newsfirstkannada.com

ಬರೋಬ್ಬರಿ 200 ಕೋಟಿ ಆಸ್ತಿ ದಾನ ಮಾಡಿದ ಖ್ಯಾತ ಉದ್ಯಮಿ ದಂಪತಿ; ಕಾರಣವೇನು?

Share :

Published April 15, 2024 at 4:34pm

    ಕನ್ಸ್‌ಸ್ಟ್ರಕ್ಷನ್‌ ಉದ್ಯಮಿ ಆಗಿರುವ ಭವೇಶ್ ಭಾಯಿ ಭಂಡಾರಿ ನಿರ್ಧಾರ

    ಇಬ್ಬರು ಮಕ್ಕಳ ಹಾದಿಯಲ್ಲೇ ಹೆಜ್ಜೆ ಹಾಕಲು ನಿರ್ಧರಿಸಿದ ತಂದೆ, ತಾಯಿ

    ಏಪ್ರಿಲ್ 22ರಂದು ಹಣ, ಆಸ್ತಿ, ಸಂಪತ್ತಿನ ಆಸೆಯಿಂದ ದೂರವಾಗಲು ತೀರ್ಮಾನ

ಸೂರತ್‌: ಈಗಂತೂ ಯಾರಾದ್ರೂ 100 ರೂಪಾಯಿ ದಾನ ಮಾಡಬೇಕಾದ್ರೂ ನೂರು ಬಾರಿ ಯೋಚ್ನೆ ಮಾಡ್ತಾರೆ. ಆದರೆ, ಗುಜರಾತ್ ಮೂಲದ ಉದ್ಯಮಿ ಭವೇಶ್ ಭಾಯಿ ಭಂಡಾರಿ ದಂಪತಿ ಬರೋಬ್ಬರಿ 200 ಕೋಟಿ ರೂಪಾಯಿಯ ಆಸ್ತಿಯನ್ನು ದಾನ ಮಾಡಿದ್ದಾರೆ. ತಮ್ಮ ಪ್ರೀತಿಯ ಇಬ್ಬರು ಮಕ್ಕಳ ಆಸೆಯಂತೆ ಆಸ್ತಿ, ಅಂತಸ್ಥಿನ ವ್ಯಾಮೋಹ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಉದ್ಯಮಿ ಭವೇಶ್ ಭಾಯಿ ಭಂಡಾರಿಯ 16 ವರ್ಷದ ಮಗ ಹಾಗೂ 19 ವರ್ಷದ ಮಗಳು 2022ರಲ್ಲಿ ಜೈನ ಸನ್ಯಾಸ ಧೀಕ್ಷೆ ಪಡೆದಿದ್ದರು. ಇದೀಗ ಮಕ್ಕಳ ಹಾದಿಯಲ್ಲೇ ಹೆಜ್ಜೆ ಹಾಕಿರುವ ತಂದೆ, ತಾಯಿ ಕೂಡ ಜೈನ ಮುನಿಯಾಗಿದ್ದಾರೆ.

ಇದನ್ನೂ ಓದಿ: BREAKING: ಸಚಿವ ಜಮೀರ್​​ ಅಹ್ಮದ್​ ಖಾನ್​​ ದಿಢೀರ್​ ಆಸ್ಪತ್ರೆಗೆ ದಾಖಲು; ಅಂಥದ್ದೇನಾಯ್ತು?

ಸೂರತ್‌ನ ಹಿಮ್ಮತ್‌ನಗರದ ಭವೇಶ್ ಭಾಯಿ ಭಂಡಾರಿ ಅವರು ಕನ್ಸ್‌ಸ್ಟ್ರಕ್ಷನ್‌ ಉದ್ಯಮಿ ಆಗಿದ್ದರು. ಭವೇಶ್ ಭಾಯಿ ಭಂಡಾರಿ ದಂಪತಿ ಕಳೆದ ಫೆಬ್ರವರಿಯಲ್ಲೇ ತಮ್ಮ ಹಣ, ಆಸ್ತಿಯನ್ನೆಲ್ಲಾ ತ್ಯಜಿಸಿ ಮೋಕ್ಷದ ದಾರಿಯಲ್ಲಿ ಸಾಗಲು ನಿರ್ಧರಿಸಿದ್ದರು. ಏಪ್ರಿಲ್ ತಿಂಗಳ ಅಂತ್ಯದಲ್ಲಿ ಅಧಿಕೃತವಾಗಿ ಸನ್ಯಾಸ ದೀಕ್ಷೆ ಸ್ವೀಕರಿಸುವ ಕಾರ್ಯಕ್ರಮ ನಡೆಯಲಿದೆ. ಆ ಸಮಾರಂಭದ ಬಳಿಕ ಎಲ್ಲಾ ಆಸೆ, ವ್ಯಾಮೋಹಗಳನ್ನು ಬಿಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.

ಇದೇ ಏಪ್ರಿಲ್ 22ರಂದು ಭವೇಶ್ ಭಾಯಿ ಭಂಡಾರಿ ದಂಪತಿ ಸನ್ಯಾಸ ದೀಕ್ಷೆ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿದೆ. ಅಂದು ಸಂಬಂಧಿಕರು ಸೇರಿದಂತೆ ಅನೇಕ ಕುಟುಂಬ ಸದಸ್ಯರು ದಂಪತಿಗೆ ಶುಭ ಹಾರೈಸುತ್ತಿದ್ದಾರೆ. ಇದಾದ ಬಳಿಕ ಇವರು ಎಲ್ಲಾ ಭೌತಿಕ ವಸ್ತುಗಳ ಮೇಲಿನ ಆಸೆ ಬಿಟ್ಟು ಮೋಕ್ಷದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 200 ಕೋಟಿ ಆಸ್ತಿ ದಾನ ಮಾಡಿದ ಖ್ಯಾತ ಉದ್ಯಮಿ ದಂಪತಿ; ಕಾರಣವೇನು?

https://newsfirstlive.com/wp-content/uploads/2024/04/Gujarat-200-Crore.jpg

Load More