/newsfirstlive-kannada/media/post_attachments/wp-content/uploads/2025/06/IRAN-2.jpg)
ಅಮೆರಿಕಾ ಮತ್ತು ಇಸ್ರೇಲ್ನಿಂದ ಹತ್ಯೆಯ ಬೆದರಿಕೆ ಎದುರಿಸ್ತಿರುವ ಇರಾನ್ ಸರ್ವೋಚ್ಛ ನಾಯಕ ಖಮೇನಿ, ಉತ್ತರಾಧಿಕಾರಿ ಹುಡುಕಾಟ ಆರಂಭಿಸಿದ್ದಾರೆ. ನಾಲ್ವರಲ್ಲಿ ಮೂವರ ಹೆಸರನ್ನು ಫೈನಲ್ ಮಾಡಿದ್ದಾರೆ. ಹಿರಿಯ ಶಿಯಾ ಇಸ್ಲಾಮಿಕ್ ವಿದ್ವಾಂಸರಿಂದ ತಜ್ಞರ ಸಭೆಗೆ ಆಯ್ಕೆಯ ಹೊಣೆ ಒಪ್ಪಿಸಿದ್ದಾರೆ.
ಖಮೇನಿ ಆಯ್ಕೆ ಯಾರು?
ಆಯ್ಕೆ 1 : ಮೊಹಮ್ಮದ್ ಗೊಲ್ಲಪಾಯೇಗನಿ
- ಖಮೇನಿ ಆಪ್ತ ವಲಯದ ಅತ್ಯಂತ ನಂಬಿಕಸ್ಥ ವ್ಯಕ್ತಿ
- 1989ರಿಂದ ಖಮೇನಿ ವ್ಯವಹಾರಗಳನ್ನ ನೋಡ್ತಿದ್ದಾರೆ
- ಶಿಯಾ ಇಸ್ಲಾಮಿಕ್ನ ವಿದ್ವಾಂಸ, ಪರ್ಷಿಯನ್ ಕವಿ
- ಆದ್ರೆ, ವಯಸ್ಸು 82, ದೀರ್ಘಕಾಲದ ನಾಯಕತ್ವ ಕಷ್ಟ
ಆಯ್ಕೆ 2 : ಅಲಿ ಅಸ್ರರ್ ಹೆಜಾಜಿ
- ಖಮೇನಿ ಅವರ ರಾಜಕೀಯ ವ್ಯವಹಾರಗಳ ಮೇಲ್ವಿಚಾರಣೆ
- ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಅಲಿ ಅಸ್ರರ್
ಆಯ್ಕೆ 3 : ಅಲಿರೆಜಾ ಅರಾಫಿ
- ಖಮೇನಿ ಅವರ ಆಪ್ತ, ಶಿಯಾ ಧರ್ಮೋಪದೇಶಕ, ಬರಹಗಾರ
- 65 ವಯಸ್ಸು, 2022ರಿಂದ ಗಾರ್ಡಿಯನ್ ಕೌನ್ಸಿಲ್ನ ಮೆಂಬರ್
- 8 ವರ್ಷದಲ್ಲಿ 50 ಮಿಲಿಯನ್ ಜನ ಶಿಯಾಗಳಾಗಿ ಪರಿವರ್ತಿಸಿದ ‘ಖ್ಯಾತಿ’‘
ಆಯ್ಕೆ 4 : ಮೊಜ್ತಬಾ ಖಮೇನಿ
- ಇರಾನ್ ಸರ್ವೋಚ್ಛ ನಾಯಕ ಖಮೇನಿ ಅವರ 2ನೇ ಪುತ್ರ
- ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ ಮಹತ್ವದ ಪಾತ್ರ
- ದೇಶದ ಆಡಳಿತದ ಮೇಲೆ ಪ್ರಬಲ ಹಿಡಿತವನ್ನೂ ಹೊಂದಿದ್ದಾರೆ
- ಮೊಜ್ತಬಾ ಉತ್ತರಾಧಿಕಾರಿಯಾಗುವ ಕುರಿತು ಅನುಮಾನ
- ಥೀಯೋಲಾಜಿಕಲ್ ಶಾಸ್ತ್ರ ಹೊಂದಿಲ್ಲ ಅನ್ನೋ ಆರೋಪ
- ಮಗನನ್ನು ಮುಂದಿನ ನಾಯಕನಾಗಿ ರೂಪಿಸಲು ನಿರ್ಧಾರ
ಇದನ್ನೂ ಓದಿ: US ಏರ್ಸ್ಟ್ರೈಕ್ಗೆ ಇರಾನ್ ಆಕ್ರೋಶ.. ಇಸ್ರೇಲ್-ಇರಾನ್ ಯುದ್ಧಕ್ಕೆ ಸಂಬಂಧಿಸಿದ ಟಾಪ್ 10 ಅಪ್ಡೇಟ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ