newsfirstkannada.com

ಪಾಂಡ್ಯಗೆ ತಂಡದಿಂದಲೇ ಗೇಟ್​​ಪಾಸ್​? ರೋಹಿತ್​​ಗೂ ಇಲ್ಲ ಕ್ಯಾಪ್ಟನ್ಸಿ ಪಟ್ಟ.. ಮುಂಬೈ ಇಂಡಿಯನ್ಸ್​ಗೆ ಹೊಸ ನಾಯಕ..

Share :

Published August 4, 2024 at 9:59am

Update August 4, 2024 at 10:00am

    ಹಾರ್ದಿಕ್ ಪಾಂಡ್ಯರನ್ನು ರಿಲೀಸ್ ಮಾಡಲು ಮುಂದಾದ MI

    ಮುಂಬೈ ಇಂಡಿಯನ್ಸ್​ಗೆ ಹೊಸ ನಾಯಕ ಯಾರು ಗೊತ್ತೇ..?

    2024ರಲ್ಲಿ ಮುಂಬೈ ತಂಡವನ್ನು ಪಾಂಡ್ಯ ಮುನ್ನಡೆಸಿದ್ದರು

ಮುಂಬರುವ ಐಪಿಎಲ್ ಹರಾಜಿಗೆ ತಯಾರಿ ನಡೆಸ್ತಿರುವ ಮುಂಬೈ ಇಂಡಿಯನ್ಸ್​​ ಫ್ರಾಂಚೈಸಿಯು ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯರನ್ನೇ ತಂಡದಿಂದ ಕೈಬಿಡುವ ನಿರ್ಧಾರದಲ್ಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಪಾಂಡ್ಯರನ್ನು ಕೈಬಿಟ್ಟರೆ, ಮುಂಬೈ ಇಂಡಿಯನ್ಸ್​ಗೆ ಯಾರು ನಾಯಕರಾಗುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾರನ್ನು ರಿಟೈನ್ ಮಾಡಿಕೊಳ್ಳಲಿದೆ. ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ಬಿಡುಗಡೆ ಮಾಡುತ್ತದೆ. ಏಕೆಂದರೆ ಸೂರ್ಯಕುಮಾರ್ ಈಗ ಟಿ 20 ಸ್ವರೂಪದಲ್ಲಿ ದೇಶದ ನಾಯಕರಾಗಿದ್ದಾರೆ. ಹೀಗಾಗಿ ಅವರಿಗೇ ಮುಂಬೈ ಇಂಡಿಯನ್ಸ್ ತಂಡದ ಜಾವಾಬ್ದಾರಿಯನ್ನು ನೀಡಬಹುದು. ಸೂರ್ಯನಿಗೆ ಕ್ಯಾಪ್ಟನ್ಸಿಯನ್ನು ಮುಂಬೈ ಇಂಡಿಯನ್ಸ್ ನೀಡೋದೇ ಆದರೆ, ತಿಲಕ್ ವರ್ಮಾ ಅವರನ್ನು ಸೂರ್ಯ ಉಳಿಸಿಕೊಳ್ತಾರೆ ಎಂದು ಹೇಳಲಾಗುತ್ತಿದೆ.

2024ರ ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡು ನಾಯಕತ್ವ ಜವಾಬ್ದಾರಿಯನ್ನ ನೀಡಿತ್ತು. ರೋಹಿತ್ ಶರ್ಮಾ ಅವರಿಂದ ಕ್ಯಾಪ್ಟನ್ಸಿ ಕಿತ್ಕೊಂಡು ಪಾಂಡ್ಯಗೆ ನೀಡಿರೋದು ಭಾರೀ ಟೀಕೆಗೆ ಕಾರಣವಾಗಿತ್ತು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯವಾಗಿ ಸೋತಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಂಡ್ಯಗೆ ತಂಡದಿಂದಲೇ ಗೇಟ್​​ಪಾಸ್​? ರೋಹಿತ್​​ಗೂ ಇಲ್ಲ ಕ್ಯಾಪ್ಟನ್ಸಿ ಪಟ್ಟ.. ಮುಂಬೈ ಇಂಡಿಯನ್ಸ್​ಗೆ ಹೊಸ ನಾಯಕ..

https://newsfirstlive.com/wp-content/uploads/2024/03/Hardik_Rohit-News.jpg

Load More