newsfirstkannada.com

ಕೊನೆಗೂ ಫ್ಯಾನ್ಸ್​​ಗೆ ಗುಡ್​ನ್ಯೂಸ್ ಕೊಟ್ಟ ತಲೈವಾ​; 171ನೇ ಸಿನಿಮಾದ ಟೈಟಲ್, ಟೀಸರ್ ಹೇಗಿದೆ ಗೊತ್ತಾ?

Share :

Published April 22, 2024 at 6:36pm

Update April 22, 2024 at 7:42pm

  ಇಂದು ಸಂಜೆ 6 ಗಂಟೆಗೆ ಬಿಡುಗಡೆಯಾದ ಸೂಪರ್​ ಸ್ಟಾರ್​ 171 ಚಿತ್ರದ ಟೀಸರ್​

  ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿ ಬಂದ ‘ಕೂಲಿ’

  ರಜನಿಕಾಂತ್​ರ 171 ಚಿತ್ರದ ಅಪ್‌ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್​

ಸೂಪರ್​ ಸ್ಟಾರ್​ ರಜನಿಕಾಂತ್ ಅವರ ಸಿನಿಮಾಗಳು ಎಂದರೆ ಜನರಿಗೆ ಸಖತ್ ಇಷ್ಟ. ಥಿಯೇಟರ್​ಗಳಲ್ಲಿ ಅವರ ಆಭಿಮಾನಿಗಳಂತೂ ರಜನಿಯವರ ಸ್ಟೈಲ್, ಡೈಲಾಗ್​ಗೆ ಕುಣಿದು ಕುಪ್ಪಳಿಸುತ್ತಿರುತ್ತಾರೆ. ಕಳೆದ ವರ್ಷ ‘ಜೈಲರ್’ ಮೂವಿಯಲ್ಲಿ ಸಖತ್ ಮಾಸ್​ ಆಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್.. ತನಿಖೆಯಲ್ಲಿ ಅಸಲಿ ಕಾರಣ ಬಹಿರಂಗ; ಸತ್ಯ ಗೊತ್ತಾದ್ರೆ ಶಾಕ್ ಆಗ್ತೀರಾ!

ಇಷ್ಟು ದಿನ ರಜನಿಕಾಂತ್ ಅವರ 171 ಚಿತ್ರದ ಅಪ್‌ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಸಖತ್​ ಥ್ರಿಲ್​ ಆಗುವ ಹಾಗೇ ಟೈಟಲ್ ಟೀಸರ್​ ಅನ್ನು ರಿಲೀಸ್​ ಮಾಡಿದ್ದಾರೆ. ಹೌದು, ತಲೈವಾ 171ರ ಟೈಟಲ್ ರಿವೀಲ್‌ಗಾಗಿ ಕಾತರದಿಂದ ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ. ಇಂದು ಸಂಜೆ 6 ಗಂಟೆಗೆ ರಜನಿಕಾಂತ್ ಅವರ 171 ಚಿತ್ರಕ್ಕೆ ಕೂಲಿ ಎಂದು ಟೈಟಲ್ ಇಡಲಾಗಿದೆ. ಇದೀಗ ಕೂಲಿ ಟೈಟಲ್​ ಟೀಸರ್ ಬಿಡುಗಡೆಯಾಗಿದೆ.

ಬ್ಯಾಕ್ ಟು ಬ್ಯಾಕ್ ಬ್ಲಾಕ್‌ ಬಸ್ಟರ್‌ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ನಿರ್ದೇಶನದಲ್ಲಿ ಜೊತೆಗೆ  ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಇನ್ನು ಈ 171ನೇ ಸಿನಿಮಾದ ಟೈಟಲ್ ಟೀಸರ್ ನೋಡಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಇದೀಗ 171ನೇ ಸಿನಿಮಾದ ಮೂಲಕ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ. ಸದ್ಯ ಟೀಸರ್ ಮೂಲಕವೇ ಈ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟಾಗಿದೆ. ತಲೈವಾನನ್ನು ಹೊಸ ಲುಕ್​ನಲ್ಲಿ ಕಣ್ತುಂಬಿಕೊಂಡ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೂಲಿ ಟೈಟಲ್​ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಫ್ಯಾನ್ಸ್​​ಗೆ ಗುಡ್​ನ್ಯೂಸ್ ಕೊಟ್ಟ ತಲೈವಾ​; 171ನೇ ಸಿನಿಮಾದ ಟೈಟಲ್, ಟೀಸರ್ ಹೇಗಿದೆ ಗೊತ್ತಾ?

https://newsfirstlive.com/wp-content/uploads/2024/04/rajanikatha.jpg

Load More