/newsfirstlive-kannada/media/post_attachments/wp-content/uploads/2024/11/AMU.jpg)
ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ (AMU:Aligarh Muslim University) ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ಸುಪ್ರೀಂ ಕೋರ್ಟ್​ ಇವತ್ತು ಐತಿಹಾಸಿಕ ತೀರ್ಪು ಪ್ರಕಟಿಸಿದೆ. 4:3 ಬಹುಮತದೊಂದಿಗೆ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, 1967ರ ಅಜೀಜ್ ಬಾಷಾ ತೀರ್ಪನ್ನು ಬಹುಮತದಿಂದ ರದ್ದುಗೊಳಿಸಲಾಗಿದೆ. ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ಹೊಸದಾಗಿ ನಿರ್ಧರಿಸಲು ಮೂವರು ನ್ಯಾಯಾಧೀಶರ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದೆ.
ಹೊಸ ಪೀಠವು ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಮಾನದಂಡವನ್ನು ನಿರ್ಧರಿಸಲಿದೆ. AMUಗೆ ಅಲ್ಪಸಂಖ್ಯಾತ ಸ್ಥಾನಮಾನ ಮರುಸ್ಥಾಪಿಸುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ನೀಡಿದೆ. ಸಿಜೆಐ ಡಿ.ವೈ.ಚಂದ್ರಚೂಡ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳು ಸರ್ವಾನುಮತದ ತೀರ್ಪು ನೀಡಿದರೆ, ಮೂವರು ನ್ಯಾಯಮೂರ್ತಿಗಳು ಅಸಮ್ಮತಿ ಸೂಚಿಸಿದ್ದಾರೆ. ಸಿಜೆಐ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ ಈ ವಿಷಯದ ಬಗ್ಗೆ ಒಮ್ಮತ ಹೊಂದಿದ್ದಾರೆ. ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾರ ನಿರ್ಧಾರ ವಿಭಿನ್ನವಾಗಿದೆ.
ಸಿಜೆಐ ಹೇಳಿದ್ದೇನು..?
ಆರ್ಟಿಕಲ್ 30A ಅಡಿಯಲ್ಲಿ ಸಂಸ್ಥೆಯನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವ ಮಾನದಂಡವೇನು? ಯಾವುದೇ ನಾಗರಿಕರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳನ್ನು ಆರ್ಟಿಕಲ್ 19(6) ಅಡಿಯಲ್ಲಿ ನಿಯಂತ್ರಿಸಬಹುದು. ಆರ್ಟಿಕಲ್ 30 ಅಡಿಯಲ್ಲಿ ಹಕ್ಕುಗಳು ಸಂಪೂರ್ಣವಲ್ಲ. ಅದು ಸಂಸ್ಥೆಯ ಅಲ್ಪಸಂಖ್ಯಾತರ ಗುಣವನ್ನು ಉಲ್ಲಂಘಿಸುವುದಿಲ್ಲ. ಧಾರ್ಮಿಕ ಸಮುದಾಯ ಸಂಸ್ಥೆಯನ್ನು ಸ್ಥಾಪಿಸಬಹುದು. ಅದನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಸಿಜೆಐ ಹೇಳಿದರು.
ಏನಿದು ವಿವಾದ..?
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನು 1875ರಲ್ಲಿ ಸರ್ ಸಯ್ಯದ್ ಅಹ್ಮದ್ ಖಾನ್ ಮುಸ್ಲಿಮರ ಶೈಕ್ಷಣಿಕ ಉನ್ನತಿಗಾಗಿ ‘ಅಲಿಗಢ ಮುಸ್ಲಿಂ ಕಾಲೇಜು’ ಸ್ಥಾಪಿಸಿದರು. 1920ರಲ್ಲಿ ಇದು ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಿತು. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಎಂದು ಹೆಸರು ಬಂತು.
ಇದನ್ನೂ ಓದಿ:ಡಿಮ್ಯಾಂಡ್ ಕಳೆದುಕೊಂಡ ಗೋವಾ.. ಟಾಟಾ ಬೈಬೈ ಅಂತಿದ್ದಾರೆ ವಿದೇಶಿಗರು.. ಕಾರಣ ಏನು?
1951 ಮತ್ತು 1965ರಲ್ಲಿ AMU ಕಾಯಿದೆಗೆ ಮಾಡಲಾದ ತಿದ್ದುಪಡಿಗಳಿಗೆ ಕಾನೂನು ಸವಾಲು ಎದುರಾಯಿತು. 1967ರಲ್ಲಿ AMU ಕೇಂದ್ರೀಯ ವಿಶ್ವವಿದ್ಯಾಲಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಹಾಗಾಗಿ ಇದನ್ನು ಅಲ್ಪಸಂಖ್ಯಾತರ ಸಂಸ್ಥೆ ಎಂದು ಪರಿಗಣಿಸಲಾಗುವುದಿಲ್ಲ. ನ್ಯಾಯಾಲಯದ ತೀರ್ಪಿನ ಪ್ರಮುಖ ಅಂಶ ಏನೆಂದರೆ ಅದು (ವಿವಿ) ಕೇಂದ್ರ ಕಾಯಿದೆ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರಿಂದಾಗಿ ಅದರ ಪದವಿಗಳಿಗೆ ಸರ್ಕಾರದ ಮಾನ್ಯತೆ ಖಚಿತಪಡಿಸಿಕೊಳ್ಳಬಹುದು. ಈ ಕಾಯ್ದೆ ಮುಸ್ಲಿಂ ಅಲ್ಪಸಂಖ್ಯಾತರ ಪ್ರಯತ್ನದ ಫಲವಾಗಿರಬಹುದು, ಆದರೆ ಮುಸ್ಲಿಂ ಅಲ್ಪಸಂಖ್ಯಾತರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ ಎಂದರ್ಥವಲ್ಲ ಎಂದು ಕೋರ್ಟ್ ಹೇಳಿತ್ತು.
ಸುಪ್ರೀಂ ಕೋರ್ಟ್​ನ ಈ ತೀರ್ಪು AMUನ ಅಲ್ಪಸಂಖ್ಯಾತರ ಪರಿಕಲ್ಪನೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು. ದೇಶಾದ್ಯಂತ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿತ್ತು. ಇದರಿಂದಾಗಿ 1981ರಲ್ಲಿ ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ತಿದ್ದುಪಡಿಯನ್ನು ಮಾಡಲಾಯಿತು. 2005ರಲ್ಲಿ ಅಲಹಾಬಾದ್ ಹೈಕೋರ್ಟ್​ 1981ರ ತಿದ್ದುಪಡಿ ಕಾಯಿದೆಯನ್ನು ರದ್ದುಗೊಳಿಸಿತ್ತು. ಇದು ಅಸಂವಿಧಾನಿಕ ಎಂದು ಘೋಷಿಸಿತು. 2006ರಲ್ಲಿ ಅಲಹಾಬಾದ್​ ಹೈಕೋರ್ಟ್​ ತೀರ್ಪನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿತ್ತು. 2016ರಲ್ಲಿ ಅಲ್ಪಸಂಖ್ಯಾತರ ಸಂಸ್ಥೆ ಸ್ಥಾಪನೆ ಜಾತ್ಯತೀತ ರಾಷ್ಟ್ರದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಮನವಿಯಲ್ಲಿ ಹೇಳಿತ್ತು. 2019ರಲ್ಲಿ ಅಂದಿನ ಸಿಜೆಐ ರಂಜನ್ ಗೋಗಯ್ ನೇತೃತ್ವದ ತ್ರಿಸದಸ್ಯಪೀಠವು ಪ್ರಕರಣವನ್ನು 7 ನ್ಯಾಯಾಧೀಶರ ಪೀಠಕ್ಕೆ ಕಳುಹಿಸಿತ್ತು.
ಇದನ್ನೂ ಓದಿ:CMಗೆ ತಂದಿದ್ದ ಸಮೋಸಾ, ಕೇಕ್​ಗಳು ಮಂಗಮಾಯ.. CID ತನಿಖೆ ಹೇಳಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us