newsfirstkannada.com

ಹಾಸನದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ಸೂರಜ್ ರೇವಣ್ಣ ಹೇಳಿದ್ದೇನು?​​

Share :

Published June 22, 2024 at 7:49pm

  ಸೂರಜ್‌ ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪ

  ಕಾನೂನಿನಲ್ಲಿ ತನಿಖೆ ಆಗಲಿ, ಸತ್ಯ ಹೊರಗೆ ಬರಲಿ ಎಂದ ಸೂರಜ್ ರೇವಣ್ಣ

  ರಾಜ್ಯದ ಜನತೆ ನೋಡ್ತಾರೆಂದ ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ

ಹಾಸನ: ಹೆಚ್‌.ಡಿ ರೇವಣ್ಣ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ. ಹಾಸನದ ಅರಕಲಗೂಡಿನ ಯುವಕನೊಬ್ಬ ಈ ಕುರಿತು  ಬೆಂಗಳೂರಿಗೆ ಬಂದು ಡಿಸಿ ಹಾಗೂ ಐಜಿಪಿಗೆ ದೂರು ನೀಡಿದ್ದರು. ಇದೀಗ ಈ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ.. ಸಂತ್ರಸ್ತ ಯುವಕನ ಆರೋಪ ಏನು..?

ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಖುದ್ದು MLC ಸೂರಜ್ ರೇವಣ್ಣ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಷಡ್ಯಂತ್ರ ಎಷ್ಟು ದಿನದಿಂದ ನಡೆಯುತ್ತಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕಾರ ಮಾಡುತ್ತೇನೆ. ಕಾನೂನು ವ್ಯವಸ್ಥೆಯಲ್ಲಿ ಏನು ತೀರ್ಮಾನ ಆಗಬೇಕು ಆಗುತ್ತೆ. ಅವನ ಮೇಲೆಯೂ ಎಫ್‌ಐಆರ್ ಆಗಿದೆ. ಕಾನೂನಿನಲ್ಲಿ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಗೆ ಬರಲಿ. ಸತ್ಯಾ ಏನಿದೆ ಅದು ಹೊರಗೆ ಬಂದೇ ಬರುತ್ತೆ. ನಾಡಿನ ಕಾನೂನಿನ ಮೇಲೆ ನನಗೆ ವಿಶ್ವಾಸವಿದೆ. ಇದು ಸಂಪೂರ್ಣ ರಾಜಕೀಯ ಷಡ್ಯಂತ್ರ. ಅದರ ಬಗ್ಗೆ ನಾನು ಇವತ್ತು ಏನು ಪ್ರತಿಕ್ರಿಯೆ ಕೊಡಲ್ಲ. ಇಂತಹವರು, ಅಂತಹವರು, ಅವರು, ಇವರು ಮಾಡಿದ್ರು ಅಂತ ನಾನು ಚರ್ಚೆ ಮಾಡಲು ಹೋಗಲ್ಲ. ತನಿಖೆ ಪ್ರಗತಿಯಲ್ಲಿದೆ, ಸತ್ಯಾಸತ್ಯತೆ ಹೊರಗೆ ಬರುತ್ತೆ. ಇಡೀ ರಾಜ್ಯದ ಜನತೆ ಅದನ್ನು ನೋಡ್ತಾರೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ಸೂರಜ್ ರೇವಣ್ಣ ಹೇಳಿದ್ದೇನು?​​

https://newsfirstlive.com/wp-content/uploads/2024/06/suraj.jpg

Load More