ನ್ಯಾಯಾಲಯದಲ್ಲಿ ಉದ್ಯೋಗ ಅವಕಾಶ.. 241 ಸರ್ಕಾರಿ ಕೆಲಸಗಳಿಗೆ ಇಂದಿನಿಂದ ಅರ್ಜಿ ಆರಂಭ

author-image
Bheemappa
Updated On
ಕರ್ನಾಟಕ ಲೋಕಸೇವಾ ಆಯೋಗ; ಹುದ್ದೆಗಳ ನೇಮಕಾತಿ.. ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ
Advertisment
  • ಉದ್ಯೋಗಕ್ಕೆ ಆಯ್ಕೆ ಆದರೆ ಸರ್ಕಾರದಿಂದ ಉತ್ತಮ ಸಂಬಳ
  • ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ಅರ್ಜಿ ಶುಲ್ಕದ ಮಾಹಿತಿ ಇಲ್ಲಿದೆ
  • ಈ ಕೋರ್ಸ್​ ಮಾಡಿದವರು ಹುದ್ದೆಗಳಿಗೆ ಅಪ್ಲೇ ಮಾಡಬಹುದು

ದೇಶದ ಪ್ರತಿಷ್ಠಿತ ನ್ಯಾಯಾಲಯ ಸುಪ್ರೀಂ ಕೋರ್ಟ್​ನಲ್ಲಿ ಕೆಲಸ ಮಾಡಲು ಇಚ್ಚೀಸುವವರಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ಸುಪ್ರೀಂ ಕೋರ್ಟ್​ ಆಫ್ ಇಂಡಿಯಾ ಹೊಸ ಉದ್ಯೋಗಗಳನ್ನು ನೇಮಕ ಮಾಡಲು ಮುಂದಾಗಿದ್ದು ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಿದೆ. ಉದ್ಯೋಗಕ್ಕಾಗಿ ಹುಡುಕುತ್ತಿರುವವರು ನ್ಯಾಯಾಲಯದ ಕೆಲಸಗಳಿಗೆ ಪ್ರಯತ್ನ ಮಾಡಬಹುದು.

ನ್ಯಾಯಾಲಯವು ಈಗಾಗಲೇ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಹತೆ, ಪರೀಕ್ಷೆ, ಅರ್ಜಿ ಶುಲ್ಕ, ಅಗತ್ಯವಿರುವ ದಾಖಲೆ, ವಯಸ್ಸಿನ ಮಿತಿ, ಹೀಗೆ ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಲಿಂಕ್ ಕೂಡ ನಮೂದು ಮಾಡಲಾಗಿದೆ. ಜೊತೆಗೆ ಸಂಪೂರ್ಣ ಮಾಹಿತಿಯು ಇದೆ. ಹೀಗಾಗಿ ಈ ಆರ್ಟಿಕಲ್​ ಅನ್ನು ಪೂರ್ಣವಾಗಿ ಮನನ ಮಾಡಿಕೊಳ್ಳಿ.

ಮಾಸಿಕ ವೇತನ ಎಷ್ಟು?
72,040 ರೂಪಾಯಿ

ಉದ್ಯೋಗದ ಹೆಸರು
ಕಿರಿಯ ನ್ಯಾಯಾಲಯದ ಸಹಾಯಕ (Junior Court Assistant)

ಒಟ್ಟು 241 ಉದ್ಯೋಗಗಳು ಖಾಲಿ ಇವೆ

ಇದನ್ನೂ ಓದಿ:NHAI ಇಂದ ಉದ್ಯೋಗ ಆಹ್ವಾನ.. ಆಯ್ಕೆಯಾದ ಅದೃಷ್ಟವಂತ ಅಭ್ಯರ್ಥಿಗಳಿಗೆ ಕೈ ತುಂಬಾ ಸಂಬಳ

publive-image

ವಿದ್ಯಾರ್ಹತೆ
ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
ಇಂಗ್ಲಿಷ್ ಟೈಪಿಂಗ್ ಸ್ಪೀಡ್ 35 ಡಬ್ಲು.ಪಿ.ಎಂ
ಕಂಪ್ಯೂಟರ್ ಜ್ಞಾನ ಇರಬೇಕು

ವಯೋಮಿತಿ
18 ರಿಂದ 30 ವರ್ಷಗಳು

ಅರ್ಜಿ ಶುಲ್ಕ ಎಷ್ಟು ಇದೆ?

  • ಜನರಲ್, ಒಬಿಸಿ, ಇಡಬ್ಲುಎಸ್- 1000 ರೂಪಾಯಿ
  • ಎಸ್​ಸಿ, ಎಸ್​​ಟಿ, ಮಾಜಿ ಸೈನಿಕ- 250 ರೂಪಾಯಿ
  • ಆನ್​ಲೈನ್ ಮೂಲಕ ಹಣ ಪಾವತಿ ಮಾಡಬೇಕು

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ (100 ಪ್ರಶ್ನೆಗಳು)
  • ಕಂಪ್ಯೂಟರ್ ಜ್ಞಾನ Objective Type Test (25 ಪ್ರಶ್ನೆಗಳು)
  • ಕಂಪ್ಯೂಟರ್ ಟೈಪಿಂಗ್ (35 ಡಬ್ಲು.ಪಿ.ಎಂ )
  • ಡಿಸ್ಕ್ರಿಪ್ಟಿವ್ ಟೈಪ್ ಪೇಪರ್ (Descriptive Test)

ಇಂಪಾರ್ಟೆಂಟ್ ದಿನಾಂಕ
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 05 ಫೆಬ್ರುವರಿ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 03 ಮಾರ್ಚ್ 2025

ಅರ್ಜಿ ಸಲ್ಲಿಕೆಗೆ ಲಿಂಕ್-
https://cdn3.digialm.com/EForms/configuredHtml/32912/92214/Registration.html

ಸಂಪೂರ್ಣ ಮಾಹಿತಿಗಾಗಿ-
https://cdnbbsr.s3waas.gov.in/s3ec0490f1f4972d133619a60c30f3559e/uploads/2025/02/2025020434.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment