Advertisment

ಹಿರಿಮಗ, ಕಿರಿಮಗ ಇಬ್ಬರೂ ಜೈಲಲ್ಲಿ.. ಸಂಕಷ್ಟಕ್ಕೆ ಸಿಲುಕಿದ ರೇವಣ್ಣ.. ಇಂದು ನಡೆಯಲಿದೆ ಮಹತ್ವದ ಬೆಳವಣಿಗೆ

author-image
Ganesh
Updated On
ಹಿರಿಮಗ, ಕಿರಿಮಗ ಇಬ್ಬರೂ ಜೈಲಲ್ಲಿ.. ಸಂಕಷ್ಟಕ್ಕೆ ಸಿಲುಕಿದ ರೇವಣ್ಣ.. ಇಂದು ನಡೆಯಲಿದೆ ಮಹತ್ವದ ಬೆಳವಣಿಗೆ
Advertisment
  • ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸೂರಜ್‌ಗೆ ಜೈಲು
  • 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೊಟ್ಟ ನ್ಯಾಯಾಲಯ
  • ಇಂದು ಬಾಡಿ ವಾರೆಂಟ್ ಮೇಲೆ ಸೂರಜ್​ ಸಿಐಡಿ ಕಸ್ಟಡಿಗೆ

ಅಸಹಜ ಲೈಂಗಿಕ ಕಿರುಕುಳ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇಂದು ಸಿಐಡಿ ಅಧಿಕಾರಿಗಳು ಬಾಡಿ ವಾರಂಟ್ ಮೇಲೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಮಾಜಿ ಸಚಿವ ಹೆಚ್​ಡಿ ರೇವಣ್ಣರಿಗೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿದೆ. ಪ್ರಜ್ವಲ್ ಎಸ್​ಐಟಿ ಕಸ್ಟಡಿಯಲ್ಲಿದ್ರೆ ಈಗ ಮತ್ತೊಬ್ಬ ಪುತ್ರ ಸೂರಜ್ ರೇವಣ್ಣ ಕೂಡ ಲಾಕ್ ಆಗಿದ್ದಾರೆ.

Advertisment

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸೂರಜ್‌ಗೆ ಜೈಲು
ಜೆಡಿಎಸ್ ಯುವ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಂಎಲ್‌ಸಿ ಡಾ. ಸೂರಜ್‌ ರೇವಣ್ಣರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮೊನ್ನೆ ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ನಿನ್ನೆ ಬೆಳಗ್ಗೆ ಹಾಸನದ ಸೆನ್​ ಠಾಣೆ ಪೊಲೀಸರು ಸೂರಜ್​ನನ್ನು ಬಂಧಿಸಿದ್ದರು. ಬಳಿಕ ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್‌ ಮುಂದೆ ಸೂರಜ್​ನನ್ನು ಹಾಜರುಪಡಿಸಲಾಗಿತ್ತು. ಅಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್‌ನ ಜಡ್ಜ್ ಆದೇಶ ಹೊರಡಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ತಡವಾಗಿ ಆಗಮಿಸಿದ ಹಿನ್ನೆಲೆ ಇಂದು ಜೈಲಾಧಿಕಾರಿಗಳು ಸೂರಜ್​ಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಿದ್ದಾರೆ.

ಇದನ್ನೂ ಓದಿ:ಐದು ಪ್ರಮುಖ ಉದ್ದೇಶ.. ಮೋದಿ 3.O ಸರ್ಕಾರಕ್ಕೆ ಮೊದಲ ಅಧಿವೇಶನದ ಸವಾಲು..

publive-image

ಇಂದು ಬಾಡಿ ವಾರೆಂಟ್ ಮೇಲೆ ಸೂರಜ್​ ಸಿಐಡಿ ಕಸ್ಟಡಿಗೆ
ಇನ್ನು ಇಂದು ಹೆಚ್ಚಿನ ವಿಚಾರಣೆಗೆ ಸೂರಜ್​ನನ್ನು ಸಿಐಡಿ ಅಧಿಕಾರಿಗಳು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲಿದ್ದಾರೆ. ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ವಿಚಾರಣೆ ಹಾಗೂ 161 ಹೇಳಿಕೆ ಪಡೆಯಲಿದ್ದಾರೆ. ಇನ್ನು ಈ ಬಗ್ಗೆ ಸೂರಜ್ ಪರ ವಕೀಲ ನಿಖಿಲ್ ಕಾಮತ್​ ಪ್ರತಿಕ್ರಿಯಿಸಿದ್ದು, ಸಿಐಡಿಗೆ ಪ್ರಕರಣ ವರ್ಗಾವಣೆ ಆಗಿದೆ. ಸಿಐಡಿ ಅಧಿಕಾರಿಗಳು ಓಪನ್ ಕೋರ್ಟ್​ನಲ್ಲಿ ಕಸ್ಟಡಿಗೆ ಪಡೆಯಲು ಅರ್ಜಿ ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ.

Advertisment

ಸೂರಜ್ ರೇವಣ್ಣ ಜೈಲು ಸೇರುತ್ತಿದ್ದಂತೆ ರಾಜಕೀಯ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದರಲ್ಲಿ ನಾವು ಏನು ಹೇಳೋಕೆ ಬರಲ್ಲ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಅಂತ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ. ನಿಜವಾದ ಘಟನೆ ಆಗಿದ್ದರೆ ಸರ್ಕಾರ ವಿಚಾರಣೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಅಂತ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ಜೆಡಿಎಸ್ ಜೊತೆ ವೈಯಕ್ತಿಕ ಮೈತ್ರಿ ಇಲ್ಲ. ಪಕ್ಷದೊಂದಿಗೆ ಮೈತ್ರಿ ಇದೆ. ಅಂತಹ ಕೆಲಸ ನಮ್ಮ ಪಕ್ಷದವರೇ ಮಾಡಿದ್ರೂ ಕ್ರಮ ಆಗಬೇಕು ಅಂತ ಹೇಳಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತಪ್ಪು ಯಾರೇ ಮಾಡಿದರು ತಪ್ಪೇ. ಪೊಲೀಸರು ನಿಕ್ಷಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ. ಇದರಲ್ಲಿ ಯಾವುದೇ ಷಡ್ಯಂತ್ರ ಇಲ್ಲ ಅಂತ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ:‘ಮಕ್ಕಳಿಗೆ ಬೈಕ್ ಕೊಡ್ತಿದ್ದೀರಾ..’ ಪೋಷಕರೇ ಇನ್ನಾದರೂ ಪಾಠ ಕಲೀರಿ..!

ಒಟ್ಟಾರೆ ಅಸಹಜ ಲೈಂಗಿಕ ಕಿರುಕುಳ ಅಂದ್ರೆ ಸಲಿಂಗ ಕಾಮದ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೆವಣ್ಣ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದು ಪೊಲೀಸರು ಬಾಡಿ ವಾರೆಂಟ್ ಮೂಲಕ ಸೂರಜ್​ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment