Supreme Court Recruitment; ಕೋರ್ಟ್ ಮಾಸ್ಟರ್, ಸಹಾಯಕ ಸೇರಿ 107 ಖಾಲಿ ಹುದ್ದೆಗಳ ನೇಮಕಾತಿ

author-image
Bheemappa
Updated On
ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ಉದ್ಯೋಗಗಳು.. ಸ್ಯಾಲರಿ ಎಷ್ಟು, ಕೊನೆ ದಿನಾಂಕ?
Advertisment
  • ಡಿಸೆಂಬರ್ 3 ರಂದು ಅಧಿಸೂಚನೆ ಹೊರಡಿಸಿದ್ದ ನ್ಯಾಯಾಲಯ
  • ದೇಶದ ಯಾವುದೇ ಮೂಲೆಯಿಂದಲೂ ಅರ್ಜಿಗೆ ಅವಕಾಶ ವಿದೆ
  • ಕಂಪ್ಯೂಟರ್ ಜ್ಞಾನದ ಜತೆ ಈ ಕೌಶಲ್ಯಗಳು ನಿಮ್ಗೆ ಗೊತ್ತಿರಬೇಕು

ದೇಶದ ಪ್ರತಿಷ್ಠಿತ ಸುಪ್ರೀಂಕೋರ್ಟ್​ ಖಾಲಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿದೆ. ಪ್ರಸ್ತುತ ಈ ಕುರಿತು ನ್ಯಾಯಾಲಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಕೋರ್ಟ್​ನಲ್ಲಿ ಕೆಲಸ ಮಾಡಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು. ಇವೆಲ್ಲಾ ಆನ್​ಲೈನ್​ ಅರ್ಜಿಗಳು ಆಗಿದ್ದರಿಂದ ದೇಶದ ಯಾವುದೇ ಮೂಲೆಯಿಂದಲೂ ಅರ್ಜಿಗೆ ಅವಕಾಶ ಇರುತ್ತದೆ.

ಸುಪ್ರೀಂಕೋರ್ಟ್ ಖಾಲಿ ಇರುವಂತ ಗ್ರೂಪ್- ಎ ಹಾಗೂ ಗ್ರೂಪ್- ಬಿ ಹುದ್ದೆಗಳು ಸೇರಿದಂತೆ ಇತರೆ ಉದ್ಯೋಗಗಳನ್ನ ತುಂಬುತ್ತಿದೆ. ಡಿಸೆಂಬರ್ 3 ರಂದು ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದ್ದು ಡಿಸೆಂಬರ್ 25 ಅಂದರೆ ನಾಳೆ ಕೊನೆಯ ದಿನವಾಗಿದೆ. ಹೀಗಾಗಿ ಈ ಮಾಹಿತಿ ತಿಳಿದ ತಕ್ಷಣವೇ ಆಕಾಂಕ್ಷಿಗಳು ಅಪ್ಲೇ ಮಾಡಬಹುದು. ಇದಕ್ಕೆ ಬೇಕಾದ ಪರೀಕ್ಷೆಯ ಮಾದರಿ, ಆಯ್ಕೆ ಪ್ರಕ್ರಿಯೆ, ಖಾಲಿ ಹುದ್ದೆ, ಅರ್ಹತೆ ಮಾಹಿತಿ ಇಲ್ಲಿ ಕೊಡಲಾಗಿದೆ.

ಶೈಕ್ಷಣಿಕ ಅರ್ಹತೆ (ಹುದ್ದೆಗೆ ತಕ್ಕಂತೆ ಮಾಹಿತಿ)

ಕಾನೂನು ಪದವಿ, 120 wpm ವೇಗದಲ್ಲಿ ಇಂಗ್ಲಿಷ್ ಟೈಪಿಂಗ್, ಕಂಪ್ಯೂಟರ್ ಜ್ಞಾನ ಇರಬೇಕು
ಯಾವುದ್ರಾದರೂ ವಿಷಯದಲ್ಲಿ ಪದವಿ ಹಾಗೂ 100 wpm ವೇಗದಲ್ಲಿ ಟೈಪಿಂಗ್ ಮಾಡಬೇಕು

ಒಟ್ಟು ಎಷ್ಟು ಹುದ್ದೆಗಳು?
107

ವೇತನ ಶ್ರೇಣಿ

  • ಕೋರ್ಟ್ ಮಾಸ್ಟರ್- ₹67,700
  • ಹಿರಿಯ ಪರ್ಸನಲ್ ಅಸಿಸ್ಟೆಂಟ್- ₹47,600
  • ಪರ್ಸನಲ್ ಅಸಿಸ್ಟೆಂಟ್- ₹44,900

ಇದನ್ನೂ ಓದಿ:ESICನಲ್ಲಿ 600ಕ್ಕೂ ಅಧಿಕ ಉದ್ಯೋಗಗಳು.. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

publive-image

ಯಾವ್ಯಾವ ಹುದ್ದೆಗಳು ಇವೆ..?

ಕೋರ್ಟ್ ಮಾಸ್ಟರ್ (ಗುಂಪು-ಎ ಗೆಜೆಟೆಡ್ ಹುದ್ದೆ), ಹಿರಿಯ ಪರ್ಸನಲ್ ಅಸಿಸ್ಟೆಂಟ್ ಹಾಗೂ ಪರ್ಸನಲ್ ಅಸಿಸ್ಟೆಂಟ್ (ಗುಂಪು ಬಿ, ನಾನ್ ಗೆಜೆಟೆಡ್ ಹುದ್ದೆಗಳು) ಹುದ್ದೆಗಳು.

ವಯೋಮಿತಿ- 18 ರಿಂದ 35 ವರ್ಷ

ಅರ್ಜಿ ಶುಲ್ಕ ಎಷ್ಟು?

ಜನರಲ್, ಒಬಿಸಿ- ₹1,000
ಎಸ್​ಸಿ. ಎಸ್​ಟಿ- ₹250

ಪ್ರಮುಖ ದಿನಾಂಕ

ಅಧಿಸೂಚನೆ ರಿಲೀಸ್ ದಿನಾಂಕ- 03 ಡಿಸೆಂಬರ್ 2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 25 ಡಿಸೆಂಬರ್ 2024

ಆಯ್ಕೆ ಪ್ರಕ್ರಿಯೆ ಹೇಗಿದೆ?

  • ಕೌಶಲ್ಯ ಪರೀಕ್ಷೆ (ಟೈಪಿಂಗ್, ಸ್ಟೈನ್)
  • ಲಿಖಿತ ಪರೀಕ್ಷೆ
  • ಸಂದರ್ಶನ
  • ದಾಖಲಾತಿ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ವೆಬ್​ಸೈಟ್​-https://www.sci.gov.in/recruitments/

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment