ಇಲಾಖೆ ವಿಚಾರದಲ್ಲಿ ಸಹೋದರನಿಗೆ ಮೂಗು ತೂರಿಸದಂತೆ ಗಮನವಹಿಸಿ; ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸುರ್ಜೇವಾಲಾ ಸೂಚನೆ

author-image
Harshith AS
Updated On
ಇಲಾಖೆ ವಿಚಾರದಲ್ಲಿ ಸಹೋದರನಿಗೆ ಮೂಗು ತೂರಿಸದಂತೆ ಗಮನವಹಿಸಿ; ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸುರ್ಜೇವಾಲಾ ಸೂಚನೆ
Advertisment
  • ಕಾಂಗ್ರೆಸ್ ರಾಜ್ಯ​ ಉಸ್ತುವಾರಿ ಸುರ್ಜೇವಾಲಾ ಬೇಸರ
  • ಲಕ್ಷ್ಮೀ ಹೆಬ್ಬಾಳ್ಕರ್​ಗೆ ಹೈಕಮಾಂಡ್ ಖಡಕ್ ಸಂದೇಶ
  • ತಮ್ಮನ ಬಗ್ಗೆ ಎಚ್ಚರವಹಿಸಲು ಸುರ್ಜೇವಾಲಾ ಸೂಚನೆ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡೆಗೆ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣ್​ದೀಪ್​ ಸಿಂಗ್​ ಸುರ್ಜೇವಾಲಾ ಬೇಸರ ವ್ಯಕ್ತಪಡಿಸಿದ್ದಾರೆ. ಕುಟುಂಬ ಸದಸ್ಯರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರುವುದೇಕೆ ಎಂದು ಎಚ್ಚರಿಕೆಯ ಜೊತೆಗೆ ಅಸಮಾಧಾನ ಹೊರಹಾಕಿದ್ದಾರೆ.

ಸುರ್ಜೇವಾಲಾ ಎಚ್ಚರಿಕೆ

ಸಹೋದರ ಚನ್ನರಾಜ್ ಹಟ್ಟಿಹೊಳಿ ಇಲಾಖೆ ವಿಚಾರದಲ್ಲಿ ಮೂಗು ತೂರಿಸದಂತೆ ಗಮನವಹಿಸಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಎಚ್ಚರಿಕೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆಯಲ್ಲಿ ಹಸ್ತಕ್ಷೇಪ ಯಾಕೆ?. ಇಲಾಖೆಯಲ್ಲಿ ಹಸ್ತಕ್ಷೇಪ ಬೇಡವೆಂದು ಹೇಳಿದ್ದಾರೆ.

publive-image

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸಂದೇಶ

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸುರ್ಜೇವಾಲಾ ಅವರು ಸಂದೇಶ ರವಾನಿಸಿದ್ದಾರೆ. ಕುಟುಂಬದ ಸದಸ್ಯರನ್ನ ಇಲಾಖೆಗೆ ಬಿಟ್ಟುಕೊಳ್ಳಬಾರದು. ಇಲಾಖೆ ವಿಚಾರದಲ್ಲಿ ಮೂಗು ತೂರಿಸದಂತೆ ಗಮನವಹಿಸಿ. ನಮ್ಮ ಸರ್ಕಾರ ಚುನಾವಣೆಗೆ ಗೆದ್ದು ಈಗ ಅಸ್ತಿತ್ವಕ್ಕೆ ಬಂದಿದೆ. ಭ್ರಷ್ಟಾಚಾರದ ವಿಚಾರವಾಗಿ ಹೋರಾಟ ಮಾಡಿ ಗೆದ್ದಿದ್ದೇವೆ. ಜನರ ನಿರೀಕ್ಷೆಯಂತೆ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌​ ಸಹೋದರನ ವರ್ತನೆಗೆ ಇಲಾಖಾಧಿಕಾರಿಗಳು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಟುಂಬ ಸದಸ್ಯರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರುವುದಕ್ಕೆ ಬೇಸರ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment