/newsfirstlive-kannada/media/post_attachments/wp-content/uploads/2025/05/Waqf.jpg)
ವಕ್ಫ್ (Amendment) ಕಾಯ್ದೆ- 2025 ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆ ಆಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ಮಧ್ಯಂತರ ತೀರ್ಪನ್ನು ಕಾಯ್ದಿರಿಸಿದೆ. ಮೂರು ದಿನಗಳ ಕಾಲ ನಡೆದ ವಾದ-ಪ್ರತಿವಾದದಲ್ಲಿ ಅರ್ಜಿದಾರರು, ಹೊಸ ಕಾನೂನು ಮುಸ್ಲಿಮರ ಹಕ್ಕುಗಳಿಗೆ ವಿರುದ್ಧವಾಗಿದೆ. ಕಾನೂನಿಗೆ ಮಧ್ಯಂತರ ತಡೆ ನೀಡುವಂತೆ ಒತ್ತಾಯಿಸಿದರು. ಆದರೆ ಕೇಂದ್ರ ಸರ್ಕಾರ ಇದನ್ನು ಬಲವಾಗಿ ವಿರೋಧಿಸಿದೆ. ಜೊತೆಗೆ ಕಾನೂನು ಸರಿಯಾಗಿದೆ ಎಂದು ವಾದಿಸಿದೆ.
ಇದನ್ನೂ ಓದಿ: ನಾಳೆ ಆರ್ಸಿಬಿ ಪಂದ್ಯ.. ಬಲಿಷ್ಠ ಪ್ಲೇಯಿಂಗ್-11ನಲ್ಲಿ ಯಾರೆಲ್ಲ ಆಡ್ತಾರೆ..?
ವಕ್ಫ್ ಇಸ್ಲಾಮಿಕ್ ಪರಿಕಲ್ಪನೆಯಾಗಿದೆ. ಆದರೆ ಅದು ಧರ್ಮದ ಅತ್ಯಗತ್ಯ ಭಾಗವಲ್ಲ. ಆದ್ದರಿಂದ ಅದು ಮೂಲಭೂತ ಹಕ್ಕಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತು. ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ಕಪಿಲ್ ಸಿಬಲ್.. ವಕ್ಫ್ ಅಲ್ಲಾಹನಿಗೆ ಸಮರ್ಪಣೆ.. ಇತರ ಧರ್ಮಗಳಿಗಿಂತ ಭಿನ್ನವಾಗಿ ವಕ್ಫ್ ದೇವರಿಗೆ ನೀಡುವ ದಾನವಾಗಿದೆ ಎಂದರು.
ಕೋರ್ಟ್ ಹೇಳಿದ್ದೇನು..?
ಧಾರ್ಮಿಕ ದೇಣಿಗೆ ಇಸ್ಲಾಂಗೆ ಮಾತ್ರ ಸೀಮಿತವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಿಂದೂ ಧರ್ಮದಲ್ಲೂ ಮೋಕ್ಷವಿದೆ ಅಂತಾ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದರು. ದಾನವು ಇತರ ಧರ್ಮಗಳ ಮೂಲಭೂತ ಪರಿಕಲ್ಪನೆ ಎಂದರು. ಅದೇ ರೀತಿ, ಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಾಧೀಶ ಆಗಸ್ಟಿನ್ ಜಾರ್ಜ್ ಮಸಿಹ್ ಕ್ರಿಶ್ಚಿಯನ್ ಧರ್ಮವನ್ನು ಉಲ್ಲೇಖಿಸಿ ಮಾತನಾಡಿದರು. ‘ನಾವೆಲ್ಲರೂ ಸ್ವರ್ಗಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೇವೆ’ ಎಂದರು.
ಇದನ್ನೂ ಓದಿ: ‘ಸರ್ಪ್ರೈಸ್ ಕೊಡ್ತೀನಿ ಕಣ್ಣು ಮುಚ್ಚಿಕೋ ಅಂದ, ಆಮೇಲೆ ನೋಡಿದ್ರೆ..’ ನಟ ಮನು ಬಗ್ಗೆ ಸಂತ್ರಸ್ತೆ ಮತ್ತಷ್ಟು ಆರೋಪ
ಸರ್ಕಾರ ಏನು ಹೇಳಿತು..?
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿ, ಮಧ್ಯಂತರ ಆದೇಶಕ್ಕೆ ನಮ್ಮ ವಿರೋಧ ಇದೆ. ಅಂತಿಮ ವಿಚಾರಣೆಯ ನಂತರ ಕೋರ್ಟ್, ಕಾನೂನು ಅಸಾಂವಿಧಾನಿಕ ಎಂದು ಭಾವಿಸಿದರೆ ಅದನ್ನು ರದ್ದುಗೊಳಿಸಬಹುದು. ಮಧ್ಯಂತರ ಆದೇಶದ ಮೂಲಕ ಕಾನೂನಿಗೆ ತಡೆ ನೀಡಿದರೆ ಮತ್ತು ಈ ಅವಧಿಯಲ್ಲಿ ಯಾವುದೇ ಆಸ್ತಿ ವಕ್ಫ್‌ಗೆ ಹೋದರೆ ಅದನ್ನು ಮರಳಿ ಪಡೆಯುವುದು ಕಷ್ಟ ಎಂದು ವಾದಿಸಿದರು.
ಇದನ್ನೂ ಓದಿ: ಮೈಸೂರು ಸೋಪ್ ರಾಯಭಾರಿಯಾದ ತಮನ್ನಾ.. 2 ವರ್ಷಕ್ಕೆ ಪಡೆಯೋ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ