ಸೂರ್ಯಕುಮಾರ್, ರಯಾನ್ ಘರ್ಜನೆ.. ಪಂತ್​ ಪಡೆಗೆ ಬಿಗ್​ ಟಾರ್ಗೆಟ್​ ಸೆಟ್​ ಮಾಡಿದ ಮುಂಬೈ

author-image
Bheemappa
Updated On
ಸೂರ್ಯಕುಮಾರ್, ರಯಾನ್ ಘರ್ಜನೆ.. ಪಂತ್​ ಪಡೆಗೆ ಬಿಗ್​ ಟಾರ್ಗೆಟ್​ ಸೆಟ್​ ಮಾಡಿದ ಮುಂಬೈ
Advertisment
  • ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರಿಂದ ಹಾಫ್​ಸೆಂಚುರಿ
  • ಎರಡು ಬಿಗ್ ಸಿಕ್ಸರ್​ಗಳನ್ನ ಬಾರಿಸಿ ರೋಹಿತ್ ಶರ್ಮಾ ಔಟ್
  • ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ ಬ್ಯಾಟಿಂಗ್​ನಲ್ಲಿ ವಿಫಲ​

ರಯಾನ್ ರಿಕೆಲ್ಟನ್​ ಹಾಗೂ ಸೂರ್ಯಕುಮಾರ್ ಯಾದವ್ ಅವರ ಸಿಡಿಲಬ್ಬರದ ಹಾಫ್​​ಸೆಂಚುರಿಯಿಂದ ಲಕ್ನೋಗೆ ಮುಂಬೈ ಇಂಡಿಯನ್ಸ್ ಬಿಗ್​ ಟಾರ್ಗೆಟ್ ಸೆಟ್ ಮಾಡಿದೆ.

publive-image

ತವರಿನಲ್ಲಿ ನಡೆಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್​ ಜೊತೆಗಿನ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ಸ್​​ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ಆಟಗಾರರು ತಮ್ಮ ನಿರೀಕ್ಷೆಯಂತೆ ಬಿಗ್​ಸ್ಕೋರ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ನೋ ತಂಡಕ್ಕೆ ಈ ರನ್​ಗಳನ್ನು ಚೇಸ್ ಮಾಡುವುದು ಕಠಿಣವಾಗಬಹುದು ಎಂದು ಹೇಳಬಹುದು.

ಮುಂಬೈ ಪರ ಓಪನರ್​ಗಳಾದ ರೋಹಿತ್ ಶರ್ಮಾ, ರಯಾನ್ ರಿಕೆಲ್ಟನ್ ಉತ್ತಮ ಓಪನಿಂಗ್ ಪಡೆಯಲಿಲ್ಲ. ಕೇವಲ 12 ರನ್​ಗೆ ರೋಹಿತ್ ಔಟ್ ಆದರು. ಆದರೆ ರಯಾನ್ ಸ್ಫೋಟಕ 58 ರನ್​ ಚಚ್ಚಿದರು. ರಯಾನ್ ಕೇವಲ 24 ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿದರು. ಪಂದ್ಯದಲ್ಲಿ ಒಟ್ಟು 32 ಬಾಲ್​ಗಳನ್ನು ಆಡಿದ ರಯಾನ್​, 6 ಬೌಂಡರಿ, 4 ಬಿಗ್​​ ಸಿಕ್ಸರ್​​ಗಳಿಂದ 58 ರನ್​ ಸಿಡಿಸಿ ಆಡುವಾಗ ದಿಗ್ವೀಶ್​ ರಾಥಿ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

ಇನ್ನು ರಯಾನ್ ಔಟ್​ ಆದ ಬಳಿಕ ಕ್ರೀಸ್​ಗೆ​ ಆಗಮಿಸಿದ ಸೂರ್ಯಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ರಿಷಭ್ ಪಂತ್​ ಪಡೆಯ ಬೌಲರ್​ಗಳನ್ನ ಮನಬಂದಂತೆ ಚಚ್ಚಿದ ಮಿಸ್ಟರ್ 360 ಪಂದ್ಯದಲ್ಲಿ 48 ರನ್​ ಆಗಿದ್ದಾಗ ಸಿಕ್ಸರ್​ ಬಾರಿಸುವ ಮೂಲಕ ಅರ್ಧಶತಕ ಬಾರಿಸಿದ್ದು ವಿಶೇಷ ಎನಿಸಿತು. ಕೇವಲ 28 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್​ 4 ಫೋರ್, 4 ದೊಡ್ಡ ಸಿಕ್ಸರ್​ನಿಂದ 54 ರನ್​ ಗಳಿಸಿದ್ದಾಗ ಕ್ಯಾಚ್​ ಕೊಟ್ಟು ಹೊರ ನಡೆದರು.

ಇದನ್ನೂ ಓದಿ:6, 6, 6, 6; ಸಿಕ್ಸ್​ ಬಾರಿಸಿ ಸೂರ್ಯಕುಮಾರ್ ಅರ್ಧಶತಕ.. ಲಕ್ನೋಗೆ SKY ಪಂಚ್!​

publive-image

ಮುಂಬೈನಲ್ಲಿ ರೋಹಿತ್ ಶರ್ಮಾ 12, ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ 5, ತಿಲಕ್ ವರ್ಮಾ 5 ಇವರನ್ನು ಬಿಟ್ಟರೇ ಉಳಿದ ಬ್ಯಾಟ್ಸ್​ಮನ್​ಗಳು ಎಲ್ಲ ಅತ್ಯುತ್ತಮ ಪರ್ಫಾಮೆನ್ಸ್​ ನೀಡಿದರು. ಇದರಿಂದ 20 ಓವರ್​ಗಳಲ್ಲಿ ಮುಂಬೈ ಇಂಡಿಯನ್ಸ್​ 7 ವಿಕೆಟ್ ನಷ್ಟಕ್ಕೆ 216 ರನ್​ಗಳ ಗುರಿಯನ್ನು ಲಕ್ನೋ ಸೂಪರ್​ ಜೈಂಟ್ಸ್​ಗೆ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment