ರತನ್ ಟಾಟಾಗೆ ಸಂತಾಪ ಸೂಚಿಸಿದ ಕ್ರಿಕೆಟರ್ಸ್​.. ಸೂರ್ಯಕುಮಾರ್, ಶಮಿ, ಸೇಹ್ವಾಗ್ ಹೇಳಿದ್ದು ಏನು?

author-image
Bheemappa
Updated On
ರತನ್ ಟಾಟಾಗೆ ಸಂತಾಪ ಸೂಚಿಸಿದ ಕ್ರಿಕೆಟರ್ಸ್​.. ಸೂರ್ಯಕುಮಾರ್, ಶಮಿ, ಸೇಹ್ವಾಗ್ ಹೇಳಿದ್ದು ಏನು?
Advertisment
  • ನಮ್ಮನ್ನ ಅಗಲಿದ ದೇಶ ಕಂಡ ಮಹಾನ್ ಉದ್ಯಮಿ ರತನ್ ಟಾಟಾ
  • ಟಾಟಾರನ್ನ ಮಾಜಿ ಕ್ರಿಕೆಟ್ ಪ್ಲೇಯರ್ ಸೇಹ್ವಾಗ್ ಏನೆಂದು ಕರೆದರು?
  • ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಉದ್ಯಮಿ ರತನ್ ಟಾಟಾ

ಮುಂಬೈ: ದೇಶದ ಹೆಮ್ಮೆಯ ಉದ್ಯಮಿ ಹಾಗೂ ಟಾಟಾ ಸನ್ಸ್​​ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರು ನಿಧನ ಹೊಂದಿದ್ದಾರೆ. 86 ವರ್ಷದ ರತನ್ ಟಾಟಾ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ರತನ್ ಟಾಟಾ ಅವರು ನಿಧನರಾಗಿದ್ದಾರೆ. ಸದ್ಯ ಈ ಸಂಬಂಧ ಕ್ರಿಕೆಟರ್ಸ್ ಸಂತಾಪ ಸೂಚಿಸಿದ್ದಾರೆ.

ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಪೇಸ್ ಬೌಲರ್ ಮೊಹಮ್ಮದ್ ಶಮಿ, ಮಾಜಿ ಪ್ಲೇಯರ್​ಗಳಾದ ಸುರೇಶ್ ರೈನಾ, ಹರ್ಭಜನ್ ಸಿಂಗ್, ವೀರೇಂದ್ರ ಸೇಹ್ವಾಗ್ ಸೇರಿದಂತೆ ಇತರೆ ಕ್ರಿಕೆಟರ್ಸ್ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿ, ಲೆಜೆಂಡರಿ ಉದ್ಯಮಿಗೆ ಗೌರವ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಪ್ರೀತಿಯ ಗೆಳೆಯನಿಗೆ ಮಾಜಿ ಗೆಳತಿಯಿಂದ ಭಾವುಕ ವಿದಾಯ.. ನಿನ್ನ ನಷ್ಟ ಸಹಿಸಿಕೊಳ್ಳುವುದು ಕಷ್ಟವೆಂದ ಸಿಮಿ ಗೆರೆವಾಲ್

publive-image

ರತನ್ ಟಾಟಾ ಅವರನ್ನ ಕಳೆದುಕೊಂಡು ಒಂದು ಯುಗದ ಅಂತ್ಯವಾಗಿದೆ. ಅವರು ಎಲ್ಲರಿಗೂ ಸ್ಪೂರ್ತಿದಾಯಕರಾಗಿದ್ದರು. ಎಲ್ಲರ ಹೃದಯ ಸ್ಪರ್ಶಿಸಿದ್ದರು. ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಅಂತ್ಯವಿಲ್ಲದ ನಿಮ್ಮ ಅದ್ಭುತವಾದ ಸೇವೆಗೆ ಧನ್ಯವಾದಗಳು. ನೀವು ಎಂದಿಗೂ ಭಾರತೀಯರ ಹೃದಯದಲ್ಲಿ ನೆಲೆಸಿರುತ್ತೀರಿ ಎಂದು ಸೂರ್ಯಕುಮಾರ್ ಎಕ್ಸ್​ ಪೋಸ್ಟ್ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: National Post Day; ವಿಶ್ವದ ಎತ್ತರದ, ಭಾರತದ ತೇಲುವ 2 ಅಂಚೆ ಕಚೇರಿ ಇರುವುದು ಎಲ್ಲಿ?


">October 9, 2024

ಮಾಜಿ ಸ್ಟಾರ್ ಕ್ರಿಕೆಟರ್ ವೀರೇಂದ್ರ ಸೇಹ್ವಾಗ್ ಎಕ್ಸ್​ನಲ್ಲಿ ಸಂತಾಪ ಸೂಚಿಸಿದ್ದು, ನಮ್ಮ ನಿಜವಾದ ಭಾರತದ ರತ್ನರಾಗಿದ್ದ ಶ್ರೀರತನ್ ಟಾಟಾ ಜೀ ಅವರನ್ನು ಕಳೆದುಕೊಂಡಿದ್ದೇವೆ. ನನಗೆ ಸೇರಿದಂತೆ ಎಲ್ಲರಿಗೂ ಅವರ ಜೀವನ ಸ್ಪೂರ್ತಿದಾಯಕ. ಅವರು ಮುಂದೆಯು ನಮ್ಮೆಲ್ಲರ ಹೃದಯದಲ್ಲಿ ನೆಲೆಸಿರುತ್ತಾರೆ. ಓಂ ಶಾಂತಿ ಎಂದು ಸೇಹ್ವಾಗ್ ಅವರು ಸಂತಾಪ ಸೂಚಿಸಿದ್ದಾರೆ.


">October 9, 2024

ಮೊಹಮ್ಮದ್ ಶಮಿ ಕೂಡ ಎಕ್ಸ್​​ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ನಮ್ಮ ರಾಷ್ಟ್ರದ ಪ್ರಗತಿಗೆ ರತನ್ ಟಾಟಾ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ನಮ್ರತೆ, ದೃಷ್ಟಿ ಮತ್ತು ಸಹಾನುಭೂತಿ ನಮಗೆ ಶಕ್ತಿ ನೀಡುತ್ತದೆ. ನೀವು ಶಾಂತಿಯಿಂದ ವಿಶ್ರಾಂತಿ ಪಡೆಯಿರಿ ಎಂದು ಶಮಿ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.


">October 9, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment