newsfirstkannada.com

ಬರೀ ಕಲ್ಲು ಮುಳ್ಳಿನ ಹಾದಿ.. ಇಲ್ಲಿ ಸೂರ್ಯಂಗೇ ಟಾರ್ಚ್​​.. ಹೆಂಗಿದೆ ಗೊತ್ತಾ ಚಕ್ರವ್ಯೂಹ..?

Share :

Published July 24, 2024 at 11:36am

    ಜುಲೈ 27 ರಿಂದ ಭಾರತ-ಶ್ರೀಲಂಕಾ T20 ಸರಣಿ

    ಸೂರ್ಯ T20 ಕ್ಯಾಪ್ಟನ್ಸಿ ದರ್ಬಾರ್​​ಗೆ ಕ್ಷಣಗಣನೆ

    ಫಸ್ಟ್​ ಟಾಸ್ಕ್​​​​ನಲ್ಲೆ ಸ್ಕೈಗೆ ಸಾಲು ಸಾಲು ಚಾಲೆಂಜಸ್

ಇನ್ನೂ ಎರಡೇ ಎರಡು ದಿನ. ಟೀಮ್ ಇಂಡಿಯಾ T20 ತಂಡದಲ್ಲಿ ಸೂರ್ಯಕುಮಾರ್ ಯಾದವ್​​​​ ದರ್ಬಾರ್ ಶುರುವಾಗಲಿದೆ. ಹೊಸ ಕ್ಯಾಪ್ಟನ್ ಮೇಲೆ ಅಪಾರ ನಿರೀಕ್ಷೆಗಳಿವೆ. ಅಂತೆಯೇ ಹಲವು ಸವಾಲುಗಳು ಸೂರ್ಯನ ಮುಂದಿವೆ.

ಸೂರ್ಯ T20 ಕ್ಯಾಪ್ಟನ್ಸಿ ದರ್ಬಾರ್​​ಗೆ ಕ್ಷಣಗಣನೆ..!
ಶ್ರೀಲಂಕಾ ಎದುರಿನ ದ್ವಿಪಕ್ಷೀಯ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಜುಲೈ 27 ರಿಂದ ಇಂಡೋ-ಲಂಕಾ ಚುಟುಕು ದಂಗಲ್​ ಆರಂಭಗೊಳ್ಳಲಿದ್ದು, ಮೆನ್​ ಇನ್​​ ಬ್ಲೂ ಪಡೆ ಈಗಾಗ್ಲೇ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಇಲ್ಲಿಂದಲೇ ಸೂರ್ಯಕುಮಾರ್ ಯಾದವ್​​​ ಫುಲ್​ಟೈಮ್​​ ಟಿ20 ಕ್ಯಾಪ್ಟನ್ ಆಗಿ ಅಧಿಕೃತವಾಗಿ ಚಾರ್ಜ್​ ತೆಗೆದುಕೊಳ್ಳಲಿದ್ದಾರೆ. ಮೊದಲ ಟಾಸ್ಕ್​​ನಲ್ಲೇ ಸ್ಕೈಗೆ ಸಾಲು ಸಾಲು ಚಾಲೆಂಜಸ್​ಗಳಿದ್ದು, ಹೇಗೆ ಮೆಟ್ಟಿ ನಿಲ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ:ನಟ ಡಾಲಿ ಧನಂಜಯ್ ಅವರ ಪ್ರೀತಿಯ ಅಜ್ಜಿ ಮಲ್ಲಮ್ಮ ನಿಧನ

ಚಾಲೆಂಜ್ ನಂ.1: ನಾಯಕನಾಗಿ ಸಾಮರ್ಥ್ಯ ನಿರೂಪಿಸೋದು
ಫುಲ್ ಟೈಮ್​ ಕ್ಯಾಪ್ಟನ್​​​​ ಆಗಿ ಆಯ್ಕೆಯಾದ ಸೂರ್ಯಕುಮಾರ್ ಯಾದವ್​​​ಗೆ ಹೆಚ್ಚು ತಂಡ ಮುನ್ನಡೆಸಿದ ಅನುಭವವಿಲ್ಲ. ಹಂಗಾಮಿ ಕ್ಯಾಪ್ಟನ್​ ಆಗಿ ಈವರೆಗೆ 7 ಪಂದ್ಯಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ತಂಡದ ಚುಕ್ಕಾಣಿ ಹಿಡಿದಿರೋ ಸೂರ್ಯನ ಮುಂದೆ ಸಾಮರ್ಥ್ಯ ನಿರೂಪಿಸೋ ಚಾಲೆಂಜ್​ ಇದೆ. ಹಾರ್ದಿಕ್​ ಪಾಂಡ್ಯ ಬದಲಾಗಿ ನಾಯಕತ್ವ ಸೂರ್ಯನಿಗೆ ಸಿಕ್ಕಿರೋದ್ರಿಂದ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ತಾನು ನಾಯಕತ್ವಕ್ಕೆ ಅರ್ಹ ಎಂಬ ಸಂದೇಶವನ್ನು ರವಾನಿಸಬೇಕಿದೆ.

ಚಾಲೆಂಜ್ ನಂ.2: ರೋಹಿತ್​ ಲೆಗಸಿ ಮುಂದುವರಿಸುವುದು
ನ್ಯೂ ಕ್ಯಾಪ್ಟನ್ ಸೂರ್ಯಕುಮಾರ್​​​ಗೆ ಮಾಜಿ ಕ್ಯಾಪ್ಟನ್ ರೋಹಿತ್​ ಶರ್ಮಾರ ಲೆಗಸಿ ಕಂಟಿನ್ಯೂ ಮಾಡಬೇಕಾದ ಒತ್ತಡ ಇದೆ. ರೋಹಿತ್​​ ಕಳೆದ 3 ವರ್ಷಗಳಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡದೇ ಪ್ಲೇಯರ್ಸ್​ ಕ್ಯಾಪ್ಟನ್​ ಆಗಿ ಗುರುತಿಸಿಕೊಂಡಿದ್ದರು. ಇದೀಗ ಆ ಪರಂಪರೆಯನ್ನ ಉಳಿಸಿ, ಬೆಳೆಸುವ ಸವಾಲು ಸ್ಕೈ ಮುಂದಿದೆ.

ಇದನ್ನೂ ಓದಿ:ಪ್ರೇಮಿಗಳಿಗಾಗಿ ತಯಾರಾಗಿದೆ ಟು ಇನ್​ ಒನ್​​ ಛತ್ರಿ.. ನಿಮ್ಮ ಪ್ರೇಯಸಿಗಾಗಿ ಖರೀದಿ ಮಾಡಿ!

ಚಾಲೆಂಜ್ ನಂ.3: ಕ್ಯಾಪ್ಟನ್ಸಿ​ ಅಂಡ್ ಫಾರ್ಮ್​ ಬ್ಯಾಲೆನ್ಸ್​
ಸೂರ್ಯಕುಮಾರ್​​​ ಯಾದವ್​ ಟೀಮ್ ಇಂಡಿಯಾ ಸಾರಥಿಯಾದ ಬಳಿಕ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಕ್ಯಾಪ್ಟನ್ಸಿ ಜೊತೆ ಫಾರ್ಮ್​ ಕೂಡ ಬ್ಯಾಲೆನ್ಸ್ ಮಾಡಿಕೊಳ್ಳಬೇಕಿದೆ. ಬ್ಯಾಟಿಂಗ್​ನಲ್ಲಿ ಸೂರ್ಯನ ಸ್ಥಿರ ಪ್ರದರ್ಶನ ಭಾರತಕ್ಕೆ ಅತಿ ಅವಶ್ಯಕ. ಕ್ಯಾಪ್ಟನ್ಸಿಯಿಂದ ಪರ್ಫಾಮೆನ್ಸ್ ಮೇಲೆ ಎಫೆಕ್ಟ್​​ ಆಗದಂತೆ ನೋಡಿಕೊಳ್ಳಬೇಕಿದೆ.

ಚಾಲೆಂಜ್ ನಂ.4: ಹಿರಿಯ ಅಂಡ್ ಕಿರಿಯರ ಸಮನ್ವಯತೆ..!
ತಂಡದ ಸಕ್ಸಸ್​ನಲ್ಲಿ ಆಟಗಾರರ ನಡುವೆ ಸಮನ್ವಯತೆ ಬಹುಮುಖ್ಯ. ಟೀಮ್ ಇಂಡಿಯಾ ಹಿರಿಯ ಹಾಗೂ ಕಿರಿಯ ಆಟಗಾರರಿಂದ ಕೂಡಿದೆ. ಹಾರ್ದಿಕ್​ ಪಾಂಡ್ಯ, ಅಕ್ಷರ್ ಪಟೇಲ್​ರಂತ ಸೀನಿಯರ್​ ಪ್ಲೇಯರ್ಸ್​ ಜತೆ ಯಶಸ್ವಿ ಜೈಸ್ವಾಲ್​​​, ರಿಂಕು ಸಿಂಗ್​​​ ರಂತ ಹಲವು ಯುವ ಆಟಗಾರರ ದಂಡಿದೆ. ಇವರ ನಡುವೆ ಸಮನ್ವಯತೆ ಸಾಧಿಸೋದು ಸ್ಕೈಗೆ ಬಿಗ್ಗೆಸ್ಟ್​ ಚಾಲೆಂಜ್ ಆಗಿದೆ.

ಚಾಲೆಂಜ್ ನಂ.5: ಕೊಹ್ಲಿ-ರೋಹಿತ್​​​​​​​ ಕೊರತೆ
ಕಿಂಗ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾರಂತ ದಿಗ್ಗಜ ಆಟಗಾರರು ಟಿ20 ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದಾರೆ. ಇಬ್ಬರೂ ತಂಡಕ್ಕೆ ಆಧಾರ ಸ್ತಂಭವಾಗಿದ್ರು. ಇವರಿಲ್ಲದೇ ಭಾರತ ತಂಡ ಮೊದಲ ಸರಣಿ ಆಡುತ್ತಿದೆ. ಆನ್​ಫೀಲ್ಡ್​ ಇರಬಹುದು, ಆಫ್​ ದ ಫೀಲ್ಡ್​ ಇರಬಹುದು. ಡ್ರೆಸ್ಸಿಂಗ್​ ರೂಮ್​ನಲ್ಲಿ ಜೋಡೆತ್ತುಗಳ ಕೊರತೆ ಕಾಡೇ ಕಾಡುತ್ತೆ. ಆಟದ ಜೊತೆ ಅವರ ಅನುಭವವನ್ನ ತಂಡ ಕಳೆದುಕೊಳ್ಳಲಿದ್ದು, ನ್ಯೂ ಕ್ಯಾಪ್ಟನ್ ಇದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ:ಪಾರಿವಾಳ ಉಳಿಸಲು ಹೋಗಿ ನರಳಿ ನರಳಿ ಪ್ರಾಣ ಬಿಟ್ಟ ಬಾಲಕ.. ಅಲ್ಲಿ ಆಗಿದ್ದೇನು..?

ಸರ್​ಪ್ರೈಸ್ ರೀತಿಯಲ್ಲಿ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟಕ್ಕೇರಿದ ಸೂರ್ಯಕುಮಾರ್​ ಮುಂದಿರೋ ಹಾದಿಯಂತೂ ಸುಲಭ ಇಲ್ಲ. ಹಲವು ಸವಾಲುಗಳನ್ನ ಮೆಟ್ಟಿನಿಂತರೆ ಮಾತ್ರ ಯಶಸ್ಸು ಸಿಗಲಿದೆ. ಚಾಲೆಂಜಸ್​ ನೂತನ ಕ್ಯಾಪ್ಟನ್​ ಹೇಗೆ ನಿಭಾಯಿಸ್ತಾರೆ ಅನ್ನೋದನ್ನು ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೀ ಕಲ್ಲು ಮುಳ್ಳಿನ ಹಾದಿ.. ಇಲ್ಲಿ ಸೂರ್ಯಂಗೇ ಟಾರ್ಚ್​​.. ಹೆಂಗಿದೆ ಗೊತ್ತಾ ಚಕ್ರವ್ಯೂಹ..?

https://newsfirstlive.com/wp-content/uploads/2024/07/SURYA-KUMAR.jpg

Load More