/newsfirstlive-kannada/media/post_attachments/wp-content/uploads/2025/02/Suresh-Raina_Kohli.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಶುರುವಾಗಲು ಇನ್ನೇನು ಕೇವಲ 20 ದಿನ ಬಾಕಿ ಇದೆ. ಕಳೆದ 17 ಸೀಸನ್ಗಳಿಂದಲೂ ಕಪ್ ಗೆಲ್ಲುವಲ್ಲಿ ಎಡವಿದ ಆರ್ಸಿಬಿ ಈ ಬಾರಿ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡ ಕಟ್ಟಿದೆ. ಅದರಲ್ಲೂ ಯುವ ಆಟಗಾರರಿಗೆ ಮಣೆ ಹಾಕಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಟ್ರೋಫಿ ಗೆಲ್ಲಲು ಈಗಾಗಲೇ ತಯಾರಿ ಶುರು ಮಾಡಿದೆ.
ಒಂದು ತಿಂಗಳಿಗೆ ಮುನ್ನವೇ ಎಂ. ಚಿನ್ನಸ್ವಾಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆರ್ಸಿಬಿ ತಂಡದ ಸ್ಟಾರ್ ಆಟಗಾರರು ತಯಾರಿ ಆರಂಭಿಸಿದ್ದಾರೆ. ಈ ಬಾರಿ ಕಪ್ ಗೆಲ್ಲಲೇಬೇಕು ಎಂದು ಆರ್ಸಿಬಿ ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ಬಂದಿದೆ. ಹಾಗಾಗಿ ಆರ್ಸಿಬಿ ಹೆಡ್ ಕೋಚ್ ಆ್ಯಂಡಿ ಫ್ಲವರ್ ದೇಶೀಯ ಆಟಗಾರರೊಂದಿಗೆ ಅಭ್ಯಾಸ ಮಾಡಿಸುತ್ತಿದ್ದಾರೆ. ಇದರ ಮಧ್ಯೆ ಬಿಗ್ ಅಪ್ಡೇಟ್ ಒಂದಿದೆ.
ಆರ್ಸಿಬಿಗೆ ಸುರೇಶ್ ರೈನಾ ಎಂಟ್ರಿ
ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಆಗಿರೋ ಸ್ಟಾರ್ ಪ್ಲೇಯರ್ ಸುರೇಶ್ ರೈನಾ. ಇವರು ಹಲವು ವರ್ಷಗಳ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಡಿದವರು. ಈಗ ಐಪಿಎಲ್ ಸೇರಿದಂತೆ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಆಗಿದ್ದಾರೆ. ಬರೋಬ್ಬರಿ 2 ವರ್ಷಗಳ ಹಿಂದೆ ನಿವೃತ್ತಿ ಆದ ಇವರು ಮತ್ತೆ ಐಪಿಎಲ್ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ. 2025ರ ಐಪಿಎಲ್‌ನಲ್ಲಿ ಆರ್ಸಿಬಿ ತಂಡದ ಫೀಲ್ಡಿಂಗ್ ಕೋಚ್ ಆಗಿ ರೈನಾ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.
🚨 SURESH RAINA IN RCB🚨
- Suresh Raina is likely to become a fielding coach of RCB in IPL 2025.[Revyez sports]. pic.twitter.com/h0E9sXX85L
— mufaddla parody (@mufaddl_parody)
🚨 SURESH RAINA IN RCB🚨
- Suresh Raina is likely to become a fielding coach of RCB in IPL 2025.[Revyez sports]. pic.twitter.com/h0E9sXX85L— muffatball vikrant (@Vikrant_1589) February 26, 2025
">February 26, 2025
2025ರ ಐಪಿಎಲ್ಗೆ ಮೇಜರ್ ಸರ್ಜರಿ
2024ರ ಐಪಿಎಲ್‌ನಲ್ಲಿ ಪ್ಲೇ ಆಫ್ ಬಹಳ ರೋಚಕತೆಯಿಂದ ಕೂಡಿತ್ತು. ಆರಂಭದಲ್ಲಿ ಸತತ ಸೋಲು ಕಂಡಿದ್ದ ಆರ್ಸಿಬಿ ಬಳಿಕ 7 ಪಂದ್ಯ ಗೆದ್ದು ಆರ್ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ಬಳಿಕ ಸೆಮೀಸ್ನಲ್ಲಿ ರಾಜಸ್ಥಾನ್ ಮೇಲೆ ಸೋತು ನಿರಾಸೆ ಮೂಡಿಸಿದ್ರು. ಹಾಗಾಗಿ ಮುಂದಿನ ಸೀಸನ್ಗೆ ಆರ್ಸಿಬಿ ತಂಡದಲ್ಲಿ ಮೇಜರ್ ಸರ್ಜರಿ ಆಗಲಿದೆ ಎಂದು ಫ್ಯಾನ್ಸ್ ನಿರೀಕ್ಷೆ ಮಾಡಿದ್ದರು.
ನಿರೀಕ್ಷೆಯಂತೆ ಹರಾಜಿಗೆ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿತ್ತು. ಅದಕ್ಕೆ ತಕ್ಕಂತೆ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಮಾತ್ರ ರೀಟೈನ್ ಮಾಡಿಕೊಂಡು ಎಲ್ಲರನ್ನು ರಿಲೀಸ್ ಮಾಡಲಾಗಿತ್ತು. ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್, ಜೋಶ್ ಹೇಜಲ್ವುಡ್, ಜೇಕಬ್ ಬೆಥೆಲ್, ಭುವನೇಶ್ವರ್ ಕುಮಾರ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಖರೀದಿ ಮಾಡಿದೆ. ಈ ಬಾರಿ ತಂಡ ಬಲಿಷ್ಠವಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಸದ್ಯ ನಡೆಯುತ್ತಿರೋ ಆರ್ಸಿಬಿ ಕ್ಯಾಂಪ್ನಲ್ಲಿ ಕೃನಾಲ್ ಪಾಂಡ್ಯ, ಭುವಿ, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಯಶ್ ದಯಾಳ್ ಮತ್ತು ರಸಿಖ್ ದಾರ್ ಸೇರಿ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ:ರಾತ್ರಿ ಊಟ ಆಗುತ್ತಿದ್ದಂತೆ ಈ ತಪ್ಪು ಮಾಡ್ತಿದ್ರೆ ಇಂದೇ ಬಿಟ್ಟುಬಿಡಿ! ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ