿ ಆಡಿದೆ. ಅದರಲ್ಲಿ 7 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐಪಿಎಲ್ ಪ್ಲೇಆಫ್‌ನಲ್ಲಿ ಹೈದರಾಬಾದ್ ಗೆಲುವಿಗಿಂತ ಹೆಚ್ಚು ಸೋಲುಗಳನ್ನು ಎದುರಿಸಿದೆ. ಹೀಗಾಗಿ ಇವತ್ತು ಹೈದರಾಬಾದ್​ಗೆ ಗೆಲುವು ಅಷ್ಟೊಂದು ಸುಲಭವಾಗಿಲ್ಲ.

ಇದನ್ನೂ ಓದಿ:ಕಪ್ ಗೆಲ್ಲಬೇಕು ಅಂದರೆ ಕೊಹ್ಲಿ RCB ತೊರೆಯಬೇಕು -ಕಿಡಿ ಹೊತ್ತಿಸಿದ ಮಾಜಿ ಆಟಗಾರ

ಇತ್ತ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್‌ಗೆ ತಲುಪಿದೆ. ಕ್ವಾಲಿಫೈಯರ್-1ರಲ್ಲಿ ಕೆಕೆಆರ್​ ವಿರುದ್ಧ ಎಸ್​ಆರ್​ಹೆಚ್​ ಸೋಲನ್ನು ಕಂಡಿದೆ. ಇತ್ತ ಎಲಿಮಿನೇಟರ್‌ ಪಂದ್ಯದಲ್ಲಿ ಆರ್​ಆರ್​, ಆರ್​ಸಿಬಿಯನ್ನು ಸೋಲಿಸಿ ಕ್ವಾಲಿಫೈಯರ್​-2ಗೆ ಎಂಟ್ರಿ ನೀಡಿದೆ. ಇದಕ್ಕೂ ಮುನ್ನ ನಡೆದ ಲೀಗ್ ಹಂತದ ಪಂದ್ಯದಲ್ಲಿ ಹೈದರಾಬಾದ್, ರಾಜಸ್ಥಾನ್​ ತಂಡವನ್ನು 1 ರನ್​ನಿಂದ ಸೋಲಿಸಿದೆ. ಇಂದು ಸಂಜು ಟೀಂ ಕಮ್ಮಿನ್ಸ್​ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ:ಮ್ಯಾಕ್ಸಿ ಆರ್​​ಸಿಬಿ ಸೋಲಿಗೆ ಹೆಂಗೆಲ್ಲ ಕಾರಣರಾದರು? ಕಂಪ್ಲೀಟ್ ಡೀಟೈಲ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment