ಪತ್ನಿ ಜೀವ ತೆಗೆದಿದ್ದ ಕೇಸ್​​​; ಆಪರೇಷನ್ ಸಿಂಧೂರ್​ನಲ್ಲಿ ಭಾಗಿ ಆದ್ರೂ ರಿಲೀಫ್ ನೀಡಲ್ಲ- ಸುಪ್ರೀಂ ಕೋರ್ಟ್

author-image
Bheemappa
ಪತ್ನಿ ಜೀವ ತೆಗೆದಿದ್ದ ಕೇಸ್​​​; ಆಪರೇಷನ್ ಸಿಂಧೂರ್​ನಲ್ಲಿ ಭಾಗಿ ಆದ್ರೂ ರಿಲೀಫ್ ನೀಡಲ್ಲ- ಸುಪ್ರೀಂ ಕೋರ್ಟ್
Advertisment
  • ಬ್ಲ್ಯಾಕ್ ಕ್ಯಾಟ್ ಕಮ್ಯಾಂಡೋಗೆ ಖಡಕ್​ ಆಗಿ ಹೇಳಿದ ನ್ಯಾಯಾಲಯ
  • ಪಹಲ್ಗಾಮ್ ದಾಳಿ ಪ್ರತಿಯಾಗಿ ಪಾಕ್​ ವಿರುದ್ಧದ ಆಪರೇಷನ್ ಸಿಂಧೂರ್
  • ಬ್ಲ್ಯಾಕ್ ಕ್ಯಾಟ್ ಕಮ್ಯಾಂಡೋ ಹೆಂಡತಿ ಜೀವ ತೆಗೆದಿರುವುದು ಯಾಕೆ?

ವರದಕ್ಷಿಣೆ ಕಿರುಕುಳ ನೀಡಿ ತನ್ನ ಪತ್ನಿಯ ಜೀವ ತೆಗೆದ ಆರೋಪ ಹೊತ್ತಿರುವ ಬ್ಲ್ಯಾಕ್ ಕ್ಯಾಟ್ ಕಮಾಂಡೋಗೆ ಪ್ರಕರಣದಲ್ಲಿ ವಿನಾಯಿತಿ ನೀಡಲು ಸುಪ್ರೀಂಕೋರ್ಟ್ ಇಂದು (ಜೂನ್ 24) ನಿರಾಕರಿಸಿದೆ. ಪಹಲ್ಗಾಮ್ ದಾಳಿ ನಡೆಸಿದ ಪಾಕಿಸ್ತಾನದ ಉಗ್ರರ ವಿರುದ್ಧ ನಡೆದ ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ನಾನು ಭಾಗವಹಿಸಿದ್ದೇನೆ. ದೇಶದ ಪರವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ ಕಮ್ಯಾಂಡೋಗೆ ರಿಲೀಫ್ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಆಪರೇಷನ್ ಸಿಂಧೂರ್​ನಲ್ಲಿ ಭಾಗವಹಿಸಿದ ಕಾರಣಕ್ಕಾಗಿ ನಿಮಗೆ ಪ್ರಕರಣದಲ್ಲಿ ರೀಲೀಫ್ ನೀಡಲಾಗಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಬ್ಲಾಕ್ ಕ್ಯಾಟ್ ಕಮ್ಯಾಂಡೋ ಒಬ್ಬರು ತಮ್ಮ ವಿರುದ್ಧದ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಜೀವ ತೆಗೆದಿದ್ದ ಆರೋಪದ ಕೇಸ್​ನಲ್ಲಿ ಪೊಲೀಸರ ಎದುರು ಶರಣಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಸುಪ್ರೀಂಕೋರ್ಟ್​​ನ ಜಸ್ಟೀಸ್ ಉಜ್ವಲ್ ಭುಯಾನ್, ಜಸ್ಟೀಸ್ ವಿನೋದ್ ಚಂದ್ರನ್ ಅವರ ಪೀಠ ಇಂದು ವಿಚಾರಣೆ ನಡೆಸಿತು.

ಇದನ್ನೂ  ಓದಿ:ಇಬ್ಬರು ವ್ಯಕ್ತಿಗಳಿಗೆ ಭಾರೀ ಅವಮಾನ.. ಬಾಯಲ್ಲಿ ಹುಲ್ಲು, ಅರ್ಧ ತಲೆ ಬೋಳಿಸಿ ಹಿಂಸೆ!

publive-image

ನಾನು ಆಪರೇಷನ್ ಸಿಂಧೂರ್​ನಲ್ಲಿ ಭಾಗವಹಿಸಿದ್ದೇನೆ. ಬ್ಲ್ಯಾಕ್ ಕ್ಯಾಟ್ ಕಮ್ಯಾಂಡೋ ಎಂದು ಅರ್ಜಿದಾರರು ವಾದಿಸಿದ್ದರು. ನೀವು ಬ್ಲ್ಯಾಕ್ ಕ್ಯಾಟ್ ಕಮ್ಯಾಂಡೋ ಆಗಿದ್ದರೂ, ಈ ಕೇಸ್​​ನಲ್ಲಿ ವಿನಾಯತಿ ನೀಡಲು ಆಗುವುದಿಲ್ಲ. ನೀವು ದೈಹಿಕವಾಗಿ ಎಷ್ಟು ಫಿಟ್ ಆಗಿದ್ದೀರಿ. ನೀವು ಒಬ್ಬರೇ ನಿಮ್ಮ ಪತ್ನಿಯ ಕುತ್ತಿಗೆ ಹಿಸುಕಲು ಸಾಧ್ಯ ಎಂದು ಸುಪ್ರೀಂಕೋರ್ಟ್ ಹೇಳಿತು. ಇದು ನಿಮಗೆ ವಿನಾಯಿತಿ ನೀಡುವ ಪ್ರಕರಣವಲ್ಲ ಎಂದು ಸುಪ್ರೀಂಕೋರ್ಟ್ ಕಡ್ಡಿ ಮುರಿದಂತೆ ಹೇಳಿದೆ.

ಬ್ಲ್ಯಾಕ್ ಕ್ಯಾಟ್ ಕಮ್ಯಾಂಡೋ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಹತ್ಯೆಗೈದ ಆರೋಪದಡಿ ಐಪಿಸಿ ಸೆಕ್ಷನ್ 304 ಬಿ ಅಡಿಯಲ್ಲಿ ಕೇಸ್ ದಾಖಲಾಗಿದೆ. ಬ್ಲ್ಯಾಕ್ ಕ್ಯಾಟ್ ಕಮ್ಯಾಂಡೋ, ತನಗೆ ವರದಕ್ಷಿಣೆಯಾಗಿ ಬೈಕ್ ಬೇಕೆಂದು ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮುಂದೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪತ್ನಿಯ ಇಬ್ಬರು ಸಂಬಂಧಿಕರು ಸಾಕ್ಷಿಗಳಾಗಿದ್ದಾರೆ.

ಬ್ಲ್ಯಾಕ್ ಕ್ಯಾಟ್ ಕಮ್ಯಾಂಡೋ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷಮ್​ಗೆ ಸುಪ್ರೀಂಕೋರ್ಟ್ ನೋಟೀಸ್ ನೀಡಿದೆ. ನೋಟೀಸ್​ಗೆ 6 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಕೊನೆಗೆ ಬ್ಲ್ಯಾಕ್ ಕ್ಯಾಟ್ ಕಮ್ಯಾಂಡೋ ಪರ ವಕೀಲರು ಪೊಲೀಸರ ಎದುರು ಶರಣಾಗಲು ಸ್ಪಲ್ಪ ಸಮಯ ಅವಕಾಶ ನೀಡಬೇಕೆಂದು ಕೋರಿದ್ದರಿಂದ, ಶರಣಾಗಲು 2 ವಾರಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment