newsfirstkannada.com

ಜಾಮೀನು ಮೇಲೆ ಹೊರಗಿರುವ ಮುರುಘಾಶ್ರೀಗೆ ಸುಪ್ರೀಂ ಕೋರ್ಟ್​ನಿಂದ ಮತ್ತೊಂದು ಬಿಗ್​​ ಶಾಕ್..!

Share :

Published February 28, 2024 at 6:41am

  ಪೋಕ್ಸೋ ಕೇಸ್‌ ಆರೋಪಿಯಾಗಿರುವ ಮುರುಘಾ ಶ್ರೀ

  ರಾಜ್ಯ ಸರ್ಕಾರಕ್ಕೂ ನೋಟಿಸ್​ ನೀಡಿದ ಸುಪ್ರೀಂಕೋರ್ಟ್

  ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ತಾಕೀತು

ಪೋಕ್ಸೋ ಕೇಸ್​​ನಲ್ಲಿ ಬಂಧಿ ಆಗಿದ್ದ ಮುರುಘಾ ಶ್ರೀ ಸದ್ಯ ಜಾಮೀನು ಪಡೆದು ಹೊರಗಿದ್ದಾರೆ. ಮುರುಘಾ ಮಠಕ್ಕೆ ಎಂಟ್ರಿ ಕೊಡದೇ ಇದ್ರೂ ಅಧಿಕಾರವನ್ನ ತಾವೇ ಚಲಾಯಿಸುತ್ತಿದ್ದಾರೆ. ಇದೀಗ ಬೃಹನ್ಮಠದ ಕಾರ್ಯಭಾರ ನಡೆಸ್ತಿದ್ದ ಶಿವಮೂರ್ತಿ ಶ್ರೀಗೆ ಮತ್ತೊಂದು ಶಾಕ್ ಎದುರಾಗಿದೆ. ಮುರುಘಾಶ್ರೀ ಆಡಳಿತಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ.

ಮುರುಘಾಶ್ರೀ ಆಡಳಿತಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ
ಫೋಕ್ಸೋ ಪ್ರಕರಣವೆಂಬ ಜೀವಮಾನದ ಕಳಂಕ ಹೊತ್ತಿರೋ ಮುರುಘಾಶ್ರೀ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. ಅಲ್ಲದೇ, ಜೈಲಿನಿಂದ ಬಿಡುಗಡೆಯಾದ ನಂತರ ಮುರುಘಾ ಮಠ ಹಾಗೂ ವಿದ್ಯಾಪೀಠದ ಆಡಳಿತ ನೋಡಿಕೊಳ್ಳುತ್ತಿದ್ದಾರೆ. ಇದನ್ನ ಪ್ರಶ್ನಿಸಿ ಮಾಜಿ ಸಚಿವ ಹೆಚ್‌.ಏಕಾಂತಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ರು. ಇದೀಗ ಮುರುಘಾ ಶ್ರೀ ಆಡಳಿತಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ.

ಮುರುಘಾ ಶ್ರೀಗೆ ಶಾಕ್‌!
ಪೋಕ್ಸೋ ಕೇಸ್‌ನಲ್ಲಿ ಮುರುಘಾ ಶ್ರೀ ಆರೋಪಿಯಾಗಿದ್ದು, ಇವರ ಕೈಗೆ ಮಠದ ಆಡಳಿತ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಬಳಿಕ ಶ್ರೀಗಳ ಆಡಳಿತಕ್ಕೆ ಚಿತ್ರದುರ್ಗ ಸೆಷನ್ಸ್ ಕೋರ್ಟ್ ನಿರ್ಬಂಧ ವಿಧಿಸಿತ್ತು.. ಬಳಿಕ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನ ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಹೈಕೋರ್ಟ್ ಆದೇಶದ ವಿರುದ್ಧ ಹೆಚ್‌. ಏಕಾಂತಯ್ಯ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅಲ್ಲದೇ ಎರಡು ವಾರಗಳಲ್ಲಿ ಈ ನೋಟಿಸ್‌ಗೆ ಪ್ರತಿಕ್ರಿಯೆ ನೀಡುವಂತೆ ತಾಕೀತು ನೀಡಿದೆ. ಇನ್ನೂ ಮಠದ ಆಡಳಿತಕ್ಕೆ ಸಮಿತಿ‌ ರಚಿಸುವಂತೆ ಕೋರ್ಟ್ ಸೂಚನೆ ನೀಡಿದ್ದು, ಮೂರು ದಿನಗಳ ಒಳಗಾಗಿ ಸಮಿತಿ ರಚಿಸುವಂತೆ ತಿಳಿಸಿದೆ.. ಅಲ್ಲದೇ ಮಠದ ಆಡಳಿತವನ್ನ ರಾಜ್ಯ ಸರ್ಕಾರ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದೆ. ಪ್ರಮುಖವಾಗಿ ಮೇಲ್ವಿಚಾರಣಾ ಸಮಿತಿಯಲ್ಲಿ ಆರೋಪಿಗಳು ಯಾರೂ ಇರಬಾರದು ಎಂಬ ಮಹತ್ವದ ಸೂಚನೆಯನ್ನ ಸುಪ್ರೀಂ ಕೋರ್ಟ್ ನೀಡಿದೆ.

ಚಿತ್ರದುರ್ಗದ ಮುರುಘಾ ಮಠದ ವಿಚಾರದಲ್ಲಿ ಸುಪ್ರಿಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ಈ ಆದೇಶದಂತೆ ಮುರುಘಾ ಶ್ರೀಗಳು ಇನ್ಮುಂದೆ ಮಠದ ಆಡಳಿತದಲ್ಲಿ ತಲೆಹಾಕುವಂತಿಲ್ಲ. ಇದರ ಜೊತೆಗೆ ಸರ್ಕಾರವೇ ಮಠದ ಆಡಳಿತವನ್ನ ನೇರವಾಗಿ ನೋಡಿಕೊಳ್ಳಬೇಕಿದೆ.. ಇದೀಗ ಬೃಹನ್ಮಠದ ಮೇಲಿನ ಸಂಪೂರ್ಣ ಹಿಡಿತ ಮುರುಘಾ ಶ್ರೀಗಳ ಕೈಯ್ಯಿಂದ ಜಾರಿರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾಮೀನು ಮೇಲೆ ಹೊರಗಿರುವ ಮುರುಘಾಶ್ರೀಗೆ ಸುಪ್ರೀಂ ಕೋರ್ಟ್​ನಿಂದ ಮತ್ತೊಂದು ಬಿಗ್​​ ಶಾಕ್..!

https://newsfirstlive.com/wp-content/uploads/2023/11/CTR_MURUGHASREE.jpg

Load More