/newsfirstlive-kannada/media/post_attachments/wp-content/uploads/2025/06/supreme_court.jpg)
ನವದೆಹಲಿ: ಆಸ್ತಿಯ ಮೇಲೆ ಹಕ್ಕನ್ನು ಹೊಂದಲು ಕೇವಲ ನೋಂದಣಿ ಮಾಡಿಸಿಕೊಂಡರೇ ಸಾಕಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು ನೀಡಿದೆ. ನೋಂದಣಿ ಅಥವಾ ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ಅದು ಪುರಾವೆ ಅಲ್ಲವೇ ಅಲ್ಲ. ಸ್ವಯಂಚಾಲಿತವಾಗಿ ಮಾಲೀಕತ್ವ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್​ ಒತ್ತಿ ಹೇಳಿದೆ.
ಒಂದು ಆಸ್ತಿಯ ಮೇಲೆ ನಿಜವಾದ ಮಾಲೀಕತ್ವ ಯಾರಿಗೆ ಇದೆಯೋ ಅದು ಕೇವಲ ದಾಖಲೆಯ ನೋಂದಣಿಗಿಂತ ಹೆಚ್ಚಿನದರಿಂದ ನಿರ್ಧರಿಸಲಾಗುತ್ತದೆ. ಆಸ್ತಿಯ ಸ್ವಾಧೀನವು ಕಾನೂನಿಗೆ ಅನುಗುಣವಾಗಿಲ್ಲದಿದ್ದರೆ, ನೋಂದಾಯಿತ ದಾಖಲೆಯು ಸ್ವಯಂಚಾಲಿತವಾಗಿ ಕಾನೂನುಬದ್ಧ ಮಾಲೀಕತ್ವವನ್ನು ಹೊಂದುವುದಿಲ್ಲ ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟಪಡಿಸಿದೆ.
ಆಸ್ತಿ ಮೇಲೆ ಹಕ್ಕು ಹೊಂದಲು ಯಾವ್ಯಾವ ದಾಖಲೆಗಳು ಇರಬೇಕು?
ಮಾರಾಟ ಪತ್ರ; ಒಂದು ನಿರ್ಣಾಯಕ ಕಾನೂನು ದಾಖಲೆ ಆಗಿರುತ್ತದೆ. ಮಾರಾಟ ಮತ್ತು ವರ್ಗಾವಣೆಯ ಪುರವೆಗಳನ್ನು ಇದು ಒದಗಿಸುತ್ತದೆ. ಮಾರಾಟಗಾರರಿಂದ ಖರೀದಿದಾರರಿಗೆ ಆಸ್ತಿಯ ಮಾರಾಟದ ಬಗ್ಗೆ ಒಂದು ಪ್ರಮುಖ ದಾಖಲೆಯಾಗಿದೆ.
ಮದರ್​ ಡೀಡ್​ (The Mother Deed); ಈ ದಾಖಲೆಯು ಆಸ್ತಿಯ ಸಂಪೂರ್ಣ ಮಾಲೀಕತ್ವದ ಇತಿಹಾಸ ಪತ್ತೆ ಹಚ್ಚುತ್ತೆ. ಖರೀದಿ ಮಾಡುವವರು ಆಸ್ತಿಯ ಮೇಲೆ ಸಾಲ ಹುಡುಕಲು ವಿಶೇಷ ದಾಖಲೆ ಆಗಿದೆ.
ಮಾರಾಟ ಮತ್ತು ಖರೀದಿ ಒಪ್ಪಂದ; ಇದು ಖರೀದಿದಾರ ಮತ್ತು ಮಾರಾಟಗಾರ ಈ ಇಬ್ಬರೂ ಒಪ್ಪಿಕೊಂಡ ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸುತ್ತದೆ.
ಕಟ್ಟಡ ಅನುಮೋದನೆ ಪ್ಲಾನ್ (uilding Approval Plan); ಸ್ಥಳೀಯ ಸಂಸ್ಥೆ ಕಾಯ್ದೆಗಳ ಅಡಿ ಅಗತ್ಯ ನಿರ್ಬಂಧ ಪಡೆಯಬೇಕು. ಇದರಲ್ಲಿ 2 ಅಪ್ರೂವಲ್ಸ್ ಇರುತ್ತವೆ. ಕಟ್ಟಡ ಪ್ಲಾನಿಂಗ್ ಇನ್ನೊಂದು ಲೇಔಟ್ ಅಪ್ರೂವಲ್.
ಸ್ವಾಧೀನ ಪತ್ರ; ಬಿಲ್ಡರ್‌ನಿಂದ ಸ್ವಾಧೀನ ಪತ್ರ ಖರೀದಿದಾರ ಪಡೆಯಬೇಕು. ಇದರಲ್ಲಿ ಆಸ್ತಿಯ ಸ್ವಾಧೀನದ ದಿನಾಂಕ ಇರುತ್ತದೆ.
ಪೂರ್ಣಗೊಳಿಸುವಿಕೆ ಪತ್ರ (Completion Certificate); ಯಾವುದೇ ಕಟ್ಟಡ ನಿರ್ಮಿಸುವಾಗ ಸ್ಥಳೀಯ ನಿಯಮದಂತೆ ನಿರ್ಮಿಸಲಾಗಿದೆ. ಪುರಸಭೆ ಅಥವಾ ಅಭಿವೃದ್ಧಿ ಪ್ರಾಧಿಕಾರದ ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳು ಇರುವುದಿಲ್ಲ ಅಂತ ಪರಿಶೀಲಿಸುವ ಪ್ರಮುಖ ದಾಖಲೆ.
ಖಾತಾ ಪ್ರಮಾಣಪತ್ರ
ಹಂಚಿಕೆ ಪತ್ರ (Allotment Letter)
Encumbrance Certificate
ನಿರಾಕ್ಷೇಪಣಾ ಪ್ರಮಾಣಪತ್ರಗಳು (NOC)
ಗುರುತು ಮತ್ತು ವಿಳಾಸ ಪುರಾವೆ
2016ರ ಅಡಿ RERA ಕಾಯ್ದೆ
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ