newsfirstkannada.com

‘ಫಸ್ಟ್ ಟೈಂ ನಿನ್ನ ನೋಡಿದಾಗ..’ ಸೂರ್ಯನ ಸಕ್ಸಸ್ ಹಿಂದೆ ನಾರಿ ಶಕ್ತಿ ಮತ್ತು ಪ್ರೀತಿ..!

Share :

Published August 18, 2024 at 2:52pm

    3 ವರ್ಷದಲ್ಲೆ ನಂ.1 ಬ್ಯಾಟ್ಸ್​​ಮನ್​​​.. T20 ಕ್ಯಾಪ್ಟನ್​​..!

    ಸೂರ್ಯನ ಶರವೇಗದ ಸಕ್ಸಸ್​ ಹಿಂದೆ ನಾರಿ ಶಕ್ತಿ

    30ನೇ ವರ್ಷಕ್ಕೆ ಡೆಬ್ಯು ಮಾಡಿ ವಿರಾಜಿಸಿದ್ದೆ ಮ್ಯಾಜಿಕ್​

ಸಕ್ಸಸ್​ ಯಾರಿಗೂ ಅಷ್ಟು ಬೇಗ ಸಿಗಲ್ಲ. ಅದೊಂದು ಮಹಾ ತಪಸ್ಸು. ಆದರೆ ಟೀಮ್ ಇಂಡಿಯಾದ ಡಿಸ್ಟ್ರಕ್ಟಿವ್ ಬ್ಯಾಟರ್​ ಸೂರ್ಯಕುಮಾರ್​​ ಯಾದವ್​​​ಗೆ ಯಶಸ್ಸು ಬಹು ಬೇಗನೆ ಸಿಕ್ಕು ಬಿಡ್ತು. ತಡವಾಗಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟರೂ ನಂಬರ್ 1 ಟಿ20 ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಚುಟುಕು ಕ್ರಿಕೆಟ್​ನ ನಾಯಕತ್ವ ಅರಸಿ ಬಂದಿದೆ. ಶಾರ್ಟ್​ ಟೈಮ್​ನಲ್ಲಿ ಸ್ಕೈ ಇಂತಹ ಹ್ಯೂಸ್​ ಸಕ್ಸಸ್​ಗೆ ಆ ನಾರಿ ಶಕ್ತಿ ಕಾರಣ.

ಸೂರ್ಯಕುಮಾರ್ ಯಾದವ್​​​. ಕ್ರಿಕೆಟ್ ದುನಿಯಾದ ವಿಧ್ವಂಸಕಾರಿ ಬ್ಯಾಟ್ಸ್​​ಮನ್​​. ಈ ಡೇಂಜರಸ್​ ಬ್ಯಾಟರ್​​​ ಅಂಗಳಕ್ಕೆ ಎಂಟ್ರಿ ಕೊಟ್ಟರೆ ಸಾಕು, ಬೌಲರ್​​ಗಳ ಮಾರಣ ಹೋಮ ನಡೆಯುತ್ತೆ. ಅದೆಂಥಾ ಬೌಲರ್​​ ಆದರೂ ಸೈ. ಸೂರ್ಯನ ಭಯಾನಕ ಬ್ಯಾಟಿಂಗ್ ಶಾಖಕ್ಕೆ ಸುಟ್ಟು ಹೋಗ್ತಾರೆ. ಅಂತಹ ಟೆರರ್ ಬ್ಯಾಟಿಂಗ್​​​. ವಿಭಿನ್ನ ವಿನೂತನ ಶಾಟ್ಸ್ ಮೂಲಕ ಕ್ರಿಕೆಟ್ ಲೋಕವನ್ನ ದಂಗಾಗಿಸಿದ್ದಾರೆ.

ಇದನ್ನೂ ಓದಿ:ಲಾಬಿ, ಒತ್ತಡ ಪಕ್ಕಕ್ಕೆ ಬಿಡಿ..! ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿನ ಅಸಲಿ ಕಾರಣ ರಿವೀಲ್..!

3 ವರ್ಷದಲ್ಲೇ ನಂ.1 ಬ್ಯಾಟ್ಸ್​​ಮನ್​
ಮಾರ್ಚ್​ 14, 2021.. ಸೂರ್ಯಕುಮಾರ್ ಅನ್ನೋ ಬೆಂಕಿ ಬ್ಯಾಟರ್​​ ಟಿ20 ಕ್ರಿಕೆಟ್​ಗೆ ಡೆಬ್ಯು ಮಾಡಿದ್ರು. ಆಗ ಅವರಿಗೆ 30 ವರ್ಷ ವಯಸ್ಸಾಗಿತ್ತು. ತಡವಾಗಿ ಟೀಮ್ ಇಂಡಿಯಾದ ಕದ ತಟ್ಟಿದ ಸ್ಕೈ ಕನ್ಸಿಸ್ಟನ್ಸಿ ಮತ್ತು ಡಿಸ್ಟ್ರಿಕ್ಟವ್​ ಆಟವಾಡಿ ಎಲ್ಲರನ್ನ ಚಕಿತಗೊಳಿಸಿದ್ರು. ರನ್​​ ಮೇಲೆ ರನ್​​​​​​​​ ಗಳಿಸಿ ಟಿ20 ಕ್ರಿಕೆಟ್​ನ ಕಿಂಗ್ ಅನ್ನಿಸಿಕೊಂಡ್ರು. ಅದ್ಭುತ ಪ್ರದರ್ಶನದ ಪರಿಣಾಮ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟವು ಒಲಿದು ಬಂತು. ಸ್ಕೈ ಇಷ್ಟೆಲ್ಲಾ ಸಾಧನೆ ಮಾಡಿದ್ದು ಜಸ್ಟ್ ಮೂರೇ ಮೂರು ವರ್ಷದಲ್ಲಿ. ಸೂರ್ಯನ ಈ ಶರವೇಗದ ಸಕ್ಸಸ್​​ಗೆ ಕಾರಣ ಪತ್ನಿ ದೇವಿಶಾ ಶೆಟ್ಟಿ.

ಸೂರ್ಯ-ದೇವಿಶಾ ಶೆಟ್ಟಿ ನಡ್ವೆ ಪ್ರೇಮ
ಟೀಮ್ ಇಂಡಿಯಾ ಕ್ರಿಕೆಟರ್ಸ್​ಗೂ ಲವ್​​ಗೂ ಒಂದು ಸುದೀರ್ಘ ಬೆಸುಗೆ ಇದೆ. ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ ಹಾಗೂ ಎಂಎಸ್ ಧೋನಿ. ಈ ತ್ರಿಮೂರ್ತಿ ದಿಗ್ಗಜರು ಪ್ರೇಮಿಸಿಯೇ ವಿವಾಹವಾದರು. ಅದೇ ಹಾದಿಯಲ್ಲಿ ಸೂರ್ಯಕುಮಾರ್ ಯಾದವ್ ಕೂಡ. ಸ್ಕೈ ತನ್ನ ಬಹುಕಾಲದ ಗೆಳತಿ ದೇವಿಶಾ ಶೆಟ್ಟಿ ಅವರನ್ನ ಪ್ರೀತಿಸಿ 2016 ರಲ್ಲಿ ಸಪ್ತಪದಿ ತುಳಿದ್ರು. ಈ ಸ್ಟಾರ್​​ ಜೋಡಿ ನಡುವೆ ಪ್ರೇಮ ಚಿಗುರೊಡೆದಿದ್ದೆ ಬಲು ರೋಚಕ.

ಅದು 2012ನೇ ಇಸವಿ. ಆಗಿನ್ನೂ ಸೂರ್ಯಕುಮಾರ್​​ ಕ್ರಿಕೆಟ್ ಲೋಕಕ್ಕೆ ಅಪರಿಚಿತ. ಆ ಟೈಮ್​​ನಲ್ಲೇ R.A PODAR ಕಾಲೇಜಿನಲ್ಲಿ ಓದುತ್ತಿದ್ದ ದೇವಿಶಾ ಸ್ಕೈ ಕಣ್ಣಿಗೆ ಬೀಳ್ತಾರೆ. ಅಷ್ಟೆ, ಸೌಂದರ್ಯದಲ್ಲಿ ಗಂಭೀರವಂತೆ, ಆಂತರಿಕವಾಗಿ ಔದಾರ್ಯವಾದ ದೇವಿಶಾ ಜೊತೆ ಲವ್​​ನಲ್ಲಿ ಬೀಳ್ತಾರೆ. ಮುಂಬೈನ ಬೀದಿ ಬೀದಿಗಳಲ್ಲಿ ಪ್ರೇಮ-ಪಕ್ಷಿಗಳಂತೆ ಹಾರಾಟ. ಇಬ್ಬರ ನವಿರಾದ ಪ್ರೇಮ ಮುಂದೆ ಹೊಸ ತಿರುವು ಪಡೆದುಕೊಳ್ಳುತ್ತೆ.

ಇದನ್ನೂ ಓದಿ:ಆರೋಗ್ಯದ ಸಮಸ್ಯೆಗೆ ಸಿಲುಕಿದ ಸುನಿತಾ ವಿಲಿಯಮ್ಸ್​; ಗಗನಯಾತ್ರಿಗೆ ಆಗಿದ್ದೇನು?

2012 ರಲ್ಲಿ ಲವ್​ನಲ್ಲಿ ಬಿದ್ದ ಸೂರ್ಯ-ದೇವಿಶಾ ಕಾಲೇಜು ದಿನಗಳಲ್ಲಿ ಸ್ನೇಹಿತರಾಗಿ ಪರಿಚಯವಾದ್ರು. ಬಳಿಕ ಆ ಸ್ನೇಹ ಪ್ರೀತಿಗೆ ತಿರುಗ್ತು. 4 ವರ್ಷ ಡೇಟಿಂಗ್ ನಡೆಸಿದ್ದ ಇಬ್ಬರೂ ಎರಡು ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2016 ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ರು. ಆ ಮೂಲಕ ಪ್ರೇಮಿಗಳಾಗಿದ್ದ ಸೂರ್ಯ-ದೇವಿಶಾ ಬಾಳ ಸಂಗಾತಿಯಾಗಿ ದಾಂಪತ್ಯ ಜೀವನಕ್ಕೆ ಬಂಧ ಬೆಸೆದ್ರು.

ಸೂರ್ಯನಿಗೆ ಗೈಡರ್​​​, ಮೆಂಟರ್​​​, ಸಪೋರ್ಟರ್
ದೇವಿಶಾ ಶೆಟ್ಟಿ ಸೂರ್ಯಕುಮಾರ್​​​​ ಯಾದವ್​ಗೆ ಬರೀ ಪತ್ನಿಯಷ್ಟೇ ಅಲ್ಲ. ಉತ್ತಮ ಮಾರ್ಗದರ್ಶಿ, ಮೆಂಟರ್​ ಹಾಗೂ ದೊಡ್ಡ ಸಪೋರ್ಟರ್​ ಕೂಡ ಹೌದು. ಸ್ಕೈ ಕ್ರಿಕೆಟ್ ಕರಿಯರ್​ನಲ್ಲಿ ಹಲವು ಬಾರಿ ಏಳು ಬೀಳುಗಳನ್ನ ಕಂಡಿದ್ದಾರೆ. ದೇಶದ ಪರ ಬೇಗನೆ ಆಡಲು ಅವಕಾಶ ಸಿಗದೇ ಕುಗ್ಗಿ ಹೋಗಿದ್ದು ಇದೆ. ಆಗ ಸ್ಕೈಗೆ ಬೆನ್ನೆಲುಬಾಗಿ, ಮಾನಸಿಕವಾಗಿ ಸ್ಥೈರ್ಯ ತುಂಬಿದ್ದು ಇದೇ ದೇವಿಶಾ ಶೆಟ್ಟಿ. ಸೂರ್ಯ ಫೇಲ್ಯೂರ್​ ಆದಾಗಲೆಲ್ಲಾ ಕೆಪಾಸಿಟಿ ಬಗ್ಗೆ ಪಾಸಿಟಿವ್ ಮಾತುಗಳನ್ನಾಡಿದ್ರು. ಹಿನ್ನಡೆಯಾದಾಗ ಪ್ರೇರಣಾದಾಯಕ ಮಾತುಗಳ ಮೂಲಕ ಹೊಸ ಹುಮ್ಮಸು ತುಂಬಿದ್ರು. ಆ ಎಲ್ಲದರ ಪರಿಣಾಮವೇ ಸ್ಕೈ ಇಂದು ಟಿ20 ಕ್ರಿಕೆಟ್​ನ ಚಕ್ರವರ್ತಿಯಾಗಿ ಮೆರೆದಾಡ್ತಿದ್ದಾರೆ.

ಇದನ್ನೂ ಓದಿ:ಕೇವಲ 36 ಗಂಟೆಯಲ್ಲಿ ಕಾರ್ಯಾಚರಣೆ ಯಶಸ್ವಿ; ಸಕ್ಸಸ್​ನಲ್ಲೂ ಮಾತೃ ಹೃದಯ ಮಿಡಿದ ಡ್ಯಾಂ ತಜ್ಞ ಕನ್ನಯ್ಯ

ಪ್ರತಿಯೊಬ್ಬ ಪುರುಷರ ಸಕ್ಸಸ್​ ಹಿಂದೆ ಒಬ್ಬ ಮಹಿಳೆ ಇರ್ತಾಳೆ ಅನ್ನೋ ಮಾತಿದೆ. ಅದು ಸೂರ್ಯಕುಮಾರ್​​​-ದೇವಿಶಾ ಶೆಟ್ಟಿ ವಿಚಾರದಲ್ಲಿ ಅಕ್ಷರಶಃ ನಿಜವಾಗಿದೆ. ದೇವಿಶಾಳ ದೊಡ್ಡ ಬೆಂಬಲದಿಂದ ಸೂರ್ಯ ಟಿ20 ಕ್ರಿಕೆಟ್​ನ ಡಾನ್ ಆಗಿ ಮೆರೆದಾಡ್ತಿದ್ದಾರೆ. ಸ್ಕೈ ಅವರ ಈ ಸಿಂಹ ಘರ್ಜನೆ ಭವಿಷ್ಯದಲ್ಲಿ ಹೀಗೆ ಮುಂದುವರಿಯಲಿ ಅನ್ನೋದೇ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಫಸ್ಟ್ ಟೈಂ ನಿನ್ನ ನೋಡಿದಾಗ..’ ಸೂರ್ಯನ ಸಕ್ಸಸ್ ಹಿಂದೆ ನಾರಿ ಶಕ್ತಿ ಮತ್ತು ಪ್ರೀತಿ..!

https://newsfirstlive.com/wp-content/uploads/2024/08/SURYA-3.jpg

Load More