ಅಯೋಧ್ಯೆ ರಾಮಲಲ್ಲಾನಿಗೆ ಸೂರ್ಯನ ತಿಲಕ.. ಅದ್ಭುತ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ

author-image
admin
Updated On
ಅಯೋಧ್ಯೆ ರಾಮಲಲ್ಲಾನಿಗೆ ಸೂರ್ಯನ ತಿಲಕ.. ಅದ್ಭುತ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ
Advertisment
  • ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದಲ್ಲಿ ಮೊದಲ ರಾಮನವಮಿ
  • ಸೂರ್ಯವಂಶದ ರಘುರಾಮನಿಗೆ ಸೂರ್ಯ ಭಗವಾನನಿಂದ ಅಭಿಷೇಕ
  • ಸುಮಾರು 70 ಮಿ.ಮೀ ಉದ್ದದ ತಿಲಕ ಹಣೆ ಮೇಲೆ ಮೂಡಿದ ದೃಶ್ಯ

ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ ಮುಗಿಲು ಮುಟ್ಟಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಳಿಕ ಮೊದಲ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

publive-image

ಶ್ರೀರಾಮನವಿಮಿಯಂದು ಬಾಲರಾಮನಿಗೆ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಸೂರ್ಯವಂಶದ ರಘುರಾಮನಿಗೆ ಸೂರ್ಯ ಭಗವಾನನಿಂದ ಅಭಿಷೇಕ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಾಮಲಲ್ಲಾನಿಗೆ ಸೂರ್ಯ ರಶ್ಮಿ ಸ್ಪರ್ಶ ಮಾಡಿದ್ದು, ಸುಮಾರು 70 ಮಿ.ಮೀ ಉದ್ದದ ತಿಲಕ ಹಣೆ ಮೇಲೆ ಮೂಡಿದೆ.


">April 17, 2024

ಚೈತ್ರ ಮಾಸ ಶುಕ್ಲ ಪಕ್ಷದ ನವಮಿಯಂದು ಬಾಲ ರಾಮನಿಗೆ ಸೂರ್ಯ ರಶ್ಮಿ ಸ್ಪರ್ಶಿಸಿದೆ. ರಾಮಲಲ್ಲಾನಿಗೆ ಸುಮಾರು ಮೂರರಿಂದ ಮೂರುವರೆ ನಿಮಿಷ ಸೂರ್ಯನ ಕಿರಣಗಳು ಸ್ಪರ್ಶಿಸಿದ್ದು, 2 ನಿಮಿಷಗಳ ಕಾಲ ಸಂಪೂರ್ಣ ತಿಲಕ ಗೋಚರಿಸಿದೆ. ಈ ಅದ್ಭುತ ದೃಶ್ಯವನ್ನು ಅಯೋಧ್ಯೆಯಲ್ಲಿ ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಸೂರ್ಯ ತಿಲಕ ಮೂಡಿದ್ದು ಹೇಗೆ?
ಅಯೋಧ್ಯೆಯಲ್ಲಿ ಬಾಲ ರಾಮನ ಹಣೆಯನ್ನು ಸೂರ್ಯ ರಶ್ಮಿಯು ವೈಜ್ಞಾನಿಕವಾಗಿ ಸ್ಪರ್ಶಮಾಡಿದೆ. ಐಐಟಿ ರೂರ್ಕಿಯ ವಿಜ್ಞಾನಿಗಳ ನೇತೃತ್ವದಲ್ಲಿ ಈ ಸೂರ್ಯ ತಿಲಕದ ವ್ಯವಸ್ಥೆ ಮಾಡಲಾಗಿತ್ತು.
ಐಆರ್ ಫಿಲ್ಟರ್ ಇರುವ ಅಪರ್ಚರ್ ಮೂಲಕ ಗರ್ಭ ಗುಡಿಯ ಮೇಲ್ಭಾಗದಿಂದ ಸೂರ್ಯ ರಶ್ಮಿ ಪ್ರವೇಶಿಸಿದೆ. ದೇಗುಲದ ದಕ್ಷಿಣ ಭಾಗದಿಂದ ಸೂರ್ಯ ರಶ್ಮಿ ಪ್ರವೇಶಿಸಿದ್ದು, ಇದಕ್ಕಾಗಿ ನಿರ್ದಿಷ್ಟ ಕೋನದಲ್ಲಿ 4 ಲೆನ್ಸ್ ಹಾಗೂ 4 ಕನ್ನಡಿಗಳ ಬಳಕೆ ಮಾಡಲಾಗಿದೆ. ಸೂರ್ಯನ ಚಲನೆಯ ಆಧಾರದಲ್ಲಿ ಎಲ್ಲವನ್ನು ಅಳವಡಿಕೆ ಮಾಡಲಾಗಿದೆ. ರಾಮಲಲ್ಲಾ ಮೂರ್ತಿಗೆ ಸೂರ್ಯ ತಿಲಕಕ್ಕಾಗಿಯೇ ರಿಫ್ಲೆಕ್ಟಿವ್ ಮಿರರ್ಸ್ & ಲೆನ್ಸ್​ಗಳನ್ನ ಬಳಕೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment