/newsfirstlive-kannada/media/post_attachments/wp-content/uploads/2025/02/mahakumbhmela-Prayagraj.jpg)
ಆಧ್ಯಾತ್ಮಿಕ ರಾಜಧಾನಿ ದೇವ ಪ್ರಯಾಗದಲ್ಲಿ ಕೋಟ್ಯಂತರ ಭಕ್ತರು ಮಹಾಕುಂಭಮೇಳ ವೀಕ್ಷಿಸಲು ಹೋಗುತ್ತಿದ್ದಾರೆ. 144 ವರ್ಷಕ್ಕೊಮ್ಮೆ ನಡೆಯೋ ಮಹಾಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಇದೇ ರೀತಿಯೇ ಬಿಹಾರದ ದಶರಥ್ ಯಾದವ್ ಕೂಡ ತೆರಳಿದ್ರು. ಈ ವೇಳೆ ಅಚ್ಚರಿಯ ಪ್ರಾಣಿಯೊಂದು ಅವರ ಪಾದಕ್ಕೆ ತಾಕಿದೆ. ಆ ಪ್ರಾಣಿ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಚರ್ಚೆಯೇ ಶುರುವಾಗಿದೆ.
ಇದನ್ನೂ ಓದಿ: 50 ಅಲ್ಲ 60 ಕೋಟಿ ಭಕ್ತರು.. ಪ್ರಯಾಗ್‌ರಾಜ್‌ನಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಎಲ್ಲಾ ಪ್ಲ್ಯಾನ್‌ಗಳು ಫೇಲ್!
ಅಜ್ಜನ ಕಾಲಿಗೆ ತಾಕಿದ್ದು 300 ವರ್ಷ ಬದುಕೋ ಜೀವಿ
ಶಾಹಿ ಸ್ನಾನ ಮಾಡಲೆಂದು ತ್ರಿವೇಣಿ ಸಂಗಮಕ್ಕೆ ಇಳಿದ ದಶರಥ್ ಯಾದವ್ ಎರಡು ಮುಳುಗು ಹಾಕಿದ್ರು. ಮೂರನೇ ಮುಳಗು ಹಾಕೋ ಹೊತ್ತಿಗೆ ಏನೋ ಕಾಲಿಗೆ ಸ್ಪರ್ಶಿಸಿದಂತಾಯ್ತು. ಅಚ್ಚರಿಯಿಂದಲೇ ಅದನ್ನು ಮುಟ್ಟಿ ನೋಡಿದ್ರು. ಸಾಕ್ಷಾತ್ ಮಹಾವಿಷ್ಣು ಅಮೃತ ಮಂಥನಕ್ಕಾಗಿ ಕೂರ್ಮಾವತಾರ ಎತ್ತಿದ ಆಮೆ ದಶರಥ್ ಯಾದವ್ ಕಾಲ ಬಳಿ ಇತ್ತು. ಕೂಡಲೇ ಅದನ್ನು ಕಣ್ಣಿಗೆ ಒತ್ತಿಕೊಂಡು ದಡಕ್ಕೆ ತಂದಿದ್ದರು. ಇದೀಗ ಆ ಆಮೆ ದಶರಥ್ ಯಾದವ್ ಅವರೊಂದಿಗೇ ಇದೆ. ಇಂಥದ್ದೊಂದು ವಿಷಯವನ್ನು ಹೇಳುವ ವಿಡಿಯೋ ಒಂದು ಇನ್ಸ್ಟಾಗ್ರಾಂನಲ್ಲಿ ಕಾಣಬಹುದು. mushraffbhaijaan ಅನ್ನೋ ಅಕೌಂಟ್ನಲ್ಲಿ ಅಜ್ಜ ಈ ಬಗ್ಗೆ ಹೇಳೋ ಮಾಹಿತಿ ಇದೆ.
ಜೀವಿ ಮೈಮೇಲಿನ 4 ಅಕ್ಷರಗಳು ಜನರನ್ನ ಚಿಂತಿಗೆ ದೂಡಿವೆ!
ದಶರಥ್ ಯಾದವ್ ಅವರಿಗೆ ಸಿಕ್ಕ ಆಮೆ ಇಂಡಿಯನ್ ಫ್ಲಾಪ್‌ಶೆಲ್ ಆಮೆಯಂತಿದೆ. ವಿಜ್ಞಾನಿಗಳೇ ಹೇಳುವಂತೆ ಆಮೆ ಕನಿಷ್ಠ 30 ರಿಂದ 300 ವರ್ಷದವರೆಗೂ ಬದುಕಬಲ್ಲದು. ಇದಕ್ಕೊಂದು ಉದಾಹರಣೆ ಎಂದರೇ 2006ರಲ್ಲಿ ಕೋಲ್ಕತ್ತಾದ ಅಲಿಪೂರ್ ಜೂಲಾಜಿಕಲ್ ಗಾರ್ಡನ್ನಲ್ಲಿ ಪ್ರಾಣ ಬಿಟ್ಟ 256 ವರ್ಷ ಪ್ರಾಯದ ಅದ್ವೈತ ಅನ್ನೋ ಅಮೆ. ಆದರೇ, ಬಹುಪಾಲು ಆಮೆಗಳು 30-40 ವರ್ಷ ಬದುಕುತ್ತವೆ ಎಂದು ಹೇಳಲಾಗುತ್ತದೆ. ಆದರೇ, ದಶರಥ್ ಯಾದವ್ ಅವರಿಗೆ ಸಿಕ್ಕ ಆಮೆಯ ಮೈಮೇಲೆ ಹಳದಿ ಬಣ್ಣದಲ್ಲಿ 4 ಅಕ್ಷರಗಳನ್ನು ಯಾರೋ ಬರೆದಿದ್ದಾರೆ. ಅದು ಇಂಗ್ಲಿಷ್ ನ ಎಬಿಸಿಡಿ ಆಗಿದ್ದು. ಇದನ್ನು ಬರೆದಿದ್ದು ಯಾರು? ಅನ್ನೋ ಬಗ್ಗೆ ಚರ್ಚೆ ನಡೀತಿದೆ. ಆದರೇ, ಬಹುಪಾಲು ಮಂದಿ ಇದು ಸಾಕ್ಷಾತ್ ವಿಷ್ಣುವಿನ ಪ್ರತಿರೂಪ ಎಂದೇ ಹೇಳುತ್ತಿದ್ದಾರೆ. ಸದ್ಯ, ಇದೇ ಆಮೆಯನ್ನು ನೋಡೋದಕ್ಕೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ವಿಶೇಷ ವರದಿ : ಬಸವರಾಜು ಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ