/newsfirstlive-kannada/media/post_attachments/wp-content/uploads/2024/10/JOB_BNG.jpg)
ನಿವೇನಾದರೂ ಕಾನೂನು ಪದವಿ ಮುಗಿಸಿದ್ದರೇ ಅಥವಾ ಫೈನಲ್ ಇಯರ್ನಲ್ಲಿ ವ್ಯಾಸಂಗ ಮಾಡುತ್ತಿದ್ದರೇ ಈ ಕೆಲಸಕ್ಕೆ ಟ್ರೈ ಮಾಡಬಹುದು. ದೇಶದ ಪ್ರತಿಷ್ಠತಿ ಕೋರ್ಟ್ನಲ್ಲಿ ಕೆಲಸ ಮಾಡಲು ಬಯಸಿದರೆ ಈಗಲೇ ಎಲ್ಲ ದಾಖಲೆಗಳು ಇವೆ ಎಂದು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಕೆ ಮಾಡಲು ಸಿದ್ಧರಾಗಿ.
ಭಾರತದ ಪ್ರತಿಷ್ಠಿತ ನ್ಯಾಯಾಲಯ ಸುಪ್ರೀಂ ಕೋರ್ಟ್, ಕಾನೂನು ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ಸ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಕೆಲಸಗಳಿಗೆ ಆಸಕ್ತಿ ಹೊಂದಿರುವವರು ಅಪ್ಲೇ ಮಾಡಬಹುದಾಗಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ದೇಶದ ಯಾವುದೇ ಮೂಲೆಯಲ್ಲಿದ್ದರು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಕಾನೂನು ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ಸ್ಗೆ ಅರ್ಹತೆಗಳು, ಮಾನದಂಡಗಳು, ಅರ್ಜಿ ಶುಲ್ಕ, ವಯೋಮಿತಿ, ಯಾವ ಪದವಿ ಪಡೆದಿರಬೇಕು ಎನ್ನುವ ಮಾಹಿತಿ ಇಲ್ಲಿದೆ. ಆರ್ಟಿಕಲ್ ಅನ್ನು ಸಂಪೂರ್ಣವಾಗಿ ಓದಿ ಬಳಿಕ ಅರ್ಜಿ ಸಲ್ಲಿಕೆಗೆ ಮುಂದಾಗಿದೆ. ಪರೀಕ್ಷೆಯನ್ನು ದೇಶದ ವಿವಿಧ ನಗರಗಳಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಬೆಂಗಳೂರು ಕೂಡ ಸೇರಿದೆ. ಕೋರ್ಟ್ ವೆಬ್ಸೈಟ್- http://www.sci.gov.in.
ಉದ್ಯೋಗದ ಹೆಸರು
ಕಾನೂನು ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ಸ್
ಒಟ್ಟು ಎಷ್ಟು ಕೆಲಸಗಳು ಖಾಲಿ ಇವೆ?
90
ವಿದ್ಯಾರರ್ಹತೆ ಏನು ಕೇಳಲಾಗಿದೆ?
ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ (LLB)
ಅಂತಿಮ ವರ್ಷದಲ್ಲಿರುವ ಅಭ್ಯರ್ಥಿಗಳು ಹುದ್ದೆಗೆ ಅರ್ಹರು
ಇದನ್ನೂ ಓದಿ: 400ಕ್ಕೂ ಹೆಚ್ಚು ಹುದ್ದೆಗಳನ್ನ ಆಹ್ವಾನಿಸಿದ ಕೋಲ್ ಇಂಡಿಯಾ ಲಿಮಿಟೆಡ್.. ಕೂಡಲೇ ಅಪ್ಲೇ ಮಾಡಿ
ವಯಸ್ಸಿನ ಮಿತಿ- 20 ರಿಂದ 32 ವರ್ಷದವರಿಗೆ ಅವಕಾಶ
ಅರ್ಜಿ ಶುಲ್ಕ ಎಷ್ಟು ಇದೆ?
ಎಸ್ಸಿ, ಎಸ್ಟಿ ಅಭ್ಯರ್ಥಿಗಳು- 500 ರೂಪಾಯಿ
EWS, OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು- 500 ರೂಪಾಯಿ
ಆಯ್ಕೆ ಪ್ರಕ್ರಿಯೆ
- ಸ್ಕ್ರೀನಿಂಗ್ ಟೆಸ್ಟ್
- ವಿಷಯಾಧಾರಿತ ಪರೀಕ್ಷೆ
- ಸಂದರ್ಶನ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 07 ಫೆಬ್ರುವರಿ 2025
- ಪರೀಕ್ಷೆ ಶುಲ್ಕ ಪಾವತಿಗೆ ಕೊನೆಯ ದಿನಾಂಕ- 07 ಫೆಬ್ರುವರಿ 2025
- ಪರೀಕ್ಷೆ ನಡೆಯುವ ದಿನಾಂಕ- 09 ಮಾರ್ಚ್ 2025
ಮುಖ್ಯವಾದ ಲಿಂಕ್- https://cdnbbsr.s3waas.gov.in/s3ec0490f1f4972d133619a60c30f3559e/uploads/2025/01/2025011066.pdf
https://cdn3.digialm.com/EForms/configuredHtml/32912/92228/Index.html
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ