ಕಾಪು ಶ್ರೀ ಮಾರಿಗುಡಿಗೆ ಭೇಟಿ ನೀಡಿದ ಸೂರ್ಯ ಕುಮಾರ್ ಯಾದವ್
ಪತ್ರಿ ದೇವಿಶಾ ಶೆಟ್ಟಿ ಜೊತೆಗೆ ಉಡುಪಿಗೆ ಆಗಮಿಸಿದ ಟೀಂ ಇಂಡಿಯಾದ ಆಟಗಾರ
ದೇವರ ಆಶೀರ್ವಾದದಿಂದ ನಾನು ಆ ಸಂದರ್ಭ ಆ ಜಾಗದಲ್ಲಿ ಇದ್ದೆ ಎಂದ ಮಿಸ್ಟರ್ 360
ಉಡುಪಿ: ವಿಶ್ವಕಪ್ ವಿಜಯದ ಬಳಿಕ ಟೀಂ ಇಂಡಿಯಾ ಕ್ರಿಕೆಟರ್ ಸೂರ್ಯ ಕುಮಾರ್ ಯಾದವ್ ಉಡುಪಿಯ ಕಾಪು ಶ್ರೀ ಮಾರಿಗುಡಿಗೆ ಭೇಟಿ ನೀಡಿದ್ದಾರೆ. ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಆಗಮಿಸಿದ್ದಾರೆ. ಈ ವೇಳೆ ದೇವರ ದರ್ಶನ ಪಡೆದು ಮಾತನಾಡಿದ್ದಾರೆ.
ಇದನ್ನೂ ಓದಿ: ವಿಶ್ವ ಕಪ್ ವಿಜಯ.. ಪತ್ನಿ ಜೊತೆಗೆ ಉಡುಪಿಯ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಸೂರ್ಯ ಕುಮಾರ್ ಯಾದವ್
ನ್ಯೂಸ್ಫಸ್ಟ್ ಜೊತೆಗೆ ಸೂರ್ಯ ಕುಮಾರ್ ಯಾದವ್ ಮಾತನಾಡಿದ್ದು, ವಿಶ್ವಕಪ್ನಲ್ಲಿ ಹಿಡಿದ ಕ್ಯಾಚ್ ಮತ್ತು ಬೌಂಡರಿ ಲೈನ್ ಟಚ್ ಮಾಡಿರುವ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ‘ಕ್ಯಾಚ್ ಹಿಡಿಯುವ ಸಂದರ್ಭ ನಾನು ಬೌಂಡರಿ ಲೈನ್ ಟಚ್ ಮಾಡಿಲ್ಲ. ಪ್ರಪಂಚದ ಎಲ್ಲಾ ಜನರನ್ನ ಖುಷಿ ಪಡಿಸಲು ಸಾಧ್ಯವಿಲ್ಲ. ದೇವರ ಆಶೀರ್ವಾದದಿಂದ ನಾನು ಆ ಸಂದರ್ಭ ಆ ಜಾಗದಲ್ಲಿ ಇದ್ದೆ. ಅಂತಹ ಒಂದು ಅದ್ಭುತ ಕ್ಯಾಚ್ ಹಿಡಿಯುವ ಅವಕಾಶ ನನಗೆ ಸಿಕ್ಕಿತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೊಹ್ಲಿ ಸಹ ಮಾಲೀಕತ್ವದ ಪಬ್ ಮೇಲೆ ಕೇಸ್ ದಾಖಲು! ಯಾವ ಕಾರಣಕ್ಕೆ ಗೊತ್ತಾ?
ಬಳಿಕ ಮಾತನಾಡಿದ ಅವರು, ‘ನಾನು ಮೈದಾನಕ್ಕೆ ಇಳಿಯುವಾಗ ಬಬುಲ್ ಗಂ ಹಾಕಲು ಇಷ್ಟಪಡುತ್ತೇನೆ. ಬ್ಯಾಟಿಂಗ್ ಮಾಡಲು ಮತ್ತು ಚೆನ್ನಾಗಿ ಆಡಲು ಬಬುಲ್ ಗಂ ಜಗಿಯುವುದು ನನಗೆ ಖುಷಿ ಕೊಡುತ್ತದೆ. ಬಬುಲಗಾಂ ಜಗಿಯುತ್ತ ನಾನು ಆ ಸಂದರ್ಭವನ್ನು ಇಷ್ಟಪಡುತ್ತೇನೆ. ಒಂದು ಸಣ್ಣ ಚಿವಿಂಗ್ ಗಂ ಹಾಕಿಕೊಂಡು ನಾನು ಆ ಸಂದರ್ಭವನ್ನು ಸಂಭ್ರಮಿಸುತ್ತೇನೆ. ಪ್ರಾಕ್ಟೀಸ್ ಮಾಡುವಾಗ ಅಂತಹ ಕ್ಯಾಚ್ಗಳನ್ನ ಹಿಡಿಯಲು ನಾವು ತರಬೇತಿ ಪಡೆಯುತ್ತೇವೆ. ದೇಶಕ್ಕೆ ಕಪ್ ತಂದುಕೊಡಲು ಅಂತಹ ಸಂದರ್ಭವನ್ನು ದೇವರ ಸೃಷ್ಟಿ ಮಾಡಿದ್ದಾನೆ. ಆ ಸಂದರ್ಭದಲ್ಲಿ ನಾನು ದೇವರನ್ನು ನೆನೆದುಕೊಂಡೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ