ವಿಸ್ಫೋಟಕ ಬ್ಯಾಟರ್​ಗಳಿದ್ದರೂ ಅಲ್ಪ ಮೊತ್ತದ ಟಾರ್ಗೆಟ್​​ ಕೊಟ್ಟ SRH.. ಎಷ್ಟು ರನ್?

author-image
Bheemappa
Updated On
ವಿಸ್ಫೋಟಕ ಬ್ಯಾಟರ್​ಗಳಿದ್ದರೂ ಅಲ್ಪ ಮೊತ್ತದ ಟಾರ್ಗೆಟ್​​ ಕೊಟ್ಟ SRH.. ಎಷ್ಟು ರನ್?
Advertisment
  • ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕಿಶನ್​ 2 ರನ್​ಗೆ ಔಟ್
  • ಇನ್ನಿಂಗ್ಸ್​ನ ​ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಫರ್ಮಾಮೆನ್ಸ್
  • ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡದ ಮುಂದೆ SRH ಸೈಲೆಂಟ್

ಅಭಿಷೇಕ್ ಶರ್ಮಾ, ಹೆಡ್​, ಕ್ಲಾಸಿನ್​​ನಂತಹ ವಿಸ್ಫೋಟಕ ಬ್ಯಾಟರ್​ಗಳಿದ್ದರೂ ಸನ್​ರೈಸರ್ಸ್​ ಹೈದ್ರಾಬಾದ್ ತಂಡ ಸಾಧಾರಣ ಮೊತ್ತದ ಗುರಿಯನ್ನು ಮುಂಬೈ ಇಂಡಿಯನ್ಸ್​ಗೆ ನೀಡಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಓಪನರ್​ಗಳಾಗಿ ಬ್ಯಾಟಿಂಗ್​ಗೆ ಬಂದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್​ ಹೆಡ್ ತಾಳ್ಮೆಯ ಬ್ಯಾಟಿಂಗ್ ಮಾಡಲು ಹೋಗಿ ಕೈ ಸುಟ್ಟುಕೊಂಡರು ಎನ್ನಬಹುದು.

ಇದನ್ನೂ ಓದಿ: ಅಭಿಷೇಕ್ ಶರ್ಮಾಗೆ ಚಮಕ್ ಕೊಟ್ಟ ಮುಂಬೈ ಕ್ಯಾಪ್ಟನ್​.. ಯಂಗ್ ಬ್ಯಾಟರ್​ನ ಅರ್ಧಶತಕ ಮಿಸ್​ ​

publive-image

ಏಕೆಂದರೆ ತಂಡದ ಮೊತ್ತ 59 ರನ್​ಗಳು ಆಗೋವರೆಗೂ ಓಪನರ್ಸ್​ ಒಂದೂ ಸಿಕ್ಸ್​ ಕೂಡ ಬಾರಿಸಲಿಲ್ಲ. ಅಭಿಷೇಕ್ ಶರ್ಮಾ 28 ಎಸೆತಗಳಿಗೆ 7 ಬೌಂಡರಿ ಸಮೇತ 40 ರನ್​ ಗಳಿಸಿದ್ದಾಗ ಹಾರ್ದಿಕ್​ ಪಾಂಡ್ಯ ಬೌಲಿಂಗ್​ನಲ್ಲಿ ಕ್ಯಾಚ್​ ಔಟ್​ ಆದರು. ಇವರ ನಂತರ ಕ್ರೀಸ್​ಗೆ ಬಂದ ಇಶನ್ ಕಿಶನ್ ಕೇವಲ 2 ರನ್​ ಗಳಿಸಿ ಪೆವಿಲಿಯನ್​ಗೆ ಮುಖ ಮಾಡಿದರು. 28 ರನ್​ಗಳಿಸಿ ಬ್ಯಾಟ್ ಬೀಸುವಾಗ ಟ್ರಾವಿಸ್ ಹೆಡ್ ವಿಲ್ ಜಾಕ್ಸ್​ ಬೌಲಿಂಗ್​ನಲ್ಲಿ ಔಟ್ ಕ್ಯಾಚ್ ಕೊಟ್ಟು ಹೋದರು.

ಮತ್ತೆ ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡಿದ ನಿತೀಶ್​ ರೆಡ್ಡಿ 19, ಕ್ಲಾಸೆನ್ 3 ಫೋರ್, 2 ಸಿಕ್ಸರ್​ಗಳಿಂದ 37, ಅನಿಕೇತ್ ವರ್ಮಾ ಅಜೇಯ 18 ಹಾಗೂ ನಾಯಕ ಕಮಿನ್ಸ್ ಅಜೇಯ 8 ರನ್​ಗಳ ನೆರವಿನಿಂದ ಸನ್​ರೈಸರ್ಸ್​ ಹೈದ್ರಾಬಾದ್ ತಂಡ 163 ರನ್​ಗಳ ಗುರಿ ನೀಡಿದೆ. 20 ಓವರ್​ಗಳಲ್ಲಿ 5 ವಿಕೆಟ್​ಗೆ 163 ರನ್​ಗಳ ಟಾರ್ಗೆಟ್​ ಅನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್​ ತಂಡಕ್ಕೆ ನೀಡಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅಬ್ಬರಿಸಿದ್ದ ಹೈದ್ರಾಬಾದ್ ಬ್ಯಾಟರ್ಸ್, ಮುಂಬೈ ವಿರುದ್ಧ ಫುಲ್ ಸೈಲೆಂಟ್ ಆಗಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment