Advertisment

4,4,4,4,4,4,4,4,6,6; ಸೂರ್ಯ ಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್‌.. ಮೊದಲ ಪಂದ್ಯದಲ್ಲೇ ಹೊಸ ಭರವಸೆ!

author-image
admin
Updated On
4,4,4,4,4,4,4,4,6,6; ಸೂರ್ಯ ಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್‌.. ಮೊದಲ ಪಂದ್ಯದಲ್ಲೇ ಹೊಸ ಭರವಸೆ!
Advertisment
  • ಮೊದಲ ಟಿ20ಯಲ್ಲಿ ಕ್ಯಾಪ್ಟನ್‌ ಸೂರ್ಯ ಕುಮಾರ್ ಅಬ್ಬರ
  • ಕೇವಲ 22 ಬಾಲ್‌ಗೆ ಅರ್ಧಶತಕ ಸಿಡಿಸಿದ ಸೂರ್ಯ ಕುಮಾರ್
  • ಸೂರ್ಯ ಕುಮಾರ್ ಬ್ಯಾಟಿಂಗ್‌ಗೆ ಕೋಚ್ ಗಂಭೀರ್ ಸಂತಸ

ಶ್ರೀಲಂಕಾ ವಿರುದ್ಧ ಪಲ್ಲೆಕೆಲೆ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟಿ20ಯಲ್ಲಿ ಕ್ಯಾಪ್ಟನ್‌ ಸೂರ್ಯ ಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇವಲ 22 ಬಾಲ್‌ಗೆ ಅರ್ಧಶತಕ ಸಿಡಿಸಿದ ಸೂರ್ಯ ಕುಮಾರ್ ಆಟ ರೋಚಕವಾಗಿದ್ದು, ಪಲ್ಲೆಕೆಲೆಯಲ್ಲಿ ಲಂಕನ್ನರು ಅಕ್ಷರಶಃ ಶೇಕ್ ಆಗಿದ್ದಾರೆ.

Advertisment

ಇದನ್ನೂ ಓದಿ:  4,4,4,4,4,4,6,6.. ಗಿಲ್​ ಅರ್ಧ ಶತಕದ ಅದ್ಭುತ ಆಟ.. ಜೈಸ್ವಾಲ್​ ಬೆನ್ನಿಗೆ ನಿಂತ ನಾಯಕ 

ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಟೀಂ ಇಂಡಿಯಾವನ್ನೇ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮೊದಲು ಕ್ರೀಸ್‌ಗೆ ಬಂದ ಯಶಸ್ವಿ ಜೈಸ್ವಾಲ್‌, ಶುಭ್ಮನ್ ಗಿಲ್‌ ತಂಡಕ್ಕೆ ಉತ್ತಮ ಆರಂಭವನ್ನೇ ನೀಡಿದರು. ಶುಭ್ಮನ್ ಗಿಲ್ 34 ರನ್‌ಗಳಿಗೆ ಔಟ್ ಆದರು. ಜೈಸ್ವಾಲ್ ಜೊತೆ ಸೇರಿದ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಲಂಕನ್ನರ ಬಗ್ಗು ಬಡಿಯೋ ಆಟ ಪ್ರದರ್ಶಿಸಿದರು.

publive-image

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕ್ಯಾಪ್ಟನ್ ಸೂರ್ಯ ಕುಮಾರ್ , 8 ಬೌಂಡರಿ, 2 ಅಮೋಘ ಸಿಕ್ಸರ್ ಬಾರಿಸಿದರು. ಕೇವಲ 22 ಬಾಲ್‌ನಲ್ಲಿ ಸೂರ್ಯ ಕುಮಾರ್ ಸಿಡಿಸಿದ ಅರ್ಧ ಶತಕ ಕ್ರಿಕೆಟ್‌ ಅಭಿಮಾನಿಗಳಿಗೆ ರೋಚಕವಾಗಿದ್ರೆ, ಟೀಂ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ ಅವರಿಗೆ ಹೊಸ ಭರವಸೆಯನ್ನು ನೀಡಿದೆ. ಸೂರ್ಯ ಕುಮಾರ್ ಅರ್ಧ ಶತಕದ ಆಟಕ್ಕೆ ಚಪ್ಪಾಳೆ ತಟ್ಟುತ್ತಾ ಸಂತಸ ವ್ಯಕ್ತಪಡಿಸಿದ್ದಾರೆ.

Advertisment

ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಮೊದಲ ಟಿ20; ಸಿಂಹಳೀಯರ ಬೇಟೆಗೆ ಬಲಿಷ್ಟ ಟೀಂ ಇಂಡಿಯಾ; ಪ್ಲೇಯಿಂಗ್ 11ರಲ್ಲಿ ಯಾರು?

ಸೂರ್ಯ ಕುಮಾರ್ ಬ್ಯಾಟಿಂಗ್ ರಣರೋಚಕವಾಗಿತ್ತು. ಸೂರ್ಯನ ಒಂದೊಂದು ಬೌಂಡರಿ, ಸಿಕ್ಸರ್‌ಗೆ ಲಂಕನ್ನರು ಅಕ್ಷರಶಃ ಬೆವರಿ ಹೋಗಿದ್ರು. 58 ರನ್ ಸಿಡಿಸಿದ್ದ ಸೂರ್ಯ ಕುಮಾರ್ ಅವರು ಎಲ್‌ಬಿಡಬ್ಲೂ ಬಲೆಗೆ ಬೀಳುತ್ತಿದ್ದಂತೆ ಶ್ರೀಲಂಕಾ ಬೌಲರ್‌ಗಳು ನಿಟ್ಟುಸಿರು ಬಿಟ್ಟರು. ಆದರೆ ಸೂರ್ಯ ಕುಮಾರ್ ಅವರ ಅದ್ಭುತ ಬ್ಯಾಟಿಂಗ್ ಸಖತ್ ಎಂಟರ್‌ಟೈನ್‌ಮೆಂಟ್ ಆಗಿದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment