/newsfirstlive-kannada/media/post_attachments/wp-content/uploads/2024/07/Surya-Kumar-yadav-udupi.jpg)
ಉಡುಪಿ: ಟೀಂ ಇಂಡಿಯಾ ಕ್ರಿಕೆಟರ್ ಸೂರ್ಯ ಕುಮಾರ್ ಯಾದವ್ ಉಡುಪಿಯ ಕಾಪು ಶ್ರೀ ಮಾರಿಗುಡಿಗೆ ಭೇಟಿ ನೀಡಿದ್ದಾರೆ. ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಆಗಮಿಸಿದ್ದಾರೆ. ಈ ಜೋಡಿಗೆ ದೇವಸ್ಥಾನ ಮಂಡಳಿಯವರು ಮತ್ತು ಸ್ಥಳೀಯರು ಭವ್ಯ ಸ್ವಾಗತ ಕೋರಿದ್ದಾರೆ.
ದೇವರ ದರ್ಶನ ಪಡೆದ ಬಳಿಕ ಮಾತನಾಡಿದ ಸೂರ್ಯ ಕುಮಾರ್ ಯಾದವ್, ಕಾಪು ಮಾರಿಯಮ್ಮನ ದರ್ಶನ ಮಾಡಿದ ಮೇಲೆ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಪೂಜೆ ಸಲ್ಲಿಕೆ ಮಾಡಿ ಶಾಂತಿ ಪ್ರಾಪ್ತಿಯಾದ ಅನುಭವವಾಯ್ತು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಬರಬೇಕು ಎಂಬ ಇಚ್ಛೆ ಇದೆ. ಆ ಸಂದರ್ಭದಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ಬರುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೊಹ್ಲಿ ಸಹ ಮಾಲೀಕತ್ವದ ಪಬ್ ಮೇಲೆ ಕೇಸ್ ದಾಖಲು! ಯಾವ ಕಾರಣಕ್ಕೆ ಗೊತ್ತಾ?
ಬಳಿಕ ಮಾತನಾಡಿದ ಸೂರ್ಯ ಕುಮಾರ್ ಯಾದವ್, ವರ್ಲ್ಡ್ ಕಪ್ ಸೆಲೆಬ್ರೇಶನ್ ಜನಸ್ತೋಮ ನೋಡಿ ಬಹಳ ಖುಷಿಯಾಯಿತು. ಕಾಪುವಿನಲ್ಲಿ ಕೂಡ ಜನರು ಪ್ರೀತಿಯಿಂದ ಬರಮಾಡಿಕೊಂಡದ್ದು ಮನಸ್ಸಿಗೆ ಮುಟ್ಟಿತು. ದೇವಸ್ಥಾನದಲ್ಲಿ ಇಷ್ಟು ಮಂದಿ ಸೇರುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. 'ಕಾಪುದ ಅಮ್ಮ' (ಕಾಪುವಿನ ತಾಯಿ) ಎಂದು ಕ್ರಿಕೆಟರ್ ಸೂರ್ಯ ಕುಮಾರ್ ಯಾದವ್ ತುಳುವಿನಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: ಮಳೆಯಿಂದ ಕಬಿನಿ ಡ್ಯಾಂ ಒಳ ಹರಿವು ಹೆಚ್ಚಳ! ಭರ್ತಿಯಾಗಲು ಇನ್ನೆಷ್ಟು ಅಡಿ ಬಾಕಿ?
ತಂಡದ ಕಪ್ತಾನ ಆಗುವ ಕುರಿತಾಗಿ ಮಾತನಾಡಿದ ಸೂರ್ಯ ಕುಮಾರ್ ಯಾದವ್, ಅದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ. ದೇವರು ಇಚ್ಚಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ. ಕರಾವಳಿಯ ಬೇರೆ ಬೇರೆ ದೇವಸ್ಥಾನಗಳಿಗೆ ಹೋಗಿದ್ದೇವೆ ಮನಸ್ಸಿಗೆ ಶಾಂತಿ ಸಿಕ್ಕಿದೆ. ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಬಂದಿದ್ದೇನೆ. ನಾನು ಯಾವುದೇ ಸೆಲೆಬ್ರಿಟಿಯಾಗಿ ಬಂದಿಲ್ಲ. ನಾನೊಬ್ಬ ಸೆಲೆಬ್ರಿಟಿ ಎಂಬ ಆಲೋಚನೆಯ ನನಗೆ ಬಂದಿಲ್ಲ. ಸಾಮಾನ್ಯ ವ್ಯಕ್ತಿಯಾಗಿ ದೊಡ್ಡ ಜೀವನವನ್ನು ಸಾಗಿಸಬೇಕಾಗಿದೆ. ವರ್ಲ್ಡ್ ಕಪ್ ಅನ್ನೋದು ಇಡೀ ಜೀವನ ಅಲ್ಲ ಅದೊಂದು ಭಾಗ. ಜೀವನದಲ್ಲಿ ಇಂತಹ ಹಲವನ್ನು ನೋಡುತ್ತಾ ಸಾಗಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರೆಂಟ್ ಇಲ್ಲ! ಮೊಬೈಲ್ ಟಾರ್ಚ್ನಲ್ಲೇ ರೋಗಿಗೆ ಚಿಕಿತ್ಸೆ! ಈ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಹೀಗಿದೆ ನೋಡಿ
ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಆನಿವರ್ಸರಿಯನ್ನು ಆಚರಿಸಿಕೊಂಡಿದ್ದೇವೆ. ಜೀವನದಲ್ಲಿ ಒಂದೇ ಬಾರಿ ಇಷ್ಟು ಕೇಕ್ ಗಳನ್ನು ನಾನು ಕಟ್ ಮಾಡಿಲ್ಲ ತಿಂದಿಲ್ಲ. ಕ್ಯಾಚ್ ಹಿಡಿದು ಎಂಟು ದಿವಸ ಆಯಿತು ಆನಿವರ್ಸರಿ ಕಳೆದು ಎಂಟು ದಿವಸ ಆಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಭೂಮಿ ಖರೀದಿಸಿರುವ ಆರೋಪ.. ಸಿಎಂ ಸಿದ್ದರಾಮಯ್ಯ, ಪತ್ನಿ, ಬಾಮೈದನ ಮೇಲೆ ದೂರು ದಾಖಲು
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ನಿರ್ಮಾಣ ಹಂತದಲ್ಲಿದ್ದು, ಈ ಸಮಯದಲ್ಲಿ ಸೂರ್ಯ ಮತ್ತು ದೇವಿಶಾ ದಂಪತಿ ಭೇಟಿ ನೀಡಿದ್ದಾರೆ. ಭೇಟಿ ವೇಳೆ ದೇವಸ್ಥಾನದ ನಿರ್ಮಾಣ, ಕೆತ್ತನೆ, ಶಿಲ್ಪಕಲೆಯ ಬಗ್ಗೆ ಮಾಹಿತಿ ಪಡೆದರು.
ದೇವಸ್ಥಾನವು ಇಳಕಲ್ ಶಿಲೆಯಲ್ಲಿ ನಿರ್ಮಾಣವಾಗುತ್ತಿದ್ದು, ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಮಾರಿಗುಡಿ ನಿರ್ಮಾಣವಾಗುತ್ತಿದೆ. ಗರ್ಭಗುಡಿ, ಉಚ್ಚಂಗಿ ಗುಡಿ, ಸುತ್ತುಪೌಳಿ ಕಾಮಗಾರಿ ಶೇ.90 ಪೂರ್ಣಗೊಂಡಿದೆ. ಮಾರ್ಚ್ 2ನೇ ತಾರೀಕು ಬ್ರಹ್ಮ ಕಲಶ ಮಹೋತ್ಸವ ನಡೆಯಲಿದ್ದು, ಒಟ್ಟು ಒಂಬತ್ತು ದಿವಸಗಳ ಕಾಲ ದೇವಸ್ಥಾನದ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ