/newsfirstlive-kannada/media/post_attachments/wp-content/uploads/2025/02/Kabali-producer-KP-Chowdary.jpg)
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾ ನಿರ್ಮಾಪಕ ಸುಂಕರ ಕೃಷ್ಣ ಪ್ರಸಾದ್ ಚೌಧರಿ ದುರಂತ ಅಂತ್ಯ ಕಂಡಿದ್ದಾರೆ. ಟಾಲಿವುಡ್‌ನಲ್ಲಿ ಕೆ.ಪಿ ಚೌಧರಿ ಎಂದೇ ಇವರು ಪ್ರಖ್ಯಾತರಾಗಿದ್ದರು.
2023ರಲ್ಲಿ ಕೆ.ಪಿ ಚೌಧರಿ ಅವರನ್ನು ಡ್ರಗ್ಸ್ ಕೇಸ್‌ನಲ್ಲಿ ಸೈಬರಾಬಾದ್ ಸ್ಪೆಷಲ್ ಆಪರೇಷನ್ ಟೀಮ್ ಬಂಧಿಸಿತ್ತು. ತನಿಖೆಯಲ್ಲಿ ಚೌಧರಿ ಅವರಿಗೆ ತೆಲುಗು, ತಮಿಳು ಚಿತ್ರರಂಗದಲ್ಲಿ ಹಲವು ಗ್ರಾಹಕರ ಸಂಪರ್ಕ ಇರೋದು ಗೊತ್ತಾಗಿತ್ತು. ಸಿನಿಮಾ ತಾರೆಯರು ಅಷ್ಟೇ ಅಲ್ಲದೇ ಕೆ.ಪಿ ಚೌಧರಿ ಅವರ ಡ್ರಗ್ಸ್ ಕೇಸ್‌ನಲ್ಲಿ ಹಲವು ಪ್ರಭಾವಿ ಉದ್ಯಮಿಗಳ ಹೆಸರು ಕೇಳಿ ಬಂದಿತ್ತು.
ಇದಾದ ಬಳಿಕ ನಿರ್ಮಾಪಕ ಕೆ.ಪಿ ಚೌಧರಿ ಅವರು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿದ್ದರು. ಸಿನಿಮಾ ರಂಗದಲ್ಲಿ ಬಹಳಷ್ಟು ಹಿನ್ನೆಡೆಯನ್ನು ಅನುಭವಿಸಿ ಡ್ರಗ್ಸ್ ಸೇವನೆ ಮತ್ತು ಸರಬರಾಜು ಮಾಡುವ ದಂಧೆಯಲ್ಲಿ ಸಿಲುಕಿದ್ದರು. ಗೋವಾದಲ್ಲಿ ಕೆ.ಪಿ ಚೌಧರಿ ಅವರು OHM ಹೆಸರಿನ ಪಬ್ ಒಂದನ್ನು ತೆರೆದಿದ್ದರು. ಹಲವಾರು ಸಿನಿಮಾ ತಾರೆಯರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪ ಕೆ.ಪಿ ಚೌಧರಿ ಅವರ ಮೇಲಿದೆ.
ನಿರ್ಮಾಪಕ ಕೆ.ಪಿ ಚೌಧರಿ ಅವರು ಕಬಾಲಿ ಸಿನಿಮಾದ ಬ್ಲಾಕ್ ಬಸ್ಟರ್‌ಗೆ ಕಾರಣವಾಗಿದ್ದು, ತೆಲುಗು ಚಿತ್ರರಂಗದ ವೀಕ್ಷಕರಿಗೆ ಬಹುದೊಡ್ಡ ಬಳುವಳಿಯನ್ನು ನೀಡಿದ್ದರು. ಸದ್ಯಕ್ಕೆ ಕೆ.ಪಿ ಚೌಧರಿ ಗೋವಾದಲ್ಲಿ ಸಾವಿಗೆ ಶರಣಾಗಿದ್ದಾರೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ