Advertisment

ಎಣ್ಣೆ ಬೇಕು ಅಣ್ಣ ಖಾಲಿಯಾಯ್ತು ಚಿನ್ನ.. ಬ್ಯಾಂಕಾಕ್​ಗೆ ಹೊರಟ 175 ಪ್ಯಾಸೆಂಜರ್‌ ಕುಡಿದಿದ್ದು ಎಷ್ಟು ಗೊತ್ತಾ?

author-image
Gopal Kulkarni
Updated On
ಎಣ್ಣೆ ಬೇಕು ಅಣ್ಣ ಖಾಲಿಯಾಯ್ತು ಚಿನ್ನ.. ಬ್ಯಾಂಕಾಕ್​ಗೆ ಹೊರಟ 175 ಪ್ಯಾಸೆಂಜರ್‌ ಕುಡಿದಿದ್ದು ಎಷ್ಟು ಗೊತ್ತಾ?
Advertisment
  • 4 ಗಂಟೆ ಪ್ರಯಾಣ, 175 ಪ್ರಯಾಣಿಕರು 15 ಲೀಟರ್ ಮದ್ಯ ಖಾಲಿ
  • ಮತ್ತೆ ಬೇಕೆಂದರೂ ಸಿಗದ ಮದ್ಯ, ಅತೃಪ್ತ ಪ್ರಯಾಣಿಕರ ವೇದನೆ
  • ತಮಗೆ ಮದ್ಯ ಕಡಿಮೆಯಾಗಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಯಾಣಿಕ

ಗುಜರಾತ್​ನ ಸೂರತ್​ನಿಂದ ಬ್ಯಾಂಕಾಕ್​ಗೆ ಏರ್​ ಇಂಡಿಯಾದ ಸೇವೆಯೂ ಇತ್ತೀಚೆಗಷ್ಟೇ ಆರಂಭವಾಗಿದೆ. ಮೊದಲ ದಿನವೇ ಎಣ್ಣೆ ಹೊಡೆಯುವ ವಿಚಾರದಲ್ಲಿ ಪ್ರಯಾಣಿಕರು ದಾಖಲೆಯನ್ನೇ ಬರೆದಿದ್ದಾರೆ. ಎಕ್ಸ್​ ಖಾತೆಯಲ್ಲಿ ಈ ಒಂದು ವಿಷಯ ದೊಡ್ಡದಾಗಿ ವೈರಲ್ ಆಗಿದೆ.
ಬೋಯಿಂಗ್​ 737-8 ವಿಮಾನದಲ್ಲಿ ಶುಕ್ರವಾರ ಸೂರತ್​ನಿಂದ ಬ್ಯಾಂಕಾಕ್​ಗೆ ಮೊದಲ ಪ್ರಯಾಣ ಆರಂಭಿಸಿದೆ. 175 ಪ್ರಯಾಣಿಕರನ್ನು ಬ್ಯಾಂಕಾಕ್​ ಕರೆದುಕೊಂಡು ಹೊರಟಿದೆ. ಆದ್ರೆ ಪ್ರಯಾಣಿಕರು ಲಿಕ್ಕರ್ ಕುಡಿಯುವ ವಿಚಾರದಲ್ಲಿ ದೊಡ್ಡ ದಾಖಲೆಯನ್ನೇ ಬರೆದಿದ್ದಾರೆ. 1.8 ಲಕ್ಷ ರೂಪಾಯಿ ಮೌಲ್ಯದ ಒಟ್ಟು 15 ಲೀಟರ್ ಮದ್ಯವನ್ನ ಕೇವಲ ನಾಲ್ಕೇ ನಾಲ್ಕು ಗಂಟೆಯಲ್ಲಿ ಕುಡಿದು ಮುಗಿಸಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ಸ್ನಾಕ್ಸ್​ನ್ನ ಖಾಲಿ ಮಾಡಿದ್ದಾರೆ.

Advertisment

ಇದನ್ನೂ ಓದಿ:ಸನ್ನಿ ಲಿಯೋನ್‌ಗೆ ರಾಜ್ಯ ಸರ್ಕಾರದ ಯೋಜನೆಯಲ್ಲಿ ಪ್ರತಿ ತಿಂಗಳು ₹1000; ಕಾರಣವೇನು?

ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋವೊಂದು ಶೇರ್ ಆಗಿದೆ. ಖಾಲಿಯಾಗಿರುವ ಮದ್ಯದ ಬಾಟಲ್​ಗಳನ್ನ ತೋರಿಸಿ ವಿಡಿಯೋ ಮಾಡಿದ್ದಾರೆ. ವೈರಲ್ ಆದ ಪೋಸ್ಟ್​ನಲ್ಲಿ ಎಕ್ಸ್ ಖಾತೆದಾರ ಏರ್​ ಇಂಡಿಯಾದ ಮೊದಲ ಸೂರತ್​ನಿಂದ ಬ್ಯಾಂಕಾಕ್​ಗೆ ಹೊರಟ ವಿಮಾನದಲ್ಲಿ ಶೇಕಡಾ 98 ರಷ್ಟು ಪ್ರಯಾಣಿಕರಿದ್ದಾರೆ. ಮೊದಲ ದಿನವೇ ಪ್ರಯಾಣಿಕರು ವಿಮಾನದಲ್ಲಿ ಸ್ಟಾಕ್ ಇದ್ದಿದ್ದ ಎಲ್ಲಾ ಮದ್ಯ ವಿಸ್ಕಿ, ಬೀಯರ್, ಒಟ್ಟು 15 ಲೀಟರ್​ ಮದ್ಯ ಕೇವಲ 4 ಗಂಟೆಯ ಪ್ರಯಾಣದಲ್ಲಿ ಖಾಲಿ ಆಗಿದೆ ಎಂದು ಹೇಳಿದ್ದಾರೆ

Advertisment


">December 21, 2024

ವಿಡಿಯೋದಲ್ಲಿ ಈ ವಿಷಯನ್ನು ನಗು ನಗುತ್ತಲೇ ಹೇಳಿಕೊಂಡಿದ್ದಾರೆ. ಅದು ಮಾತ್ರವಲ್ಲ ಎಲ್ಲಾ ಪ್ರಯಾಣಿಕರಿಗೂ ಮದ್ಯ ಸಾಕಷ್ಟು ಪ್ರಮಾಣದಲ್ಲಿ ಸಿಗಲಿಲ್ಲ. ತೃಪ್ತಿದಾಯಕವಾಗಿ ಕುಡಿಯಲು ಆಗಲಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ. ಅದಕ್ಕೆ ಕಾರಣ ಗುಜರಾತ್​ನಲ್ಲಿ ನಿಷೇಧಗೊಂಡಿರುವ ಮದ್ಯ ಮಾರಾಟವೇ ಕಾರಣ ಎಂದು ಕೂಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment