Advertisment

ಇಶಾ ಫೌಂಡೇಶನ್ ವಿರುದ್ಧ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ.. ಏನಿದು ಪ್ರಕರಣ..?

author-image
Bheemappa
Updated On
ಇಶಾ ಫೌಂಡೇಶನ್ ವಿರುದ್ಧ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ.. ಏನಿದು ಪ್ರಕರಣ..?
Advertisment
  • ಪೊಲೀಸರ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್​​ಗೆ ಸಲ್ಲಿಸಬೇಕು
  • ತಮಿಳುನಾಡು ಪೊಲೀಸರಿಂದ ಮದ್ರಾಸ್ ಹೈಕೋರ್ಟ್ ವರದಿ ಕೇಳಿತ್ತು
  • ಇಶಾ ಫೌಂಡೇಶನ್ ಪರವಾಗಿ ಮುಕುಲ್ ರೋಹಟಗಿ ವಾದ ಮಂಡನೆ

ನವದೆಹಲಿ: ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ತಮಿಳುನಾಡು ಪೊಲೀಸರಿಂದ ಮದ್ರಾಸ್ ಹೈಕೋರ್ಟ್ ವರದಿ ಕೇಳಿತ್ತು. ಈ ಆದೇಶಕ್ಕೆ ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಿದೆ.

Advertisment

ಸುಪ್ರೀಂ ಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಮದ್ರಾಸ್ ಹೈಕೋರ್ಟ್​ ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ಮದ್ರಾಸ್ ಹೈಕೋರ್ಟ್ ಆದೇಶದಂತೆ ತಮಿಳುನಾಡು ಪೊಲೀಸರು ಆಶ್ರಮದಲ್ಲಿ ಯಾವುದೇ ತನಿಖೆ, ಶೋಧ ನಡೆಸುವಂತಿಲ್ಲ. ಈಗಾಗಲೇ ನಡೆಸಿದ ಶೋಧಕಾರ್ಯದ ವಿವಿರ, ಮಾಹಿತಿ ತನಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್​ ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದು ಯಾಕೆ ರಾಜೀನಾಮೆ ಕೊಡಬೇಕು? ಕುಮಾರಸ್ವಾಮಿ ರಿಸೈನ್ ಮಾಡ್ತಾರಾ? ಹೆಚ್​ಡಿಕೆಗೆ ಜಿಟಿ ದೇವೇಗೌಡ ಟಾಂಗ್

publive-image

ಕ್ರಿಮಿನಲ್ ಕೇಸ್​ಗಳು ಕುರಿತು ವಿವರ ನೀಡುವಂತೆ ಮದ್ರಾಸ್​ ಹೈಕೋರ್ಟ್​ ಪೊಲೀಸರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಜಗ್ಗಿ ವಾಸುದೇವ್‌ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಇಶಾ ಫೌಂಡೇಶನ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡನೆ ಮಾಡಿದರು. ಮದ್ರಾಸ್​ ಕೋರ್ಟ್​ ಆದೇಶದ ಮೇರೆಗೆ ಕೊಯಮತ್ತೂರಿನ ಆಶ್ರಮಕ್ಕೆ 150 ಪೊಲೀಸರು ಹೋಗಿ ಶೋಧ ನಡೆಸಿದ್ದಾರೆ.

Advertisment

ಆಶ್ರಮ ಕಳಂಕರಹಿತ ದಾಖಲೆ ಹೊಂದಿದೆ ಹಾಗೂ ಬಲವಂತವಾಗಿ ಹಿಡಿದಿಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ. ಮದ್ರಾಸ್ ಹೈಕೋರ್ಟ್‌ಗೆ ಈ ಸಂಬಂಧ ಇಬ್ಬರು ಯುವತಿಯರು ಹಾಜರಾಗಿದ್ದರು. ಬುಡಕಟ್ಟು ಶಾಲೆಯಲ್ಲಿನ 12 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪಕ್ಕೂ ಆಶ್ರಮಕ್ಕೂ ಸಂಬಂಧವಿಲ್ಲ ಎಂದರು.

ಇದನ್ನೂ ಓದಿ: ವಿಶ್ವವಿಖ್ಯಾತ ದಸರಾಗೆ ಸಂಭ್ರಮದ ಚಾಲನೆ.. ಕೆಂಪು ಸೀರೆ, ಹೂವುಗಳಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ

ಆಶ್ರಮದಲ್ಲಿರುವ ವೈದ್ಯರ ವಿರುದ್ಧ ಪೋಕ್ಸೊ ಕಾಯಿದೆ ದಾಖಲಾಗಿದೆ. ವೈದ್ಯರ ವಿರುದ್ಧ ತನಿಖೆ ಮುಂದುವರಿಯಲಿ. ಇನ್ನು ಇದೇ ವೇಳೆ ಇಬ್ಬರು ಯುವತಿಯರ ಜೊತೆಗೆ ತಮ್ಮ ಚೇಂಬರ್​ನಲ್ಲಿ ಆನ್​ಲೈನ್​ನಲ್ಲಿ ಸಿಜೆಐ ಮಾತುಕತೆ ನಡೆಸಿದರು. ಬಳಿಕ ಕೋರ್ಟ್ ಪೀಠಕ್ಕೆ​ಗೆ ಆಗಮಿಸಿ ಸಿಜೆಐ ಚಂದ್ರಚೂಡ್ ಇಬ್ಬರು ಯುವತಿಯರ ತಾಯಿ 8 ವರ್ಷದ ಹಿಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಇವರು 24 ಮತ್ತು 27 ವರ್ಷ ವಯಸ್ಸಿನವರಿದ್ದಾಗ ಆಶ್ರಮಕ್ಕೆ ಸೇರಿದ್ದರು. ಈಗ ಅವರ ತಂದೆ ಕಾಮರಾಜ್ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದಾರೆ. ವಯಸ್ಸು, ಸ್ವಪ್ರೇರಣೆಯ ನಿರ್ಧಾರದ ಕಾರಣಕ್ಕೆ 2ನೇ ಹೇಬಿಯಸ್ ಕಾರ್ಪಸ್ ಅರ್ಜಿ ಮನ್ನಣೆ ನೀಡಬಾರದಿತ್ತು ಎಂದು ಹೇಳಿದ್ದಾರೆ.

Advertisment

ಸುಪ್ರೀಂ ಕೋರ್ಟ್ ಆದೇಶ

  • 1 ಕೇಸ್ ಮದ್ರಾಸ್ ಹೈಕೋರ್ಟ್​ನಿಂದ ಸುಪ್ರೀಂ ಕೋರ್ಟ್​ಗೆ ವರ್ಗಾವಣೆ
  • 2 ಅರ್ಜಿದಾರ ಕಾಮರಾಜ್ ವಕೀಲರ ಮೂಲಕ ಸುಪ್ರೀಂ ವಿಚಾರಣೆಗೆ ಹಾಜರಾಗಲಿ
  • 3 ಪೊಲೀಸರ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್​​ಗೆ ಸಲ್ಲಿಸಬೇಕು
  • 4 ಹೈಕೋರ್ಟ್ ಆದೇಶದ ಮೇರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಬಾರದು
  • 5 ಅಕ್ಟೋಬರ್ 18ರಂದು ಸುಪ್ರೀಂ ಕೋರ್ಟ್​​ನಲ್ಲಿ ಮತ್ತೆ ವಿಚಾರಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment