/newsfirstlive-kannada/media/post_attachments/wp-content/uploads/2025/04/SURYAKUMAR-YADAV.jpg)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲಲು ಮುಂಬೈ ಇಂಡಿಯನ್ಸ್ಗೆ 7 ಬಾಲ್ಗೆ 24 ರನ್ಗಳ ಅಗತ್ಯವಿದ್ದಾಗ ತಿಲಕ್ ವರ್ಮಾ ರಿಟೈರಿಂಗ್ ಔಟ್ ಆದರು. ಕಾರಣ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಅವರನ್ನು ವಾಪಸ್ ಪೆವಿಲಿಯನ್ಗೆ ಕರೆಸಿಕೊಂಡಿತು. ಪರಿಣಾಮ ಮುಂಬೈ 12 ರನ್ಗಳ ಅಂತರದಿಂದ ಸೋಲನ್ನು ಕಂಡಿತು. ಇದೀಗ ತಿಲಕ್ ವರ್ಮಾರನ್ನು ಮಧ್ಯದಲ್ಲೇ ಕರೆಸಿಕೊಂಡಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಎಲ್ಎಸ್ಜಿ ವಿರುದ್ಧ ಗೆಲುವು ನಿರೀಕ್ಷಿಸಿದ್ದ ಸೂರ್ಯ ಕುಮಾರ್ ಯಾದವ್, ತಂಡದ ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ಶಾಕ್ ಆಗಿದ್ದಾರೆ. ಪೆವಿಲಿಯನ್ನಲ್ಲಿ ಕೂತಿದ್ದ ಸೂರ್ಯಗೆ ಏನು ನಡೆಯುತ್ತಿದೆ ಎಂದು ಗೊತ್ತಾಗಲಿಲ್ಲ. ಏಕಾಏಕಿ ಕ್ರೀಸ್ನಿಂದ ಹೊರ ಬರುತ್ತಿರುವ ತಿಲಕ್ ವರ್ಮಾರನ್ನ ನೋಡಿ ಏನಾಯ್ತು, ಏನಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ದೌಡಾಯಿಸುವ ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ, ತಂಡದ ನಿರ್ಧಾರದ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸೂರ್ಯ ಫುಲ್ ಗರಂ ಆಗಿಯೇ ಇದ್ದರು. ಸೂರ್ಯಕುಮಾರ್ ಯಾದವ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Retired out! ತಿಲಕ್ ವರ್ಮಾಗೆ ದೊಡ್ಡ ಅವಮಾನ.. ಕ್ರೀಸ್ನಿಂದ ವಾಪಸ್ ಕರೆಸಿದ ಮುಂಬೈ ಇಂಡಿಯನ್ಸ್..!
ನಿನ್ನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಅದ್ಭುತ ಆಟವಾಡಿದರು. 155.81 ಸ್ಟ್ರೈಕ್ರೇಟ್ನಲ್ಲಿ 43 ಬಾಲ್ಗಳನ್ನು ಎದುರಿಸಿ ಒಂದು ಸಿಕ್ಸರ್, ಒಂಬತ್ತು ಬೌಂಡರಿಗಳೊಂದಿಗೆ 67 ರನ್ಗಳಿಸಿದ್ದರು. ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಔಟ್ ಆದರು. 16.1ನೇ ಓವರ್ಗೆ ಸೂರ್ಯ ಔಟ್ ಆಗಿದ್ದಾಗ ತಂಡದ ಮೊತ್ತ ಮೂರು ನಾಲ್ಕು ವಿಕೆಟ್ ಕಳೆದುಕೊಂಡು 152 ರನ್ಗಳಿಸಿತ್ತು. ಅಂದರೆ 23 ಬಾಲ್ನಲ್ಲಿ 52 ರನ್ಗಳ ಅಗತ್ಯ ಇತ್ತು. ಹೀಗಾಗಿ ತಂಡದ ಗೆಲುವಿನ ನಿರೀಕ್ಷೆಯಲ್ಲಿ ಸೂರ್ಯಕುಮಾರ್ ಯಾದವ್ ಇದ್ದರು.
#SuryakumarYadav 🚨🚨 is reportedly disappointed with #TilakVarma being retired out by the management.
Not a good sign for #MumbaiIndians#tilakvarma | #tilakvermahttps://t.co/xO5OuPgGoY— Cinemazic (@Cinemazic) April 5, 2025
ನಿನ್ನೆಯ ಆಟ ಹೇಗಿತ್ತು..?
ಸ್ಫೋಟಕ ಬ್ಯಾಟಿಂಗ್ಗೆ ಹೆಸರು ಆಗಿರುವ ತಿಲಕ್ ವರ್ಮಾ, ನಿನ್ನೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರು. ಆದರೆ ಕ್ರೀಸ್ನಲ್ಲಿ ರನ್ ಗಳಿಸಲು ಅವರು ಪರದಾಡಿದರು. 23 ಎಸೆತದಲ್ಲಿ ಕೇವಲ 2 ಬೌಂಡರಿ ಬಾರಿಸಿ 25 ರನ್ಗಳಿಸಿ ಅಚ್ಚರಿ ಮೂಡಿಸಿದರು. ಕೊನೆ ಕ್ಷಣದಲ್ಲಿ ಅಂದರೆ ಮುಂಬೈ ಇಂಡಿಯನ್ಸ್ಗೆ ಗೆಲ್ಲಲು 7 ಬಾಲ್ನಲ್ಲಿ 24 ರನ್ಗಳ ಅಗತ್ಯ ಇತ್ತು. ಆಗ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್, ತಿಲಕ್ ವರ್ಮಾ ರಿಟೈರ್ಡ್ ಔಟ್ ಎಂದು ಘೋಷಣೆ ಮಾಡಿತು. ಈ ವಿಚಾರ ದೊಡ್ಡ ಚರ್ಚೆ ಆಗ್ತಿದೆ.
ಇದನ್ನೂ ಓದಿ: ತಿಲಕ್ ವರ್ಮಾ Retiring Out; ಅಸಲಿ ಕಾರಣ ರಿವೀಲ್ ಮಾಡಿದ ನಾಯಕ ಪಾಂಡ್ಯ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್