ಸುಪ್ರೀಂಕೋರ್ಟ್​ನಲ್ಲಿ 100ಕ್ಕೂ ಹೆಚ್ಚು ಉದ್ಯೋಗಗಳು.. ಯಾವ್ಯಾವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ?

author-image
Bheemappa
Updated On
ದಲಿತ ವಿದ್ಯಾರ್ಥಿಗೆ IIT ಸೀಟ್ ಕೊಡಿಸಿದ ಸುಪ್ರೀಂಕೋರ್ಟ್‌; ಇವನ ಹೋರಾಟವೇ ಮನ ಮಿಡಿಯುವ ಸ್ಟೋರಿ!
Advertisment
  • ಕೋರ್ಟ್​ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಖುಷಿ ಸಂಗತಿ
  • ಈ ಅರ್ಹತೆಗಳು ಇದ್ರೆ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು
  • ಸುಪ್ರೀಂಕೋರ್ಟ್ ಕರೆದ ಈ ಉದ್ಯೋಗಗಳಿಗೆ ಶುಲ್ಕ ಎಷ್ಟು ಇದೆ..?

ಕೋರ್ಟ್​ನಲ್ಲಿ ಕೆಲಸಬೇಕೆಂದು ವರ್ಷಗಳಿಂದ ಕಾದು ಕುಳಿತ ಉದ್ಯೋಗಾಕಾಂಕ್ಷಿಗಳಿಗೆ ಇದು ಖುಷಿ ಕೊಡುವ ಸುದ್ದಿಯಾಗಿದೆ. ತಾಲೂಕು, ಜಿಲ್ಲೆಯಲ್ಲಿನ ಕೋರ್ಟ್​ಗಳು ಅಲ್ಲವೇ ಅಲ್ಲ. ದೇಶದ ಪ್ರತಿಷ್ಠಿತ ಸುಪ್ರೀಂಕೋರ್ಟ್​ ಖಾಲಿ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಿದೆ. ಯಾರಿಗೆ ಸುಪ್ರೀಂಕೋರ್ಟ್​ನಲ್ಲಿ ಉದ್ಯೋಗ ಮಾಡಲು ಆಸಕ್ತಿ ಇದೆಯೋ ಅಂತವರು ಇವುಗಳಿಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಸುಪ್ರೀಂಕೋರ್ಟ್ ಈಗಾಗಲೇ ಡಿಸೆಂಬರ್ 3 ರಂದು ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದ್ದು ಅರ್ಜಿಗಳು ಆರಂಭವಾಗಿವೆ. ಗ್ರೂಪ್- ಎ ಹಾಗೂ ಗ್ರೂಪ್- ಬಿ ಹುದ್ದೆಗಳು ಸೇರಿದಂತೆ ಇತರೆ ಉದ್ಯೋಗಗಳನ್ನ ಕರೆಯಲಾಗಿದೆ. ಇನ್ನು ಉದ್ಯೋಗಗಳಿಗೆ ಬೇಕಾದ ಅರ್ಹತೆ, ಪರೀಕ್ಷೆಯ ಮಾದರಿ, ಆಯ್ಕೆ ಪ್ರಕ್ರಿಯೆ, ಖಾಲಿ ಹುದ್ದೆ ಇತ್ಯಾದಿ ಮಾಹಿತಿ ಇಲ್ಲಿದೆ. ಆಸಕ್ತರು ಈ ಎಲ್ಲ ಮಾಹಿತಿ ಇಲ್ಲಿ ಅರಿತುಕೊಳ್ಳಬಹುದು.

ಯಾವ್ಯಾವ ಹುದ್ದೆಗಳು ಇವೆ..?

ಕೋರ್ಟ್ ಮಾಸ್ಟರ್ (ಗುಂಪು-ಎ ಗೆಜೆಟೆಡ್ ಹುದ್ದೆ), ಹಿರಿಯ ಪರ್ಸನಲ್ ಅಸಿಸ್ಟೆಂಟ್ ಹಾಗೂ ಪರ್ಸನಲ್ ಅಸಿಸ್ಟೆಂಟ್ (ಗುಂಪು ಬಿ, ನಾನ್ ಗೆಜೆಟೆಡ್ ಹುದ್ದೆಗಳು) ಹುದ್ದೆಗಳು.

ಒಟ್ಟು ಎಷ್ಟು ಹುದ್ದೆಗಳು?
107

ಇದನ್ನೂ ಓದಿ: ಕರ್ಣಾಟಕ ಬ್ಯಾಂಕ್​ನಿಂದ ಗುಡ್​ನ್ಯೂಸ್; ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

publive-image

ವೇತನ ಶ್ರೇಣಿ

ಕೋರ್ಟ್ ಮಾಸ್ಟರ್- 67,7000 ರೂಪಾಯಿ
ಹಿರಿಯ ಪರ್ಸನಲ್ ಅಸಿಸ್ಟೆಂಟ್- 47,600 ರೂಪಾಯಿ
ಪರ್ಸನಲ್ ಅಸಿಸ್ಟೆಂಟ್- 44,900 ರೂಪಾಯಿ

ಶೈಕ್ಷಣಿಕ ಅರ್ಹತೆ (ಹುದ್ದೆಗೆ ವಿದ್ಯಾರ್ಹತೆ)

ಕಾನೂನು ಪದವಿ, 120 wpm ವೇಗದಲ್ಲಿ ಇಂಗ್ಲಿಷ್ ಟೈಪಿಂಗ್, ಕಂಪ್ಯೂಟರ್ ಜ್ಞಾನ ಇರಬೇಕು
ಯಾವುದ್ರಾದರೂ ವಿಷಯದಲ್ಲಿ ಪದವಿ ಹಾಗೂ 100 wpm ವೇಗದಲ್ಲಿ ಟೈಪಿಂಗ್ ಮಾಡಬೇಕು

ಅರ್ಜಿ ಶುಲ್ಕ ಎಷ್ಟು?

ಜನರಲ್, ಒಬಿಸಿ- 1000 ರೂಪಾಯಿಗಳು
ಎಸ್​ಸಿ. ಎಸ್​ಟಿ- 250 ರೂಪಾಯಿಗಳು

ವಯೋಮಿತಿ- 18 ರಿಂದ 35 ವರ್ಷದ ಒಳಗಿನವರಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ ಹೇಗಿದೆ?

ಕೌಶಲ್ಯ ಪರೀಕ್ಷೆ (ಟೈಪಿಂಗ್, ಸ್ಟೈನ್)
ಲಿಖಿತ ಪರೀಕ್ಷೆ
ಸಂದರ್ಶನ
ದಾಖಲಾತಿ ಪರಿಶೀಲನೆ
ವೈದ್ಯಕೀಯ ಪರೀಕ್ಷೆ

ಪ್ರಮುಖ ದಿನಾಂಕ

ನೋಟಿಫಿಕೇಶನ್ ರಿಲೀಸ್ ದಿನಾಂಕ- 03 ಡಿಸೆಂಬರ್ 2024
ಅರ್ಜಿ ಸಲ್ಲಿಕೆಯ ದಿನಾಂಕ 25 ಡಿಸೆಂಬರ್ 2024

ವೆಬ್​ಸೈಟ್​- https://www.sci.gov.in/recruitments/

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment