Thug Life: ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಸುಪ್ರೀಂ ಗ್ರೀನ್​ ಸಿಗ್ನಲ್

author-image
Ganesh
Updated On
‘ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ’ ಕಮಲ್ ಹಾಸನ್​ಗೆ ಹೈಕೋರ್ಟ್ ಜಡ್ಜ್ ತರಾಟೆ
Advertisment
  • ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು
  • ನೆಲದ ಕಾನೂನು ಮುಖ್ಯ ಎಂದ ಸುಪ್ರೀಂ ಕೋರ್ಟ್
  • ಜನ ಘೇರಾವ್ ಮಾಡ್ತೀವಿ ಎಂದಾಕ್ಷಣ ಸಿನಿಮಾ ಬ್ಯಾನ್ ಬೇಡ

ಕರ್ನಾಟಕದಲ್ಲಿ ಕಮಲ್ ಹಾಸನ್​ ಅವರ ‘ಥಗ್ ಲೈಫ್’ (Thug Life) ಬಿಡುಗಡೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

ಸುಪ್ರೀಂ ಕೋರ್ಟ್​ನ ಜಸ್ಟೀಸ್ ಮನಮೋಹನ್, ಜಸ್ಟೀಸ್ ಜೆ.ಭುಯನ್ ಪೀಠದಿಂದ ಆದೇಶ ಹೊರಬಿದ್ದಿದೆ. ರಾಜ್ಯ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು. ಜನರು ಬಂದು ಸಿನಿಮಾ ನೋಡ್ತಾರೆ. ಜನ ಬಂದು ಘೇರಾವ್ ಮಾಡ್ತೀವಿ ಅಂತ ಹೇಳಿದಾಕ್ಷಣ ಸಿನಿಮಾ ಬಿಡುಗಡೆ ನಿಲ್ಲಿಸಬಾರದು. ಜನ ಸಿನಿಮಾ ಹಾಲ್ ಸುಡುತ್ತೇವೆ ಎಂದಿದ್ದಕ್ಕೆ ಸಿನಿಮಾ ಬಿಡುಗಡೆ ನಿಲ್ಲಿಸಬಾರದು. ಈ ನೆಲದ ಕಾನೂನು ಕಾಪಾಡುವುದು ಮುಖ್ಯ ಎಂದ ಸುಪ್ರೀಂ ಕೋರ್ಟ್ ಹೇಳಿದೆ.

ಸಿಬಿಎಫ್‌ಸಿ ಸರ್ಟೀಫಿಕೇಟ್ ಬಳಿಕ ಸಿನಿಮಾ ಬಿಡುಗಡೆ ಮಾಡಬಹುದು. ಸಿಬಿಎಫ್‌ಸಿ ಸರ್ಟಿಫಿಕೇಟ್ ಸಿನಿಮಾ ಪ್ರದರ್ಶಿಸುವ ಕಾನೂನನ್ನು ದೇಶದಲ್ಲಿ ಅನುಸರಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ, ಕರ್ನಾಟಕ ಸರ್ಕಾರಕ್ಕೆ ಸಿನಿಮಾ ವಿಚಾರವಾಗಿ ನೋಟಿಸ್ ಕೂಡ ನೀಡಿದೆ. ಇನ್ನು ಹೈಕೋರ್ಟ್​ನಲ್ಲಿ ಸಿನಿಮಾ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​, ಟ್ರಾನ್ಸ್​ಫರ್​ ಮಾಡಿಕೊಂಡಿದೆ. ಹೀಗಾಗಿ ಕರ್ನಾಟಕ ಹೈಕೋರ್ಟ್​ನಲ್ಲಿ ನಡೆಯಬೇಕಿದ್ದ ಮುಂದಿನ ಎಲ್ಲಾ ವಿಚಾರಣೆಗಳು ಸುಪ್ರೀಂ ಕೋರ್ಟ್​ನಲ್ಲಿಯೇ ನಡೆಯಲಿವೆ.

ಏನಿದು ಪ್ರಕರಣ..?

ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು. ಇದರಿಂದ ಕೆರಳಿದ್ದ ಕನ್ನಡಿಗರು ಅವರು ಅಭಿನಯಿಸಿದ ತಮಿಳು ಚಿತ್ರ ಥಗ್​ ಲೈಫ್ ಕರ್ನಾಟಕದಲ್ಲಿ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ತೀವ್ರ ವಿರೋಧದ ನಡುವೆಯೂ ಜೂನ್ 5ರಂದು ವರ್ಲ್ಡ್ ವೈಡ್‌ ರಿಲೀಸ್ ಆಗಿದೆ. ಆದರೆ ಕನ್ನಡಿಗರ ಹೋರಾಟ, ಪ್ರತಿಭಟನೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಡುಗಡೆಗೆ ಅನುಮತಿ ಸಿಕ್ಕಿರಲಿಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನಿಮಾ ಬಿಡುಗಡೆಯಾದ್ರೆ ಬಂದ್ ಮಾಡುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದರು.

ಕನ್ನಡ ಸಂಘಟನೆಗಳ ಹೋರಾಟದ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಅವರ ಚಿತ್ರತಂಡ ಭದ್ರತೆ ನೀಡುವಂತೆ  ಹೈಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ ಹೈಕೋರ್ಟ್ ಕ್ಷಮೆ ಕೇಳಿದ್ದರೆ ಮುಗಿದೇ ಹೋಗುತ್ತಿತ್ತು ಅಲ್ವಾ ಎಂದು ವಿಚಾರಣೆಯನ್ನು ಮುಂದೂಡಿತ್ತು. ಹೈಕೋರ್ಟ್ ಅರ್ಜಿ ವಿಚಾರಣೆ ಮುಂದೂಡಿರುವುದರಿಂದ ಥಗ್‌ ಲೈಫ್ ಚಿತ್ರತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮತ್ತು ಕರ್ನಾಟಕದಲ್ಲಿ ಪೊಲೀಸ್ ರಕ್ಷಣೆಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment