ಥಗ್ ಲೈಫ್ ಚಿತ್ರಕ್ಕೆ ಅಡ್ಡಿಪಡಿಸಿದ್ರೆ ಕ್ರಮಕೈಗೊಳ್ಳಿ ಎಂದ ಸುಪ್ರೀಂ; ವಾದ-ಪ್ರತಿವಾದ ಹೇಗಿತ್ತು..?

author-image
Ganesh
Updated On
ಥಗ್ ಲೈಫ್ ಚಿತ್ರಕ್ಕೆ ಅಡ್ಡಿಪಡಿಸಿದ್ರೆ ಕ್ರಮಕೈಗೊಳ್ಳಿ ಎಂದ ಸುಪ್ರೀಂ; ವಾದ-ಪ್ರತಿವಾದ ಹೇಗಿತ್ತು..?
Advertisment
  • ಕರ್ನಾಟಕ ಸರ್ಕಾರದ ನಿಲುವು ಅಭಿನಂದಿಸಿದ ಕೋರ್ಟ್
  • ಕಮಲ್ ಹಾಸನ್ ಕ್ಷಮೆ ಕೇಳಲು ಪತ್ರ ಬರೆದಿಲ್ಲ-ಫಿಲಂ ಚೇಂಬರ್
  • ಬೇಕಿದ್ದರೆ ಕೇಸ್ ಹಾಕಿ, ಕಾನೂನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ-ಸುಪ್ರೀಂ

ಕರ್ನಾಟಕದಲ್ಲಿ ಯಾರಾದರೂ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅಡ್ಡಿ ಮಾಡಿದ್ರೆ ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ಇವತ್ತು( ಜೂನ್ 19) ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೇಳಿದೆ. ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸಿನಿಮಾ ಬಿಡುಗಡೆ ಮಾಡಿದ್ರೆ ಕರ್ನಾಟಕದಲ್ಲಿ ಸೂಕ್ತ ರಕ್ಷಣೆ ನೀಡುತ್ತೇವೆ ಅಂತ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಅಫಿಡವಿಟ್ ಮೂಲಕ ತಿಳಿಸಿದೆ.

ಇದನ್ನೂ ಓದಿ: ಬುಮ್ರಾ ಸ್ಥಾನ ತುಂಬುವ ಶಕ್ತಿ ಇರೋದು ಕನ್ನಡಿಗನಿಗೆ ಮಾತ್ರ.. ಟ್ರಬಲ್​​​ನಲ್ಲಿರೋ ತಂಡಕ್ಕೆ ದೊಡ್ಡ ಭರವಸೆ

publive-image

ಕರ್ನಾಟಕ ರಾಜ್ಯ ಸರ್ಕಾರವು ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್‌ಗೆ ಹೇಳಿರುವ ನಿಲುವಿಗೆ ಬದ್ಧವಾಗಿರಲಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಕೂಡ ತನ್ನ ಹೇಳಿಕೆಗೆ ಬದ್ಧವಾಗಿರಲಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್​ನಲ್ಲಿ ಇಂದು ಥಗ್ ಲೈಫ್ ಸಿನಿಮಾ ನಿರ್ಮಾಪಕರು ರಾಜ್ಯ ಸರ್ಕಾರದ ಅಫಿಡವಿಟ್​ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವಿಷಯ ಮುಂದುವರಿಸುವ ಅಗತ್ಯವಿಲ್ಲ ಅಂತ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಿನಿಮಾದ ನಿರ್ಮಾಪಕರು, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ.

ಸುಪ್ರೀಂಕೋರ್ಟ್​ನಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ವಿವಾದ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಸುಪ್ರೀಂ ಕೋರ್ಟ್, ಕರ್ನಾಟಕ ಸರ್ಕಾರವು ಅಫಿಡವಿಟ್​ನಲ್ಲಿ ತೆಗೆದುಕೊಂಡ ನಿಲುವಿಗೆ ಅಭಿನಂದನೆ ತಿಳಿಸಿತು. ಸುಪ್ರೀಂ ಕೋರ್ಟ್​ನಲ್ಲಿ ಇಂದು ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಿದರೆ ನಾವು ರಕ್ಷಣೆ ನೀಡುತ್ತೇವೆ ಎಂದ ರಾಜ್ಯ ಸರ್ಕಾರದ ಪರ ವಕೀಲರು ಹೇಳಿದರು.

ನಾವು ಕಮಲ್ ಹಾಸನ್ ಕ್ಷಮೆ ಕೇಳುವಂತೆ ಯಾವುದೇ ಪತ್ರ ಬರೆದಿಲ್ಲ ಅಂತ ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ಪರ ವಕೀಲರು ಸುಪ್ರೀಂ ಕೋರ್ಟ್​ಗೆ ತಿಳಿಸಿದರು. ಕಮಲ್ ಹಾಸನ್ ಅವರ ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಹೇಳಿಕೆಗೆ ದೊಡ್ಡ ಮಟ್ಟದಲ್ಲಿ ಕರ್ನಾಟಕದಲ್ಲಿ ಪ್ರತಿಭಟನೆಯಾಗಿದೆ ಅಂತ ಫಿಲಂ ಚೇಂಬರ್ ಪರ ವಕೀಲರು ವಾದಿಸಿದರು.

ಇದನ್ನೂ ಓದಿ: ಶಿವಣ್ಣ ಸಿನಿ ಜರ್ನಿಗೆ 40 ವರುಷ ತುಂಬಿದ ಸಂಭ್ರಮ.. ಕನ್ನಡದಲ್ಲೇ ಶುಭ ಹಾರೈಸಿದ ಕಮಲ್ ಹಾಸನ್..!

publive-image

ಬರೀ ಹೇಳಿಕೆಯ ಕಾರಣಕ್ಕಾಗಿ ಸಿನಿಮಾ ಬಿಡುಗಡೆಗೆ ತಡೆ ಸರಿಯಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿತು. ಸಿನಿಮಾ ಬಿಡುಗಡೆಗೂ ಮುನ್ನ ಈ ರೀತಿ ಹೇಳಿಕೆಯು ಮಾರ್ಕೆಟಿಂಗ್ ಸ್ಟ್ರಾಟರ್ಜಿ ಎಂದ ಸುಪ್ರೀಂ ಕೋರ್ಟ್, ನೀವು (ಕರ್ನಾಟಕದ ಜನರು) ಆ ಟ್ರ್ಯಾಪ್​ಗೆ ಬಿದ್ದಿದ್ದೀರಿ ಅಂತ ಹೇಳಿದೆ.

ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ವಕೀಲ ಸಂಜಯ ನೂಲಿ ವಾದ ಮಂಡನೆ ಮಾಡಿದ್ದರು. ಕರ್ನಾಟಕದಲ್ಲಿ ಕನ್ನಡ ಭಾಷೆಯು ಭಾವನಾತ್ಮಕ ವಿಷಯ. ಕನ್ನಡ ಸಾಹಿತ್ಯ ಪರಿಷತ್ ಹಿಂಸೆ ನಡೆಸುವ ಗುಂಪುಗಳನ್ನ ಬೆಂಬಲಿಸಲ್ಲ. ಆದರೆ ಕಮಲ್ ಹಾಸನ್ ಹೇಳಿಕೆಯಿಂದ ಲಕ್ಷಾಂತರ ಜನರಿಗೆ ನೋವಾಗಿದೆ. ಕಮಲ್ ಹಾಸನ್ ಹೇಳಿಕೆಯು ಪಬ್ಲಿಸಿಟಿ ಗಿಮಿಕ್. ಕಮಲ್ ಹಾಸನ್ ಕ್ಷಮೆ ಕೇಳಿದರೆ ಸಿನಿಮಾ ಬಿಡುಗಡೆ ಮಾಡಬಹುದು ಅಂತ ಸಂಜಯ್ ನೂಲಿ ವಾದಿಸಿದರು.

ಈ ವಾದಕ್ಕೆ ಆಕ್ಷೇಪಿಸಿದ ಸುಪ್ರೀಂಕೋರ್ಟ್, ಕಮಲ್ ಹಾಸನ್ ರಿಂದ ಕ್ಷಮಾಪಣೆಯ ಪ್ರಶ್ನೆಯೇ ಇಲ್ಲ. ನೀವು ಸಂಶೋಧನೆಯ ಮೂಲಕ ನಟ ಕಮಲ್ ಹಾಸನ್​ರನ್ನು ಪ್ರಶ್ನಿಸಿ. ನೀವು ಕಮಲ್ ಹಾಸನ್ ಹೇಳಿಕೆಗೆ ಕೌಂಟರ್ ಮಾಡಿ ಮಾನನಷ್ಟ ಕೇಸ್ ಹಾಕಿ. ಆದರೆ ಕಾನೂನನ್ನು ನೀವು ನಿಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿತು. ಅಂತಿಮವಾಗಿ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡುವಂತೆ ಆದೇಶ ನೀಡಿತು. ಸಿನಿಮಾ ಬಿಡುಗಡೆಗೆ ರಕ್ಷಣೆ ನೀಡುವುದಾಗಿ ಹೇಳಿರುವ ರಾಜ್ಯ ಸರ್ಕಾರ ಅದಕ್ಕೆ ಬದ್ಧವಾಗಿರಲಿ ಅಂತ ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: Thug Life: ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಸುಪ್ರೀಂ ಗ್ರೀನ್​ ಸಿಗ್ನಲ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment