Advertisment

KanguvaTrailer: ಸೂರ್ಯನ ಅಬ್ಬರ, ಬಾಬಿ ಡಿಯೋಲ್ ಆರ್ಭಟ.. ಕಂಗುವ ಟ್ರೈಲರ್‌ಗೆ ಕಳೆದೋದ ಫ್ಯಾನ್ಸ್‌!

author-image
admin
Updated On
KanguvaTrailer: ಸೂರ್ಯನ ಅಬ್ಬರ, ಬಾಬಿ ಡಿಯೋಲ್ ಆರ್ಭಟ.. ಕಂಗುವ ಟ್ರೈಲರ್‌ಗೆ ಕಳೆದೋದ ಫ್ಯಾನ್ಸ್‌!
Advertisment
  • ಸೂರ್ಯನ ಬಹು ನಿರೀಕ್ಷಿತ ಕಂಗುವ ಟ್ರೈಲರ್‌ ರಿಲೀಸ್!
  • ನನಗೇ ನಂಬಲಾಗದಷ್ಟು ಹೆಮ್ಮೆಯಾಗುತ್ತಿದೆ ಎಂದ ತಮಿಳು ನಟ
  • ಸೂರ್ಯ, ಬಾಬಿ ಡಿಯೋಲ್ ಭರ್ಜರಿ ಆ್ಯಕ್ಷನ್ ಕಂಗುವ ರಿಲೀಸ್ ಯಾವಾಗ?

ತಮಿಳು ನಟ ಸೂರ್ಯ ಅಭಿಮಾನಿಗಳು ಕಾಯುತ್ತಿದ್ದ ಬಹು ನಿರೀಕ್ಷಿತ ಕಂಗುವ ಟ್ರೈಲರ್ ಭರ್ಜರಿಯಾಗಿ ಬಿಡುಗಡೆಯಾಗಿದೆ. ಸೂರ್ಯ ಹಾಗೂ ಬಾಬಿ ಡಿಯೋಲ್ ರಣಾರ್ಭಟದ ದೃಶ್ಯವೇ ಟ್ರೈಲರ್‌ ವಿಶೇಷತೆಯಾದ್ರೆ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಕಂಗುವ ಟ್ರೈಲರ್ ವರ್ಲ್ಡ್‌ ವೈಡ್‌ ಟ್ರೆಂಡಿಂಗ್‌ನಲ್ಲಿದೆ.

Advertisment

ಇದನ್ನೂ ಓದಿ: ‘ಭೀಮ’ ಭರ್ಜರಿ ಕಲೆಕ್ಷನ್.. ದುನಿಯಾ ವಿಜಯ್​ 3 ದಿನದಲ್ಲಿ ಸಂಪಾದಿಸಿದೆಷ್ಟು ಗೊತ್ತಾ?​​

ನಟ ಸೂರ್ಯ ಅವರು ಕಂಗುವ ಟ್ರೈಲರ್‌ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಅದ್ಭುತ. ಇಡೀ ತಂಡದ ಕಾರ್ಯ ನನಗೆ ನಂಬಲಾಗದಷ್ಟು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಕಂಗುವ ಟ್ರೈಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

publive-image

ಕಂಗುವ ಚಿತ್ರ ಸೂರ್ಯ ಅಭಿಮಾನಿಗಳನ್ನು ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋಗಲಿದೆ. ಭರ್ಜರಿ ಆ್ಯಕ್ಷನ್ ಸೀನ್‌ಗಳು ಸಿನಿರಸಿಕರಿಗೆ ರಸದೌತಣ ನೀಡಲಾಗಿದೆ. ಕಂಗುವ ಅಂದ್ರೆ ತಮಿಳಿನಲ್ಲಿ ಬೆಂಕಿ ಎಂದು ಅರ್ಥ. ಬೆಂಕಿ ಅನ್ನೋ ಹಾಗೇ ಕಂಗುವ ಟ್ರೈಲರ್‌ನಲ್ಲಿ ಬೆಂಕಿಯಂತಹ ಎಂಟ್ರಿಯನ್ನು ಸೂರ್ಯ ನೀಡಿದ್ದಾರೆ.

Advertisment

publive-image

ಕಂಗುವ ಸಿನಿಮಾದಲ್ಲಿ ಸೂರ್ಯನಂತೆ ಬಾಲಿವುಡ್ ನಟ ಬಾಬಿ ಡಿಯೋಲ್ ಅವರು ಉದ್ಧಿರನ್‌ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಎರಡು ಬುಡಕಟ್ಟು ಸಮುದಾಯದ ನಾಯಕರ ಕಾದಾಟ ರಣರೋಚಕವಾಗಿದೆ. ಕಂಗುವ ಸಿನಿಮಾವನ್ನು ನಿರ್ದೇಶಕ ಸಿವಾ ಬಹಳ ಶ್ರಮಪಟ್ಟು ಚಿತ್ರೀಕರಿಸಿದ್ದಾರೆ.

ಇದೇ ದಸರಾ ಹಬ್ಬಕ್ಕೆ ಅಂದ್ರೆ 10.10.2024ಕ್ಕೆ ಕಂಗುವ ಸಿನಿಮಾ ಜಗತ್ತಿನಾದ್ಯಂತ ರಿಲೀಸ್ ಆಗುತ್ತಿದೆ. ಕಂಗುವ ಅಬ್ಬರವನ್ನು ಬೆಳ್ಳಿತೆರೆಯಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment