newsfirstkannada.com

ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!

Share :

Published June 24, 2024 at 9:53am

    ಟಿ20 ವಿಶ್ವಕಪ್​ನಲ್ಲಿ ಮದಗಜಗಳ ಬಿಗ್ ಬ್ಯಾಟಲ್​​​​​​​​​​​​​​..!

    ಸೂಪರ್​-8 ಮ್ಯಾಚ್​ ಅಲ್ಲ.. ಇದು ಸೇಡಿನ ಸಮರ..!

    ಪ್ರತಿಷ್ಠೆಯ ಕಾಳಗದಲ್ಲಿ ಇಂದು ಯಾರಿಗೆ ವಿಜಯ..?

ವಿಶ್ವ ಕ್ರಿಕೆಟ್​ನ ಮದಗಜಗಳ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ನಾನಾ.. ನೀನಾ ಹೋರಾಟ ಆಟಗಾರರು ಪಣತೊಟ್ಟಿದ್ದಾರೆ. ನೂರಕ್ಕೆ ನೂರು ಈ ಮ್ಯಾಚ್ ಗೆಲ್ಲಲು ಆಸ್ಟ್ರೇಲಿಯಾ ಸನ್ನದ್ಧವಾಗಿದ್ರೆ. ಇತ್ತ ವೀರ ಸೇನಾನಿಗಳಂತೆ ಎದೆಯೊಡ್ಡಲು ಇಂಡಿಯನ್ ಕಲಿಗಳು ರೆಡಿಯಾಗಿದ್ದಾರೆ.

ಜಸ್ಟ್​ ಒಂದೇ ಹೆಜ್ಜೆ.. ಟೀಮ್ ಇಂಡಿಯಾ ಸೆಮೀಸ್​​ ಅಂಗಳಕ್ಕೆ ಹೆಜ್ಜೆ ಇಡಲು ಒಂದು ಹೆಜ್ಜೆ ಮಾತ್ರವೇ ಬಾಕಿಯಿದೆ. ಈ ಸೆಮೀಸ್ ಸಮರಕ್ಕೂ ಮುನ್ನವೇ ಬಿಗ್ ಬ್ಯಾಟಲ್​​ಗೆ ಟಿ20 ವಿಶ್ವಕಪ್ ವೇದಿಕೆಯಾಗ್ತಿದೆ. ಇಂಡೋ-ಆಸಿಸ್​ನ ರಣರೋಚಕ ಸೂಪರ್​​-8​​ ಫೈಟ್​ಗೆ ಕೌಂಟ್​ಡೌನ್​ ಶುರುವಾಗಿದ್ದು, ಸೆಂಟ್​ ಲೂಸಿಯಾದಲ್ಲಿ ನಡೆಯಲಿರುವ ಇಂದಿನ ಪಂದ್ಯ ಉಭಯ ತಂಡಗಳಿಗೆ ಪ್ರತಿಷ್ಠೆಯಾಗಿದೆ. ಇದಕ್ಕೆ ಕಾರಣ ಒಂದು ತಂಡಕ್ಕೆ ಇದು ಸೇಡಿನ ಸಮರವಾಗಿದ್ರೆ. ಮತ್ತೊಂದು ತಂಡಕ್ಕೆ ಸೆಮೀಸ್​​​​​​​​ಗೆ ಎಂಟ್ರಿ ನೀಡುವ ಪ್ರತಿಷ್ಠೆ. ಹೀಗಾಗಿಯೇ ಇಂದಿನ ಪ್ರತಿಷ್ಠೆಯ ಕಾಳಗದಲ್ಲಿ ಯಾರ್​ ಗೆಲ್ತಾರೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.

ಇದನ್ನು ಓದಿ:ಚಾರ್ಜ್​ಶೀಟ್ ಆದ್ಮೆಲೆ ದರ್ಶನ್​ಗೆ ಮತ್ತೊಂದು ಸಂಕಷ್ಟ.. ಸಿನಿಮಾ ಮಾಡೋರಿಗೂ ಆಘಾತಕಾರಿ ವಿಚಾರ..!

ಅಜೇಯ ಟೀಮ್ ಇಂಡಿಯಾಕ್ಕೆ ಪ್ರತೀಕಾರದ ಮ್ಯಾಚ್..!
ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಪಾರಮ್ಯ ಮೆರೆಯುತ್ತಿದೆ. ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದೆ. ಬ್ಯಾಟಿಂಗ್, ಬೌಲಿಂಗ್​, ಫೀಲ್ಡಿಂಗ್​ನಲ್ಲಿ ಜಬರ್ದಸ್ತ್​ ಪರ್ಫಾಮೆನ್ಸ್​ ನೀಡ್ತಿರುವ ರೋಹಿತ್ ಪಡೆ, ಬಹುತೇಕ ಸೆಮಿಫೈನಲ್ ಕನ್ಫರ್ಮ್​ ಮಾಡಿಕೊಂಡಿದೆ. ಹೀಗಾಗಿ ಟೀಮ್ ಇಂಡಿಯಾಗೆ ಇಂದಿನ ಪಂದ್ಯ ಔಪಚಾರಿವಾಗಿದ್ರೂ, ಭಾರೀ ಅಂತರದ ಸೋಲು ಕಾಣಬಾರದಷ್ಟೇ. ಹೀಗಾದ್ರೂ, ಆಸ್ಟ್ರೇಲಿಯಾ ಎದುರು ಟೀಮ್ ಇಂಡಿಯಾ ಪ್ರತೀಕಾರ ತೀರಿಸಿಕೊಳ್ಳುವ ಹಠದಲ್ಲಿದೆ. ಇದಕ್ಕೆ ಕಾರಣ ಆ ಮೂರು ಪ್ರಮುಖ ಸೋಲು..

2003ರ ಏಕದಿನ ವಿಶ್ವಕಪ್​ನಲ್ಲಿ ಸೋಲು
ಇಂದಿನ ಮ್ಯಾಚ್ ಸೇಡಿನ ಸಮರವಾಗಲು ಕಾರಣ, 2003ರ ಏಕದಿನ ವಿಶ್ವಕಪ್​ ಫೈನಲ್​, 2023ರಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಎದುರು ಅನುಭವಿಸಿರುವ ಮುಖಭಂಗಗಳಾಗಿವೆ. ಹೌದು! 2023ರ ಏಕದಿನ ವಿಶ್ವಕಪ್​ನಲ್ಲಿ ಸೋಲಿಲ್ಲದ ಸರದಾರನಾಗಿ ಫೈನಲ್​​ಗೆ ಎಂಟ್ರಿ ನೀಡಿದ್ದ ಟೀಮ್ ಇಂಡಿಯಾ, ತವರಿನಲ್ಲಿ ವಿಶ್ವಕಪ್​ ಜಯಿಸುವ ಮಹಾದಾಸೆ ಹೊಂದಿತ್ತು. ಆಸ್ಟ್ರೇಲಿಯಾ ಟ್ರೋಫಿ ಜಯಿಸುವ ಕನಸು ನುಚ್ಚುನೂರು ಮಾಡಿತ್ತು. 2023ರ ಜುಲೈನಲ್ಲಿ ನಡೆದಿದ್ದ ವಿಶ್ವ ಟೆಸ್ಟ್​ ಚಾಂಪಿಯನ್ ಶಿಫ್​ ಫೈನಲ್​​ನಲ್ಲೂ ಟೀಮ್ ಇಂಡಿಯಾ ಪಾಲಿಗೆ ವಿಲನ್ ಆಗಿತ್ತು.

ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ಬರ್ಬರ ಕೊಲೆ.. 17 ವರ್ಷದ ಬಾಲಕನ ತಲೆಗೆ ರಾಡ್​ನಿಂದ ಹೊಡೆದು ಹತ್ಯೆ..

2003ರ ಏಕದಿನ ವಿಶ್ವಕಪ್​ ಸೋಲಿನ ಅಪಮಾನಕ್ಕೂ ಲೆಕ್ಕಚುಕ್ತಾ ಮಾಡೋ ಶಪಥದಲ್ಲಿದೆ. ಆ ಮೂಲಕ ಒಂದು ಸೋಲಿನಿಂದ 3 ಪ್ರತೀಕಾರ ತೀರಿಸಿಕೊಳ್ಳುವ ಲೆಕ್ಕಚಾರದಲ್ಲಿದೆ. ಇದಕ್ಕಾಗಿ ಭಾರೀ ಗೇಮ್​ಪ್ಲಾನ್ ಹಾಗೂ ಸ್ಟ್ರಾಟರ್ಜಿಯನ್ನೇ ರೂಪಿಸಿದೆ.

ಅತಂತ್ರದ ಆಸ್ಟ್ರೇಲಿಯಾಗೆ ಗೆಲುವೊಂದೇ ಗುರಿ..!
ಲೀಗ್​ಸ್ಟೇಜ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ, ಬಾಂಗ್ಲಾ ಎದುರಿನ ಸೂಪರ್-8ನಲ್ಲೂ ಸುಲಭ ಗೆಲುವು ದಾಖಲಿಸಿತ್ತು. ಹೀಗಾಗಿ ಸೆಮಿಸ್​​ಗೆ ನಿರಾಶಾದಾಯಕವಾಗಿ ಎಂಟ್ರಿ ನೀಡುವ ಕನಸಿನಲ್ಲಿತ್ತು. ಆದ್ರೆ, ಅಫ್ಘನ್ ನೀಡಿದ ಶಾಕಿಂಗ್ ಟ್ರೀಟ್​ಮೆಂಟ್​​ಗೆ ಆಸ್ಟ್ರೇಲಿಯಾ ಮಕಾಡೆ ಮಲಗಿದೆ. ಹೀಗಾಗಿ ಸೂಪರ್​-8ನ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆದ್ರೆ, ಇದೇ ಸುವರ್ಣಾವಕಾಶ ಬಳಸಿಕೊಂಡು ಟೀಮ್ ಇಂಡಿಯಾ, ಆಸ್ಟ್ರೇಲಿಯಾದ ಸೆಮೀಸ್ ಕನಸು ಭಗ್ನಗೊಳಿಸುವ ಲೆಕ್ಕಚಾರದಲ್ಲಿದೆ.
ಇಂದಿನ ಸೂಪರ್-8 ಮ್ಯಾಚ್​ನಲ್ಲಿ ಬಲಿಷ್ಠರ ಕಾಳಗ ನಡೀಯುತ್ತಿದ್ದು, ಈ ಬಿಗ್​ ಬ್ಯಾಟಲ್​ನಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಅನ್ನೋದನ್ನ ಜಸ್ಟ್ ವೇಯ್ಟ್​ ಆ್ಯಂಡ್ ಸೀ..

ಇದನ್ನೂ ಓದಿ:ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು ಸಾಧ್ಯತೆ.. ಅಭಿಮಾನಿಗಳಿಂದ ಈಗಲೇ ಬೇಸರ.. ಕಾರಣ ಇಲ್ಲಿದೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!

https://newsfirstlive.com/wp-content/uploads/2024/06/DARSHAN-JAIL-5.jpg

Load More