ಸೂಪರ್‌ಸ್ಟಾರ್​​ನನ್ನೇ ಶಾಲೆಗೆ ಕರೆದುಕೊಂಡು ಹೋದ ಮೊಮ್ಮಗ; ತಲೈವಾನನ್ನು ನೋಡಿ ಪುಟಾಣಿ ಫುಲ್ ಶಾಕ್​

author-image
Veena Gangani
Updated On
ಸೂಪರ್‌ಸ್ಟಾರ್​​ನನ್ನೇ ಶಾಲೆಗೆ ಕರೆದುಕೊಂಡು ಹೋದ ಮೊಮ್ಮಗ; ತಲೈವಾನನ್ನು ನೋಡಿ ಪುಟಾಣಿ ಫುಲ್ ಶಾಕ್​
Advertisment
  • ಶಾಲೆಗೆ ಹೋಗುವುದಿಲ್ಲ ಅಂತ ಹಠ ಮಾಡುತ್ತಿದ್ದ ಮೊಮ್ಮಗ ವೀರ್
  • ಬ್ಯೂಸಿ ನಡುವೆಯೂ ಮೊಮ್ಮಗನನ್ನು ಶಾಲೆಗೆ ಬಿಟ್ಟ ತಲೈವಾ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ಫೋಟೋ

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾ ಬ್ಲಾಕ್‌ಬಸ್ಟರ್ ಆದ ಬಳಿಕ ಖ್ಯಾತ ನಿರ್ದೇಶಕ ಜ್ಞಾನವೇಲ್ ನಿರ್ದೇಶನದ ವೇಟ್ಟೈಯನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಸಿನಿಮಾ ಬ್ಯೂಸಿ ನಡುವೆಯೂ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಮುದ್ದಾಗ ಮೊಮ್ಮಗ ಜೊತೆ ಶಾಲೆಗೆ ಹೋಗಿದ್ದಾರೆ.

publive-image

ಇದನ್ನೂ ಓದಿ:ಜಸ್ಟ್‌ 20 ನಿಮಿಷ.. ತನಿಷ್ಕಾ ಶೋ ರೂಮ್​ಗೆ ನುಗ್ಗಿದ ದರೋಡೆ ಗ್ಯಾಂಗ್‌; ಕೊಳ್ಳೆ ಹೊಡೆದಿದ್ದು ಎಷ್ಟು ಕೋಟಿ?

ಹೌದು, ಶಾಲೆಗೆ ಹೋಗಲು ಕಷ್ಟಪಡುತ್ತಿದ್ದ ಮೊಮ್ಮಗನನ್ನು ಖುದ್ದು ರಜನಿಕಾಂತ್ ಅವರೇ ಕ್ಯಾಬ್​ನಲ್ಲಿ ಹೋಗಿ ಬಿಟ್ಟು ಬಂದಿದ್ದಾರೆ. ರಜನಿಕಾಂತ್ ಅವರ ಕಿರಿಯ ಮಗಳು ಸೌಂದರ್ಯ ರಜನಿಕಾಂತ್ ಅವರ ಮಗ ವೀರ್.​ ಮೊಮ್ಮಗ ಶಾಲೆಗೆ ಹೋಗುವುದಿಲ್ಲ ಅಂತ ಹಠ ಮಾಡುತ್ತಿದ್ದ ಅಂತ ರಜನಿಕಾಂತ್ ಅವರೇ ಕಾರಿನಲ್ಲಿ ಕರೆದುಕೊಂಡು ಹೋಗಿ ನೇರವಾಗಿ ತರಗತಿಗೆ ಬಿಟ್ಟಿದ್ದಾರೆ.

ಇನ್ನು, ನೇರವಾಗಿ ಮೊಮ್ಮಗನ ಜೊತೆಗೆ ತರಗತಿಗೆ ಎಂಟ್ರಿ ಕೊಟ್ಟ ರಜನಿಕಾಂತ್ ಅವರನ್ನು ನೋಡಿದ ಮುದ್ದಾದ ವಿದ್ಯಾರ್ಥಿಗಳು ಫುಲ್ ಶಾಕ್​ ಅಂಡ್ ಸರ್ಪೈಸ್ ಆಗಿದ್ದಾರೆ. ಇದೇ ಫೋಟೋವನ್ನು ಸೌಂದರ್ಯ ರಜನಿಕಾಂತ್ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ನನ್ನ ಮಗನಿಗೆ ಇಂದು ಬೆಳಿಗ್ಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಸೂಪರ್ ಹೀರೋ ಅಜ್ಜ ಅವನನ್ನು ಶಾಲೆಗೆ ಕರೆದೊಯ್ದರು ಅಂತ ಬರೆದುಕೊಂಡಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅದರಲ್ಲೂ ಫೋಟೋದಲ್ಲಿ ತಲೈವಾರನ್ನು ನೋಡಿದ ಪುಟಾಣಿ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದು ನೆಟ್ಟಿಗರು ಗಮನ ಸೆಳೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment