ಸೂರ್ಯನ ಬತ್ತಳಿಕೆಯಲ್ಲಿವೆ ಬರೋಬ್ಬರಿ 10 ಶಾಟ್ಸ್​​​​! ಯಾವ ಶಾಟ್ಸ್​​​​​​ನಲ್ಲಿ ಹೆಚ್ಚು ರನ್​​? ಹೆಚ್ಚು ಸಿಕ್ಸ್​​?

author-image
AS Harshith
Updated On
ಸೂರ್ಯನ ಬತ್ತಳಿಕೆಯಲ್ಲಿವೆ ಬರೋಬ್ಬರಿ 10 ಶಾಟ್ಸ್​​​​! ಯಾವ ಶಾಟ್ಸ್​​​​​​ನಲ್ಲಿ ಹೆಚ್ಚು ರನ್​​? ಹೆಚ್ಚು ಸಿಕ್ಸ್​​?
Advertisment
  • ದಶಾವತಾರಿ ಸೂರ್ಯಕುಮಾರ್​ ಯಾದವ್​.. ಒಂದೊಂದು ಶಾಟ್ಸ್​​​​ ಅದ್ಭುತ
  • ಭಿನ್ನ ಭಿನ್ನ ಶಾಟ್ಸ್​ಗಳನ್ನ ಬಾರಿಸೋದ್ರಲ್ಲಿ ಸೂರ್ಯಕುಮಾರ್ ಯಾದವ್​​ ಎತ್ತಿದ ಕೈ
  • ಅದೆರಡು ಶಾಟ್ಸ್​​ಗಳನ್ನ ಆಡದೇ ಸೂರ್ಯ ಪೆವಿಲಿಯನ್​ಗೆ ವಾಪಾಸ್ಸಾಗಿದ್ದು ತೀರಾ ಕಮ್ಮಿ

ಸೂರ್ಯಕುಮಾರ್​ ಯಾದವ್​ ಟೀಮ್ ಇಂಡಿಯಾದ ಪವರ್​​ಫುಲ್ ಸಿಡಿಗುಂಡು. ಇನೋವೇಟಿವ್ ಶಾಟ್ಸ್​ ಹೊಡೆಯೋದ್ರಲ್ಲಿ ಈತನನ್ನ ಮೀರಿಸೋರೆ ಇಲ್ಲ. ಈತನನ್ನ ದಶಾವತಾರಿ ಅಂದ್ರು ತಪ್ಪಲ್ಲ. ಯಾಕಂದ್ರೆ ಹತ್ತು ಅವತಾರಗಳನ್ನ ಎತ್ತಿ ಎದುರಾಳಿ ಬೌಲರ್​ಗಳನ್ನ ಸಂಹರಿಸ್ತಾನೆ. ಅಷ್ಟಕ್ಕೂ ಏನಿದು ದಶಾವತಾರದ ಕಥೆ? ಈ ಸ್ಟೋರಿ ಓದಿ.

ಸೂರ್ಯಕುಮಾರ್​ ಯಾದವ್ 'ಶಾಟ್ಸ್​​​​ ಕಿಂಗ್​​​'..!

ಟೈಮಿಂಗ್​, ಪವರ್​ ಮತ್ತು ಇನೊವೇಷನ್​ಗೆ ಇನ್ನೊಂದು ಹೆಸರೇ ಸೂರ್ಯಕುಮಾರ್​ ಯಾದವ್​​. ಈ ಡಿಸ್ಟ್ರಕ್ಟಿವ್ ಬ್ಯಾಟರ್​​ ಅಂಗಳಕ್ಕಿಳಿದ್ರೆ ಸಾಕು ಮೈದಾನದ ಮೂಲೆ-ಮೂಲೆಗೂ ಚೆಂಡಿನ ದರ್ಶನ ಆಗುತ್ತೆ. ಭಿನ್ನ ಭಿನ್ನ ಶಾಟ್ಸ್​ಗಳನ್ನ ಬಾರಿಸೋದ್ರಲ್ಲಿ ಸ್ಕೈ ಮುಂದೆ ಮತ್ತೊಬ್ಬ ಆಟಗಾರನಿಲ್ಲ. ಸೂರ್ಯನ ಬತ್ತಳಿಕೆಯಲ್ಲಿ ಬರೋಬ್ಬರಿ ಹತ್ತು ಶಾಟ್ಸ್​​​ಗಳಿವೆ. ಒಂದೊಂದು ಸ್ಟ್ರೋಕ್ಸ್​ ಕೂಡ ಬೌಲರ್​​ನ ದಂಗಾಗಿಸಿದ್ರೆ, ನೋಡುಗರ ಕಿಕ್​ ಹೆಚ್ಚಿಸುತ್ತೆ.

publive-image

ಇದನ್ನೂ ಓದಿ: ಡಿವೈಡರ್​ ದಾಟಿ ಬಸ್​ಗೆ ಭೀಕರವಾಗಿ ಕಾರು ಡಿಕ್ಕಿ.. ಸ್ಥಳದಲ್ಲೇ ಸಾಫ್ಟ್​​ವೇರ್​ ಉದ್ಯೋಗಿಗಳು ಸಾವು

ಫ್ಲಿಕ್​​ ಸ್ಟ್ರೋಕ್​​ ಪಂಟರ್​​.. ಕವರ್​​ ಡ್ರೈವ್​​​​​ಗೆ ರಾಜ!

ಫ್ಲಿಕ್​​​​​​​​​​​ ಹಾಗೂ ಕವರ್ ಡ್ರೈವ್​​​! ಈ ಎರಡು ಶಾಟ್ಸ್​​ ಬಾರಿಸೋದಕ್ಕೆ ಸೂರ್ಯ ಹೆಸರುವಾಸಿ. ಈ ಎರಡು ಶಾಟ್ಸ್​​ಗಳನ್ನ ಆಡದೇ ಸೂರ್ಯ ಪೆವಿಲಿಯನ್​ಗೆ ವಾಪಾಸ್ಸಾಗಿದ್ದು ತೀರಾ ಕಮ್ಮಿ. ಆದರೆ ಕವರ್ ಡ್ರೈವ್​ಗೆ ಹೋಲಿಸಿದ್ರೆ, ಫ್ಲಿಕ್​​​​​​​​​​​​​ ಸ್ಟ್ರೋಕ್ಸ್​​ನಲ್ಲೆ ಸ್ಕೈ ಅತಿ ಹೆಚ್ಚು ರನ್ ಗಳಿಸಿದ್ದಾರೆ.

ಫ್ಲಿಕ್​​​​ ಕವರ್​ ಡ್ರೈವ್

ಫ್ಲಿಕ್​​ ಸ್ಟ್ರೋಕ್​​ ಪಂಟರ್ ಅಂತ ಕರೆಸಿಕೊಳ್ಳುವ ಸೂರ್ಯ ಈ ಶಾಟ್ಸ್​​ನಿಂದಲೇ 58.2ರ ಎವರೇಜ್​ನಲ್ಲಿ 349 ರನ್​​ ಹೊಡೆದಿದ್ದಾರೆ. 170.2ರ ಬ್ಯಾಟಿಂಗ್ ಸ್ಟ್ರೈಕ್​ರೇಟ್ ಹೊಂದಿದ್ದು, ಫ್ಲಿಕ್ ಶಾಟ್​ನಲ್ಲಿ 18 ಬೌಂಡ್ರಿ ಹಾಗೂ 19 ಸಿಕ್ಸರ್ ಚಚ್ಚಿದ್ದಾರೆ. ಇನ್ನು ಕವರ್ ಡ್ರೈವ್ ಮೂಲಕ 63.3ರ ಎವರೇಜ್​ನಲ್ಲಿ 253 ರನ್​ ಕೊಳ್ಳೆ ಹೊಡೆದಿದ್ದಾರೆ. 176.9 ಸ್ಟ್ರೈಕ್​ರೇಟ್​ನಲ್ಲಿ 27 ಬೌಂಡ್ರಿ ಹಾಗೂ 11 ಸಿಕ್ಸರ್ ಸಿಡಿಸಿದ್ದಾರೆ.

ಇದನ್ನೂ ಓದಿ: Good News.. ಸುನಿತಾ ವಿಲಿಯಮ್ಸ್​ ಬಗ್ಗೆ ಬಿಗ್​ ಅಪ್​ಡೇಟ್ ಕೊಟ್ಟ NASA

publive-image

ಪ್ಯಾಡಲ್ ಸ್ಕೂಪ್​​​​​-ಸ್ಕ್ವೇರ್​ ಡ್ರೈವ್​​ಗೆ ಎರಡು ಕಣ್ಣು ಸಾಲದು..!

ಫ್ಲಿಕ್ ಹಾಗೂ ಕವರ್​​ ಡ್ರೈವ್​​ ಬಳಿಕ ಸ್ಕೈ ಪ್ಯಾಡಲ್ ಸ್ಕೂಪ್​ ಹಾಗೂ ಸ್ಕ್ವೇರ್ ಡ್ರೈವ್​ನಿಂದಲೇ ಸೂರ್ಯ ಫ್ಯಾನ್ಸ್ ಅನ್ನ ಹೆಚ್ಚು ರಂಜಿಸ್ತಾರೆ. ಅದ್ಯಾವ ಬೌಲರ್​​​​ ಅದ್ರೂ ಸರಿ. ಪ್ಯಾಡಲ್​ ಸ್ಕೂಪ್​​​​​ ಮತ್ತು ಸ್ಕ್ವೇರ್ ಡ್ರೈವ್ ದರ್ಶನ ಮಾಡಿಯೇ ಮಾಡಿಸ್ತಾರೆ.

ಪ್ಯಾಡಲ್ ಸ್ಕೂಪ್​​​ ಸ್ಕ್ವೇರ್ ಡ್ರೈವ್

ಸೂರ್ಯ ಪ್ಯಾಡಲ್ ಸ್ಕೂಪ್​​​ನಿಂದ 46 ರ ಎವರೇಜ್​ನಲ್ಲಿ 184 ರನ್ ಕಲೆ ಹಾಕಿದ್ದಾರೆ. ಬ್ಯಾಟಿಂಗ್ ಸ್ಟ್ರೈಕ್​ರೇಟ್​​​ 368 ರನ್ ಆಗಿದೆ. ಇನ್ನು 14 ಬೌಂಡ್ರಿ ಗಳಿಸಿದ್ರೆ, 20 ಸಿಕ್ಸರ್ ಸಿಡಿಸಿದ್ದಾರೆ. ಸ್ಕ್ವೇರ್ ಡ್ರೈವ್​​​ನಲ್ಲಿ 174.3ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ್ದು, 176 ರನ್ ಚಚ್ಚಿದ್ದಾರೆ. 21 ಬೌಂಡ್ರಿ ಹೊಡೆದ್ರೆ, 5 ಸಿಕ್ಸರ್​ಗಳನ್ನ ಸಿಡಿಸಿದ್ದಾರೆ.

publive-image

ಇದನ್ನೂ ಓದಿ: BBMP ಕಸದ ಲಾರಿ ಡಿಕ್ಕಿ ಹೊಡೆದು ಯುವಕ, ಯುವತಿ ಸಾವು.. ಮೃತ ಶಿಲ್ಪಾ ಯಾರು..?

ಬರೀ ಇವಿಷ್ಟೇ ಅಲ್ಲ. ಇನ್ನು ಅನೇಕ ಇನೊವೇಷನ್ ಶಾಟ್ಸ್​​​ನಿಂದಲೂ ಸೂರ್ಯ ರನ್ ಹೊಳೆಯನ್ನೆ ಹರಿಸಿದ್ದಾರೆ. ಆ ಶಾಟ್ಸ್​​ಗಳ ಸ್ಕೋರ್​ ಕಾರ್ಡ್​ ಇಲ್ಲಿದೆ ನೋಡಿ.

ಸ್ಟ್ರೋಕ್​ ರನ್​ ಸ್ಟ್ರೈಕ್​ರೇಟ್​​ 4/6
ಸ್ಕ್ವೇರ್​ ಕಟ್​​ 164 142.6 27/2
​​ಇನ್​ಸೈಡ್​​ ಔಟ್​ 157 402.6 17/14
ಪುಲ್​ ಶಾಟ್​ 155 227.9 13/11
ಆನ್​ ಡ್ರೈನ್​ 154 165.6 4/11
ಸ್ವೀಪ್​​​ ಶಾಟ್​ 116 163.4 18/2
ಪಿಕ್​ಅಪ್​​ 101 459.1 4/14

ಸೂರ್ಯಕುಮಾರ್​ ಸ್ಕ್ವೇರ್​ ಕಟ್ ಶಾಟ್ಸ್​​ ಮೂಲಕ 142.6 ಸ್ಟ್ರೈಕ್​ರೇಟ್​ನಲ್ಲಿ 164 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ 27 ಬೌಂಡ್ರಿ ಹಾಗೂ 2 ಸಿಕ್ಸರ್​ ಸೇರಿಕೊಂಡಿವೆ. ಇನ್ನು ಇನ್​ಸೈಡ್ ಔಟ್​​​​​​ನಲ್ಲಿ 157 ರನ್ ಬಾರಿಸಿದ್ದು, ಬೆರಗಾಗಿಸುವ 402.6 ಸ್ಟ್ರೈಕ್​ರೇಟ್​ ಹೊಂದಿದ್ದಾರೆ. 17 ಬೌಂಡ್ರಿ ಹೊಡೆದ್ರೆ 14 ಸಿಕ್ಸರ್​​​ಗಳನ್ನ ಸಿಡಿಸಿದ್ದಾರೆ. ಪುಲ್ ಶಾಟ್ ಮೂಲಕ 227.9 ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ 155 ರನ್​​ ಹೊಡೆದ್ರೆ, ಆನ್​ ಡ್ರೈವ್​​​​​ ಮೂಲಕ 165.6 ರ ಸ್ಟ್ರೈಕ್​ರೇಟ್​ನಲ್ಲಿ 154 ರನ್​ ಗಳಿಸಿದ್ದಾರೆ. 4 ಬೌಂಡ್ರಿ ಹೊಡೆದ್ರೆ 11 ಸಿಕ್ಸರ್ಸ್​ ಮೂಡಿ ಬಂದಿವೆ. ಇನ್ನು ಈಸಿಯಾಗಿ ಸ್ವೀಪ್​ ಶಾಟ್​​ ಬಾರಿಸುವ ಸ್ಕೈ 163.4ರ ಬ್ಯಾಟಿಂಗ್ ಸ್ಟ್ರೈಕ್​​​​ನಲ್ಲಿ 116 ರನ್​​ ಬಾರಿಸಿದ್ದಾರೆ. 18 ಬೌಂಡರಿ ಹಾಗೂ 2 ಸಿಕ್ಸ್​ ಸಿಡಿಸಿದ್ದಾರೆ. ಪಿಕ್​ಅಪ್​​​​​ ಸ್ಟ್ರೋಕ್ಸ್​ ಆಡೋದ್ರಲ್ಲಿ ಸ್ಟ್ರೈಕ್​ರೇಟ್ 459.1 ಹೊಂದಿದ್ದು, 4 ಬೌಂಡರಿ, 14 ಸಿಕ್ಸರ್ ಸಹಿತ 101 ರನ್​ ಬಾರಿಸಿದ್ದಾರೆ.

publive-image

ಸೂರ್ಯಕುಮಾರ್​​ ಯಾದವ್​ರ​ ನಾನಾ ಬಗೆಯ ಶಾಟ್ಸ್​​ ದರ್ಬಾರ್​​ ರೋಚಕವಾಗಿದೆ. ಹೀಗಾಗಿನೇ ಸ್ಕೈ ಟಿ20 ಕ್ರಿಕೆಟ್​ನ ಅಧಿಪತಿಯಾಗಿ ಮೆರೆದಾಡ್ತಿದ್ದಾರೆ. ನಿರ್ಭೀತ ಆಟವಾಡುವ ಸೂರ್ಯ ಭವಿಷ್ಯದಲ್ಲಿ ಇನ್ಯಾವ ಇನೋವೇಶನ್​​​​​ ಶಾಟ್ಸ್​​ ಮೂಲಕ ವಿಜೃಂಭಿಸ್ತಾರೆ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment