Advertisment

ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು ಸಾಧ್ಯತೆ.. ಅಭಿಮಾನಿಗಳಿಂದ ಈಗಲೇ ಬೇಸರ.. ಕಾರಣ ಇಲ್ಲಿದೆ

author-image
Ganesh
Updated On
ಆಸ್ಟ್ರೇಲಿಯಾಗೆ ಭಾರತದ ಈ ಆಟಗಾರರು ಎಂದರೆ ಭಯ.. ರೋಹಿತ್, ಕೊಹ್ಲಿ, ಬೂಮ್ರಾ, ಪಂತ್ ಅಲ್ಲವೇ ಅಲ್ಲ..!
Advertisment
  • ರೋಚಕ ಘಟ್ಟ ತಲುಪಿರುವ ಟಿ20 ವಿಶ್ವಕಪ್ ಪಂದ್ಯಗಳು
  • ಇಂದು ಬಲಿಷ್ಠ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ
  • ಆಸ್ಟ್ರೇಲಿಯಾ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ

ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಹಣಾಹಣಿ ನಡೆಯಲಿದೆ. ಆಸ್ಟ್ರೇಲಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಒಂದು ವೇಳೆ ಇವತ್ತಿನ ಪಂದ್ಯದಿಂದ ಸೋತರೆ ಟೂರ್ನಿಯಿಂದಲೇ ಹೊರ ಬೀಳಲಿದೆ.

Advertisment

ಜೊತೆಗೆ ಭಾರತಕ್ಕೆ ಏಕದಿನ ವಿಶ್ವಕಪ್‌ ಫೈನಲ್‌ನ ಸೋಲು ತೀರಿಸಿಕೊಳ್ಳುವ ಅವಕಾಶ ಕೂಡ ಇದೆ. ರೋಹಿತ್ ಪಡೆ ಆಸ್ಟ್ರೇಲಿಯಾಗಿಂತ ಬಲಿಷ್ಟವಾಗಿದೆ. ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನು ಮಣಿಸಿ ಗ್ರೂಪ್​ ಎನಲ್ಲಿ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ:DK ಶಿವಕುಮಾರ್​ಗೆ ಧರಿಸಿದ್ದ ಶಾಲೇ ಸಂಕಷ್ಟ.. ‘ಶಾಲು ಅಸ್ತ್ರ’ ಪ್ರಯೋಗಿಸಿದ ಬಿಜೆಪಿ, ಏನದು..

ಮಳೆ ವಿಲನ್ ಆಗಬಹುದು
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದೆ. ಪಂದ್ಯ ನಡೆಯುವ ಸ್ಥಳ ಸೇಂಟ್ ಲೂಸಿಯಾದಲ್ಲಿ ಇಂದು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಿನ್ನೆ ಕೂಡ ಧಾರಾಕಾರ ಮಳೆ ಸುರಿದಿದೆ. ಹವಾಮಾನ ವರದಿ ಪ್ರಕಾರ.. ಸೋಮವಾರವೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ಮಳೆಯಲ್ಲಿ ಕೊಚ್ಚಿಹೋದರೆ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಇತ್ತ ಅಫ್ಘಾನಿಸ್ತಾನ ಬಾಂಗ್ಲಾ ವಿರುದ್ಧ ಗೆದ್ದರೆ ಸುಲಭವಾಗಿ ಸೆಮಿಫೈನಲ್ ಪ್ರವೇಶ ಮಾಡಲಿದೆ.

Advertisment

ಇದನ್ನೂ ಓದಿ:ಹಿರಿಮಗ, ಕಿರಿಮಗ ಇಬ್ಬರೂ ಜೈಲಲ್ಲಿ.. ಸಂಕಷ್ಟಕ್ಕೆ ಸಿಲುಕಿದ ರೇವಣ್ಣ.. ಇಂದು ನಡೆಯಲಿದೆ ಮಹತ್ವದ ಬೆಳವಣಿಗೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment