/newsfirstlive-kannada/media/post_attachments/wp-content/uploads/2025/01/Gavi-Gangadhareshwara-Temple.jpg)
ಬೆಂಗಳೂರು: ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ದೇವಾಲಯ, ಗುಡಿ, ಗೋಪುರದಲ್ಲಿ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯ ಗವಿಪುರದಲ್ಲಿನ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
/newsfirstlive-kannada/media/post_attachments/wp-content/uploads/2025/01/BNG_GAVI_GANGADARESHWARA5.jpg)
ಇದನ್ನೂ ಓದಿ:ಸಂಕ್ರಾಂತಿ ಸಂಭ್ರಮ; ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತರು ಕಾತರ
ಇನ್ನೂ, ಗವಿಗಂಗಾಧರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇಂದು ಸಂಜೆ ಗವಿಗಂಗಾಧರೇಶ್ವರನ ಮೇಲೆ ದೇಗುಲ ಬಲಭಾಗದ ಕಮಾನಿನಿಂದ ಕಿಟಕಿ ಮೂಲಕ ಸೂರ್ಯ ರಶ್ಮಿ ಪ್ರವೇಶ ಮಾಡಬೇಕಿತ್ತು. ಇದೇ ಸೂರ್ಯರಶ್ಮಿ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಭಕ್ತರು ಕಾಯುತ್ತಿದ್ದರು. ಹೀಗಾಗಿ ಭಕ್ತರಿಗಾಗಿ LED ಸ್ಕ್ರೀನ್ ಕೂಡ ಹಾಕಲಾಗಿತ್ತು.
ಇಂದು ಸಿಲಿಕಾನ್​ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಇದ್ದುದರಿಂದ ಗವಿಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಮಾಡಲಿಲ್ಲ. ಹಾಗೇನಾದರೂ ಗವಿಗಂಗಾಧರೇಶ್ವರನ ಮೇಲೆ ಸೂರ್ಯರಶ್ಮಿ ಸ್ಪರ್ಶ ಮಾಡಿದ್ದರೇ ದೇವರಿಗೆ ಕ್ಷೀರಾಭಿಷೇಕ ಮಾಡಲಾಗುತ್ತಿತ್ತು. ಆದರೆ ಸೂರ್ಯರಶ್ಮಿ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.
ಗವಿಗಂಗಾಧರನ ಚಮತ್ಕಾರ!
/newsfirstlive-kannada/media/post_attachments/wp-content/uploads/2025/01/Gavi-Gangadhareshwara-Temple1.jpg)
ಪ್ರತಿ ಮಕರ ಸಂಕ್ರಾಂತಿ ದಿನದಲ್ಲಿ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಚಮತ್ಕಾರ ನಡೆಯುತ್ತದೆ. ಈ ದಿನ ಗವಿ ಗಂಗಾಧರೇಶ್ವರನನ್ನು ಸೂರ್ಯದೇವ ನಮಿಸುತ್ತಿದ್ದ. ಆದರೆ ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದುದರಿಂದ ಗಂಗಾಧರೇಶ್ವರನ ಮೇಲೆ ಸೂರ್ಯರಶ್ಮಿ ಸ್ಪರ್ಶ ಆಗಲಿಲ್ಲ. ಇನ್ನೂ ಇತಿಹಾಸದಲ್ಲೇ 3ನೇ ಬಾರಿ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬೀಳದಂತೆ ಆಗಿದೆ.
ಹಾಗೇನಾದರೂ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶಯಾಗಿದ್ದರೇ, ಗವಿಗಂಗಾಧರನಿಗೆ ನಮಿಸಿ ಪಥವನ್ನು ಸೂರ್ಯದೇವ ಬದಲಿಸುತ್ತಿದ್ದ. ಇದಾದ ಬಳಿಕ ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವಾಗ ಸೂರ್ಯ ಕಿರಣಗಳು ದೇವಾಲಯದಲ್ಲಿನ ಶಿವ ಲಿಂಗವನ್ನು ಸ್ಪರ್ಶಿಸುತ್ತಿದ್ದ. ಹೀಗಾಗಿಯೇ ಇಂದು ಗವಿಗಂಗಾಧರ ದೇವಸ್ಥಾನದ ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿತ್ತು. ಇಂದು ಬೆಳ್ಳಗ್ಗೆ 5 ಗಂಟೆಗೆ ಪೂಜೆ ಆರಂಭವಾಗಿದ್ದು ಪುಷ್ಪಾಭಿಷೇಕ, ಮಹಮಂಗಳಾರತಿ, ಪಂಚಾಭೀಷೇಕ ಮಾಡಿದ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಸೂರ್ಯರಶ್ಮಿ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us