newsfirstkannada.com

ರೋಹಿಣಿ ಸಿಂಧೂರಿ, ಡಿ ರೂಪಾಗೆ ಸುಪ್ರೀಂ ಕೋರ್ಟ್ ಕ್ಲಾಸ್​; ಪ್ರಕರಣ ಇತ್ಯರ್ಥಕ್ಕೆ ಸೂಚನೆ 

Share :

Published May 8, 2024 at 8:35am

Update May 8, 2024 at 8:50am

    ಇಬ್ಬರು ಒಳ್ಳೆಯ ಸ್ಥಾನದಲ್ಲಿರುವ ಸಾರ್ವಜನಿಕ ಅಧಿಕಾರಿಗಳು

    ರೋಹಿಣಿ, ಡಿ.ರೂಪಾ ನಡುವಿನ ಜಗಳ ಸಂಚಲ ಮೂಡಿಸಿತ್ತು

    ರೋಹಿಣಿ ವಿರುದ್ಧದ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್

ಬೆಂಗಳೂರು: ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ನಡುವಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಬುದ್ಧಿವಾದ ಹೇಳಿ ಕೇಸ್ ಇತ್ಯರ್ಥ ಮಾಡಿಕೊಳ್ಳುವಂತೆ ಸಲಹೆ ನೀಡಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಜಟಾಪಟಿ ಪ್ರಕರಣದ ಕೇಸ್ ಅನ್ನು ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸಿದೆ. ಸುಪ್ರೀಂ ಕೋರ್ಟ್​​ನ ನ್ಯಾಯಮೂರ್ತಿ ಅಭಯ್.ಎಸ್. ಓಕಾ ನೇತೃತ್ವದ ದ್ವಿಸದಸ್ಯ ಪೀಠ ಪ್ರಕರಣವನ್ನು ಆಲಿಸಿದೆ. ಇಬ್ಬರು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು. ಅಂತಹ ನಡವಳಿಕೆಗಳನ್ನ ಮುಂದುವರಿಸಬಾರದು. ಇಬ್ಬರು ಯುವ ಅಧಿಕಾರಿಗಳು ಆಗಿದ್ದೀರಿ, ಮುಂದೆ ಒಳ್ಳೆಯ ಭವಿಷ್ಯವಿದೆ. ಇಬ್ಬರ ನಡುವಿನ ಹೋರಾಟ ಮುಂದುವರೆದರೆ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಪೀಠ ಬುದ್ಧಿವಾದ ಹೇಳಿದೆ.

ಇದನ್ನೂ ಓದಿ: ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್​ನಲ್ಲಿ ಮೊಬೈಲ್ ಇಟ್ಟು ವಿಡಿಯೋ.. ಅಪ್ರಾಪ್ತ ಅರೆಸ್ಟ್​

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ

ಇಬ್ಬರು ಒಪ್ಪಿಗೆ ಸೂಚಿಸಿ ಅರ್ಜಿ ವಾಪಸ್ ಪಡೆದರೆ ವ್ಯಾಜ್ಯ ಇತ್ಯರ್ಥವಾಗಲಿದೆ. ಪರಸ್ಪರ ಆರೋಪಗಳನ್ನು ಮಾಡುವುದು ಬಿಟ್ಟು ಕೇಸ್ ಅನ್ನು ಇತ್ಯರ್ಥ ಮಾಡಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಿ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್.ಎಸ್. ಓಕಾ ನೇತೃತ್ವದ ದ್ವಿಸದಸ್ಯ ಪೀಠ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿಣಿ ಸಿಂಧೂರಿ, ಡಿ ರೂಪಾಗೆ ಸುಪ್ರೀಂ ಕೋರ್ಟ್ ಕ್ಲಾಸ್​; ಪ್ರಕರಣ ಇತ್ಯರ್ಥಕ್ಕೆ ಸೂಚನೆ 

https://newsfirstlive.com/wp-content/uploads/2024/05/ROHINI_SINDHURI_ROOPA_NEW.jpg

Load More