15 ವರ್ಷಗಳಲ್ಲೇ ಮೊದಲು.. ರಾಜ್ಯದಲ್ಲಿ ದಿನೇ ದಿನೇ ಏರಿಕೆ ಆಗ್ತಿದೆ ಬಿಸಿಲು; ಗರಿಷ್ಠ ಉಷ್ಣಾಂಶ ದಾಖಲು!

author-image
admin
Updated On
BREAKING: 52, 53, 54 ಅಲ್ಲ.. ಇಂದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಗರಿಷ್ಠ ಉಷ್ಣಾಂಶ ದಾಖಲು
Advertisment
  • 15 ವರ್ಷಗಳ ಬಳಿಕ ಫೆಬ್ರವರಿ ತಿಂಗಳಲ್ಲಿ ಅತ್ಯಧಿಕ ಉಷ್ಣಾಂಶ
  • ರಾಜ್ಯದಲ್ಲಿ ದಿನೇ ದಿನೇ ಏರಿಕೆ ಆಗುತ್ತಲೇ ಇದೆ ಬಿಸಿಲಿನ ತಾಪಮಾನ
  • ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ಬಹಿರಂಗ

ಅಬ್ಬಾ.. ನೆತ್ತಿ ಸುಡುವ ಬಿಸಿಲು ರಾಜ್ಯದಲ್ಲಿ ದಿನೇ ದಿನೇ ಏರಿಕೆ ಆಗುತ್ತಲೇ ಇದೆ. ಫೆಬ್ರವರಿ ತಿಂಗಳು ಮುಗಿಯೋ ಮುಂಚೆಯೇ ಉತ್ತರ ಕರ್ನಾಟಕ ಭಾಗ ಅದರಲ್ಲೂ ಕಾರವಾರ, ಕಲಬುರಗಿ, ರಾಯಚೂರು, ಬೀದರ್ ಭಾಗದಲ್ಲಿ ಬಿಸಿಲು ದಾಖಲೆಯನ್ನೇ ಬರೆಯುತ್ತಿದೆ.

ಇಂದು ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ನತ್ತ ದಾಪುಗಾಲು ಇಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 38.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

publive-image

ಹೊನ್ನಾವರದಲ್ಲಿ ಇಂದು ದಾಖಲಾಗಿರುವ ಗರಿಷ್ಠ ಉಷ್ಣಾಂಶ, ಕಳೆದ 15 ವರ್ಷಗಳ ಬಳಿಕ ಫೆಬ್ರವರಿ ತಿಂಗಳಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ಉಷ್ಣಾಂಶ ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ.

ಇದನ್ನೂ ಓದಿ: ಕೂಲ್​ ಡ್ರಿಂಕ್ಸ್ ಕುಡಿಯೋರಿಗೆ ಬಿಗ್​ ಶಾಕ್​​​​​​; ಕ್ಯಾನ್ಸರ್​ ಎಚ್ಚರಿಕೆ ಕೊಟ್ಟ WHO; ಓದಲೇಬೇಕಾದ ಸ್ಟೋರಿ 

ಎಲ್ಲಿ ಎಷ್ಟು ದಾಖಲು?
ಹೊನ್ನಾವರ - 38.5°ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ
ಕಾರವಾರ - 38.0°ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ
ಪಣಂಬೂರು - 37.8°ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ
ಕಲಬುರಗಿ - 37.6°ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ
ಮಂಗಳೂರು ಏರ್‌ಪೋರ್ಟ್‌ - 36.9°ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ
ಬೆಳಗಾವಿ ಏರ್‌ಪೋರ್ಟ್‌ - 35.3°ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ
ಬಾಗಲಕೋಟೆ - 35.3°ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment