/newsfirstlive-kannada/media/post_attachments/wp-content/uploads/2025/05/darshan18.jpg)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಇದನ್ನೂ ಓದಿ:ನಟ ದರ್ಶನ್ ಟೀ ಶರ್ಟ್ ಸಿಕ್ಕಾಪಟ್ಟೆ ದುಬಾರಿ; ಅದರ ರೇಟ್ ಎಷ್ಟು? ಪವಿತ್ರಾ ಗೌಡ ಕೇಳಿದ್ದೇನು?
ಹೀಗಾಗಿ ನಿನ್ನೆ ಆರೋಪಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 16 ಮಂದಿ ಆರೋಪಿಗಳು ಮಂಗಳವಾರ ಸಿಸಿಎಚ್ 57ನೇ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿದ್ದರು. ಹಾಜರಾತಿ ದಾಖಲಿಸಿಕೊಂಡು ನ್ಯಾಯಾಲಯ ಜುಲೈ 10ಕ್ಕೆ ವಿಚಾರಣೆ ಮುಂದೂಡಿತು. ಆದ್ರೇ ಇದೀಗ ನಟ ದರ್ಶನ್ ಜಾಮೀನು ಅರ್ಜಿ ರದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಇಂದು ಅರ್ಜಿ ಮುಂದೂಡಿಕೆ ಮಾಡಲಾಗಿದೆ.
ನ್ಯಾಯಮೂರ್ತಿ ಪರ್ದೀವಾಲ ಪೀಠದಿಂದ ಈ ಆದೇಶ ಹೊರಡಿಸಲಾಗಿದೆ. ಮೇ 26ರಿಂದ ಸುಪ್ರೀಂ ಕೋರ್ಟ್ಗೆ ಬೇಸಿಗೆ ರಜೆ ಶುರುವಾಗಲಿದೆ. ಹೋಗಾಗಿ ಜುಲೈ 13ರ ತನಕ ಸುಪ್ರೀಂ ಕೋರ್ಟ್ಗೆ ರಜೆ ಇರಲಿದೆ. ಈ ಹಿಂದೆ 262 ಸಾಕ್ಷಿಗಳಿದ್ದ ಪಟ್ಟಿಗೆ ಈಗ 10 ಹೆಚ್ಚುವರಿ ಸಾಕ್ಷಿದಾರರ ಹೇಳಿಕೆಗಳನ್ನು ಸೇರಿಸಲಾಗಿದೆ.
ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ವಿಚಾರಣೆಯನ್ನು ಜುಲೈ 13ರ ತನಕ ಸುಪ್ರೀಂ ಕೋರ್ಟ್ಗೆ ರಜೆ ಇರುವುದರಿಂದ ವಿಚಾರಣೆ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ