Advertisment

ಹೋಮ, ಹವನದ ಬಳಿಕ ಸ್ಯಾಂಡಲ್​ವುಡ್​​ನಲ್ಲಿ ಅಚ್ಚರಿಯ ಬೆಳವಣಿಗೆ! ಕಾಂತಾರ, KGF​ಗೆ ಬಂತು ನ್ಯಾಷನಲ್​ ಅವಾರ್ಡ್!

author-image
AS Harshith
Updated On
ಹೋಮ, ಹವನದ ಬಳಿಕ ಸ್ಯಾಂಡಲ್​ವುಡ್​​ನಲ್ಲಿ ಅಚ್ಚರಿಯ ಬೆಳವಣಿಗೆ! ಕಾಂತಾರ, KGF​ಗೆ ಬಂತು ನ್ಯಾಷನಲ್​ ಅವಾರ್ಡ್!
Advertisment
  • ಮತ್ತೊಮ್ಮೆ ದೇಶದಲ್ಲಿ ರಿಷಭ್​ ಶೆಟ್ಟಿಯ ‘ಕಾಂತಾರ’ ಅಬ್ಬರ
  • ಹೋಮ, ಹವನದ ಬಳಿಕ ಸ್ಯಾಂಡಲ್​ವುಡ್​ಗೆ ಭಾರೀ ಒಳಿತು
  • ಕಾಂತಾರ ಚಿತ್ರದ ಯಶಸ್ಸು ಪುನೀತ್ ರಾಜ್​ಗೆ ಅರ್ಪಿಸಿದ ರಿಷಬ್​ ಶೆಟ್ಟಿ

ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮದ ಜೊತೆಗೆ ಸ್ಯಾಂಡಲ್​ವುಡ್​ಗೆ ಸಿಹಿ ಸುದ್ದಿ ಸಿಕ್ಕಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕಾಂತಾರ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಜೊತೆಗೆ ರಾಕಿಂಗ್​ ಸ್ಟಾರ್​​ ಯಶ್​​ ನಟನೆಯ ಕೆಜಿಎಫ್​ 2 ಚಿತ್ರಕ್ಕೂ ಎರಡು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

Advertisment

ಅಂತೂ ಇಂತೂ ಬಹುನಿರೀಕ್ಷಿತ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. 2022ನೇ ಸಾಲಿನಲ್ಲಿ ತೆರೆಕಂಡ ಚಿತ್ರಗಳನ್ನೊಳಗೊಂಡ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಕನ್ನಡ ಚಿತ್ರರಂಗ ಕಮಾಲ್​ ಮಾಡಿದೆ.

publive-image

ಡಿವೈನ್​ ಸ್ಟಾರ್​​ ರಿಷಭ್​ಗೆ ಅತ್ಯುತ್ತಮ ನಟ ಪ್ರಶಸ್ತಿ

2022ರಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾಗೆ ಇಡೀ ದೇಶದಲ್ಲಿ ಅಬ್ಬರಿಸಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬ ಸಿನಿಪ್ರಿಯರು ರಿಷಬ್​ ಅವರ ಆಕ್ಟಿಂಗ್​ಗೆ ಫಿದಾ ಆಗಿದ್ರು. ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್​​ ಸೀನ್​​ ನೋಡಿದವ್ರೂ ರಿಷಭ್​ ಶೆಟ್ಟಿ ಅವರಿಗೆ ನ್ಯಾಷನಲ್​​ ಅರ್ವಾಡ್​​ ಸಿಗಬೇಕು ಅಂತ ಹೇಳಿದ್ರು. ಅದರಂತೆ ಇವತ್ತು ಡಿವೈನ್​ ಸ್ಟಾರ್​ ರಿಷಭ್​ ಶೆಟ್ಟಿ ಅವರಿಗೆ ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌ನಲ್ಲಿ ಬೆಸ್ಟ್‌ ಆ್ಯಕ್ಟರ್‌ ಪ್ರಶಸ್ತಿ ಒಲಿದು ಬಂದಿದೆ.

ಇದನ್ನೂ ಓದಿ: ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ಅಪ್ಪುವನ್ನು ನೆನೆದ ರಿಷಬ್​ ಶೆಟ್ಟಿ! ಏನಂದ್ರು ಗೊತ್ತಾ?

Advertisment

ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಬೆಸ್ಟ್​​​ ಆಕ್ಟರ್​ ರೇಸ್​​ನಲ್ಲಿ ಭಾರತದ ವಿವಿಧ ಚಿತ್ರರಂಗದ ನಟರು ರೇಸ್​​ನಲ್ಲಿದ್ರು. ಅವರೆನ್ನಲ್ಲ ಹಿಂದಿಕ್ಕಿ ರಿಷಭ್​​ ಶೆಟ್ಟಿ ಪ್ರಶಸ್ತಿ ಗೆದ್ದಿರುವುದು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆಯ ವಿಚಾರವಾಗಿದೆ. ಕಾಂತಾರ ಚಿತ್ರಕ್ಕೆ ಒಟ್ಟು ಎರಡು ಪ್ರಶಸ್ತಿ ಲಭಿಸಿದ್ದು, ಅತ್ಯುತ್ತಮ ನಟ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ಮನರಂಜನಾ ಚಿತ್ರದ ಗರಿಯೂ ಕಾಂತಾರ ಚಿತ್ರಕ್ಕೆ ಲಭಿಸಿದೆ.

publive-image

ಇದನ್ನೂ ಓದಿ: ಅಬ್ಬಬ್ಬಾ.. ಮಜಾ ಟಾಕೀಸ್ ‘ರೆಮೋ’ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಜಡ್ಜಸ್; ವಿಡಿಯೋ ಇಲ್ಲಿದೆ ನೋಡಿ!

ಇನ್ನು, ಬೆಸ್ಟ್​​ ಆಕ್ಟರ್​ ಅವಾರ್ಡ್​ ಸಿಕ್ತಿದ್ದಂತೆ ಸಂತಸ ಹಚ್ಚಿಕೊಂಡ ನಟ ರಿಷಭ್​ ಶೆಟ್ಟಿ, ಕಾಂತಾರ ಚಿತ್ರದ ಯಶಸ್ಸ್​​ನ್ನ ಪುನೀತ್​ ರಾಜಕುಮಾರ್​ ಮತ್ತು ದೈವಕ್ಕೆ, ಚಿತ್ರತಂಡಕ್ಕೆ ಅರ್ಪಿಸುತ್ತೇನೆ ಅಂತ ಹೇಳಿದ್ರು.

Advertisment

ಕೆಜಿಎಫ್​​-2 ಚಿತ್ರಕ್ಕೂ ಎರಡು ರಾಷ್ಟ್ರೀಯ ಪ್ರಶಸ್ತಿ

ಇತ್ತ, ಇಡೀ ದೇಶವನ್ನೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡವಂತೆ ಮಾಡಿದ ಚಿತ್ರ ಕೆಜಿಎಫ್​​​-2, ನಟ ರಾಕಿಂಗ್​ ಸ್ಟಾರ್​​ ಯಶ್​​ ನಟನೆಯ ಕೆಜಿಎಫ್​​-2 ಚಿತ್ರಕ್ಕೆ ಈ ಬಾರಿ ಎರಡು ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಕನ್ನಡ ಸಿನಿಮಾ ಹಾಗೂ ಸಾಹಸ ವಿಭಾಗದಲ್ಲಿ ಕೆಜಿಎಫ್​​-2 ಚಿತ್ರಕ್ಕೆ ನ್ಯಾಷನಲ್​ ಅವಾರ್ಡ್​ ದೊರಕಿದೆ.

publive-image

ಸ್ಯಾಂಡಲ್​ವುಡ್​ಗೆ ರಾಷ್ಟ್ರೀಯ ಅವಾರ್ಡ್​ ಬಂದಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ. ಜೊತೆಗೆ ಇತ್ತೀಚೆಗೆ ಮಾಡಿದ ಹೋಮ ಹವನದಿಂದ ಅಚ್ಚರಿಯ ಬೆಳವಣಿಗೆಯಾಗುತ್ತಿದೆ ಎಂದು ಸಿನಿಪ್ರೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು, ಮಲಯಾಳಂನ ‘ಆಟಂ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ತಮಿಳಿನ ತಿರುಚಿತ್ರಾಂಬಲಂ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಿತ್ಯಾ ಮೆನನ್​​ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.

Advertisment

ಇದನ್ನೂ ಓದಿ: ತರುಣ್ ಸುಧೀರ್ ಪತ್ನಿ ಸೋನಲ್ ಬ್ಲೌಸ್ ಡಿಸೈನ್ ಮಾಡಿದ್ಯಾರು? ಕಾಸ್ಟ್ಯೂಮ್ ಡಿಸೈನರ್​ಗೆ ಭಾರೀ ಡಿಮ್ಯಾಂಡ್‌!

ನಾನ್​​ ಫಿಚರ್​​​ ಚಿತ್ರಗಳ ವಿಭಾಗದಲ್ಲೂ ಕನ್ನಡ ಚಿತ್ರಕ್ಕೆ ಪ್ರಶಸ್ತಿಗಳ ಲಭಿಸಿದ್ದು, ಸುನೀಲ್ ಪುರಾಣಿಕ್‌ ನಿರ್ದೇಶನದ ರಂಗವಿಭೋಗ ಸಿನಿಮಾ ಬೆಸ್ಟ್​ ಆರ್ಟ್​​ ಕಲ್ಚರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಮಧ್ಯಂತರ ಸಿನಿಮಾದ ನಿರ್ದೇಶಕ ದಿನೇಶ್ ಶೆಣೈಗೆ ಬೆಸ್ಟ್ ಡೆಬ್ಯುಟ್‌ ಫಿಲಂ ಡೈರೆಕ್ಚರ್ ಪ್ರಶಸ್ತಿ ದೊರಕಿದೆ. ಜೊತೆಗೆ ಚಿತ್ರದ ಎಡಿಟರ್ ಸುರೇಶ್ ಅರಸ್​ ಅವರಿಗೆ ಬೆಸ್ಟ್ ಎಡಿಟಿಂಗ್ ಪ್ರಶಸ್ತಿ ಕೂಡ ಲಭಿಸಿದೆ.

ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾದ ರಿಷಭ್​ ಶೆಟ್ಟಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ನಟ ರಾಕಿಂಗ್​ ಸ್ಟಾರ್​ ಯಶ್​, ಜ್ಯೂನಿಯರ್​​ ಎನ್​ಟಿಆರ್​​ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ. ಒಟ್ಟಾರೆ, ಕನ್ನಡ ಚಿತ್ರಗಳಿಗೆ ಒಟ್ಟು ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡಿಗರಿಗೆ ಹೆಮ್ಮಯ ವಿಚಾರವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment