/newsfirstlive-kannada/media/post_attachments/wp-content/uploads/2024/06/SURAJ-REVANNA-1.jpg)
ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮೇರೆಗೆ ಜೆಡಿಎಸ್​​ MLC ಸೂರಜ್​ ರೇವಣ್ಣ ಅರೆಸ್ಟ್​ ಆಗಿದ್ದಾರೆ. ಸಂತ್ರಸ್ತನ ದೂರು ಆಲಿಸಿದ ಪೊಲೀಸರು ಎಫ್​ಐಆರ್​ ದಾಖಲಿಸಿ ತನಿಖೆ ನಡೆಸಿದ್ದಾರೆ. ಈ ವೇಳೆ ಹಾಸನ ಸೆನ್​ ಠಾಣೆ ಪೊಲೀಸರು ಸೂರಜ್​ ರೇವಣ್ಣನವರನ್ನು ಬಂಧಿಸಿದ್ದಾರೆ.
ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆತನನ್ನು ಪೊಲೀಸರು ಮೆಡಿಕಲ್​ ಚೆಕಪ್​ಗೆ ಒಳಪಡಿಸಬೇಕಾಗಿತ್ತು. ಆದರೆ ಸಂತ್ರಸ್ತ ಹಾಸನದಲ್ಲಿ ಮೆಡಿಕಲ್ ಟೆಸ್ಟ್​ ಮಾಡಲು ನಿರಾಕರಣೆ ಮಾಡಿದ್ದಾನೆ. ಕೊನೆಗೆ ತಡರಾತ್ರಿ ಸಂತ್ರಸ್ತನನ್ನ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ರಾತ್ರಿ ಮೆಡಿಕಲ್ ಟೆಸ್ಟ್
ಬಿಪಿ, ಶುಗರ್, ಇಸಿಜಿ ಮಾಡಿಸಿದ್ದಾರೆ. ಇನ್ನು ವೈದ್ಯಕೀಯ ಪರೀಕ್ಷೆ ಮೇಲೆ ಸಂತ್ರಸ್ತನ ದೇಹದ ಮೇಲೆ ಕಚ್ಚಿದ ಕಲೆಗಳ ಪತ್ತೆಯಾಗಿವೆ.
/newsfirstlive-kannada/media/post_attachments/wp-content/uploads/2024/06/suraj3.jpg)
ಇದನ್ನೂ ಓದಿ: Breaking: ಅಸಹಜ ಲೈಂಗಿಕ ಕಿರುಕುಳ ಆರೋಪ.. ಜೆಡಿಎಸ್ ಎಂಎಲ್​ಸಿ ಸೂರಜ್ ರೇವಣ್ಣ ಅರೆಸ್ಟ್​
ಸದ್ಯ ಪ್ರಕರಣ ಆಲಿಸಿದ ಪೊಲೀಸರು ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮೇರೆಗೆ ಸೂರಜ್​ ರೇವಣ್ಣ ಅವರನ್ನು ಅರೆಸ್ಟ್​ ಮಾಡಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಸಲಿಂಗ ಲೈಂಗಿಕ ಕೇಸ್​.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ಸೂರಜ್​ ರೇವಣ್ಣ ವಿಚಾರಣೆ
ಇತ್ತೀಚೆಗೆ ಕಿಡ್ನಾಪ್​​ ಕೇಸ್​ ವಿಚಾರವಾಗಿ ಜೆಡಿಎಸ್​ ಹೊಳೆನರಸೀಪುರದ ಶಾಸಕರಾದ ಹೆಚ್​.ಡಿ ರೇವಣ್ಣ ಅರೆಸ್ಟ್​ ಆಗಿದ್ದರು. ಬಳಿಕ ಮಗ, ಮಾಜಿ ಸಂಸದರಾದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಸಂಬಂಧ ಬಂಧನವಾಯಿತು. ಇದೀಗ ರೇವಣ್ಣ ಮತ್ತೋರ್ವ ಮಗ​ ಜೆಡಿಎಸ್​​ MLC ಸೂರಜ್​ ರೇವಣ್ಣ ಅರೆಸ್ಟ್​ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us