newsfirstkannada.com

ಬೌಂಡರಿ ಲೈನ್​ ಟಚ್​​ ವಿಚಾರವಾಗಿ ಸೂರ್ಯ ಸ್ಪಷ್ಟನೆ.. ಒಂದೇ ಮಾತಲ್ಲಿ ಏನಂದ್ರು ಗೊತ್ತಾ?

Share :

Published July 9, 2024 at 1:20pm

Update July 9, 2024 at 1:29pm

    ಕಾಪು ಶ್ರೀ ಮಾರಿಗುಡಿಗೆ ಭೇಟಿ ನೀಡಿದ ಸೂರ್ಯ ಕುಮಾರ್​ ಯಾದವ್​

    ಪತ್ರಿ ದೇವಿಶಾ ಶೆಟ್ಟಿ ಜೊತೆಗೆ ಉಡುಪಿಗೆ ಆಗಮಿಸಿದ ಟೀಂ ಇಂಡಿಯಾದ ಆಟಗಾರ

    ದೇವರ ಆಶೀರ್ವಾದದಿಂದ ನಾನು ಆ ಸಂದರ್ಭ ಆ ಜಾಗದಲ್ಲಿ ಇದ್ದೆ ಎಂದ ಮಿಸ್ಟರ್​ 360

ಉಡುಪಿ: ವಿಶ್ವಕಪ್​ ವಿಜಯದ ಬಳಿಕ ಟೀಂ ಇಂಡಿಯಾ ಕ್ರಿಕೆಟರ್ ಸೂರ್ಯ ಕುಮಾರ್ ಯಾದವ್ ಉಡುಪಿಯ ಕಾಪು ಶ್ರೀ ಮಾರಿಗುಡಿಗೆ ಭೇಟಿ ನೀಡಿದ್ದಾರೆ. ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಆಗಮಿಸಿದ್ದಾರೆ. ಈ ವೇಳೆ ದೇವರ ದರ್ಶನ ಪಡೆದು ಮಾತನಾಡಿದ್ದಾರೆ.

ಇದನ್ನೂ ಓದಿ: ವಿಶ್ವ​ ಕಪ್​ ವಿಜಯ.. ಪತ್ನಿ ಜೊತೆಗೆ ಉಡುಪಿಯ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಸೂರ್ಯ ಕುಮಾರ್ ಯಾದವ್

ನ್ಯೂಸ್​ಫಸ್ಟ್​ ಜೊತೆಗೆ ಸೂರ್ಯ ಕುಮಾರ್​ ಯಾದವ್​ ಮಾತನಾಡಿದ್ದು, ವಿಶ್ವಕಪ್​ನಲ್ಲಿ ಹಿಡಿದ ಕ್ಯಾಚ್​ ಮತ್ತು ಬೌಂಡರಿ ಲೈನ್​ ಟಚ್​​ ಮಾಡಿರುವ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ‘ಕ್ಯಾಚ್ ಹಿಡಿಯುವ ಸಂದರ್ಭ ನಾನು ಬೌಂಡರಿ ಲೈನ್ ಟಚ್ ಮಾಡಿಲ್ಲ. ಪ್ರಪಂಚದ ಎಲ್ಲಾ ಜನರನ್ನ ಖುಷಿ ಪಡಿಸಲು ಸಾಧ್ಯವಿಲ್ಲ. ದೇವರ ಆಶೀರ್ವಾದದಿಂದ ನಾನು ಆ ಸಂದರ್ಭ ಆ ಜಾಗದಲ್ಲಿ ಇದ್ದೆ. ಅಂತಹ ಒಂದು ಅದ್ಭುತ ಕ್ಯಾಚ್ ಹಿಡಿಯುವ ಅವಕಾಶ ನನಗೆ ಸಿಕ್ಕಿತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕೊಹ್ಲಿ ಸಹ ಮಾಲೀಕತ್ವದ ಪಬ್ ಮೇಲೆ ಕೇಸ್​​​ ದಾಖಲು! ಯಾವ ಕಾರಣಕ್ಕೆ ಗೊತ್ತಾ?

ಬಳಿಕ ಮಾತನಾಡಿದ ಅವರು, ‘ನಾನು ಮೈದಾನಕ್ಕೆ ಇಳಿಯುವಾಗ ಬಬುಲ್ ಗಂ ಹಾಕಲು ಇಷ್ಟಪಡುತ್ತೇನೆ. ಬ್ಯಾಟಿಂಗ್ ಮಾಡಲು ಮತ್ತು ಚೆನ್ನಾಗಿ ಆಡಲು ಬಬುಲ್ ಗಂ ಜಗಿಯುವುದು ನನಗೆ ಖುಷಿ ಕೊಡುತ್ತದೆ. ಬಬುಲಗಾಂ ಜಗಿಯುತ್ತ ನಾನು ಆ ಸಂದರ್ಭವನ್ನು ಇಷ್ಟಪಡುತ್ತೇನೆ. ಒಂದು ಸಣ್ಣ ಚಿವಿಂಗ್ ಗಂ ಹಾಕಿಕೊಂಡು ನಾನು ಆ ಸಂದರ್ಭವನ್ನು ಸಂಭ್ರಮಿಸುತ್ತೇನೆ. ಪ್ರಾಕ್ಟೀಸ್ ಮಾಡುವಾಗ ಅಂತಹ ಕ್ಯಾಚ್​ಗಳನ್ನ ಹಿಡಿಯಲು ನಾವು ತರಬೇತಿ ಪಡೆಯುತ್ತೇವೆ. ದೇಶಕ್ಕೆ ಕಪ್ ತಂದುಕೊಡಲು ಅಂತಹ ಸಂದರ್ಭವನ್ನು ದೇವರ ಸೃಷ್ಟಿ ಮಾಡಿದ್ದಾನೆ. ಆ ಸಂದರ್ಭದಲ್ಲಿ ನಾನು ದೇವರನ್ನು ನೆನೆದುಕೊಂಡೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೌಂಡರಿ ಲೈನ್​ ಟಚ್​​ ವಿಚಾರವಾಗಿ ಸೂರ್ಯ ಸ್ಪಷ್ಟನೆ.. ಒಂದೇ ಮಾತಲ್ಲಿ ಏನಂದ್ರು ಗೊತ್ತಾ?

https://newsfirstlive.com/wp-content/uploads/2024/07/Surya-Kumar-yadav-udupi-1.jpg

Load More