/newsfirstlive-kannada/media/post_attachments/wp-content/uploads/2025/04/Abhishek_Sharma_SURYA_1.jpg)
ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ನಡುವೆ ಕುತೂಹಲಕಾರಿ ಸಂಗತಿ ನಡೆದಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ಪಾಂಡ್ಯ ಎದುರಾಳಿ ಹೈದ್ರಾಬಾದ್ ತಂಡದವರನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದ್ದರು. ಮ್ಯಾಚ್ ನಡೆಯುವ ಮಧ್ಯೆದಲ್ಲಿ ಮೈದಾನದಲ್ಲಿ ಅಭಿಷೇಕ್ ಶರ್ಮಾ ಅವರ ಜೇಬುಗಳನ್ನು ಮುಂಬೈ ತಂಡದ ಉಪನಾಯಕ ಸೂರ್ಯಕುಮಾರ್ ಯಾದವ್ ಅವರು ಪರಿಶೀಲನೆ ಮಾಡಿದ್ದಾರೆ.
ಪಂದ್ಯದ ಆರಂಭದಲ್ಲಿ ಹೈದ್ರಾಬಾದ್ ಪರವಾಗಿ ಓಪನರ್ ಬ್ಯಾಟರ್ಗಳಾಗಿ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಮೈದಾನಕ್ಕೆ ಬಂದರು. ಪಂದ್ಯ ನಡೆಯುವಾಗ ಮಧ್ಯೆದಲ್ಲಿ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮುಂಬೈ ತಂಡದ ಉಪನಾಯಕ ಸೂರ್ಯಕುಮಾರ್ ಯಾದವ್ ಅವರು ಅಭಿಷೇಕ್ ಶರ್ಮಾ ಅವರ ಪ್ಯಾಂಟ್ನ ಜೇಬುಗಳನ್ನ ಪರಿಶೀಲನೆ ಮಾಡಿದ್ದಾರೆ. ಇದರಿಂದ ಮೈದಾನದಲ್ಲಿ ಕ್ಷಣಹೊತ್ತು ತಮಾಷೆ ನಡೆಯಿತು ಎನ್ನಬಹುದು. ಅಭಿಷೇಕ್ ಪಾಕೆಟ್ಗಳನ್ನ ಸೂರ್ಯ ಚೆಕ್ ಮಾಡುವಾಗ ಆಟಗಾರರೆಲ್ಲಾ ನಗುತ್ತಿದ್ದರು.
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ಮಾಡಿದ್ದ ಅಭಿಷೇಕ್ ಶರ್ಮಾ ಹೈದ್ರಾಬಾದ್ ಗೆಲುವಿಗೆ ಕಾರಣರಾಗಿದ್ದರು. ಬರೋಬ್ಬರಿ 246 ರನ್ಗಳ ಟಾರ್ಗೆಟ್ ಮಾಡಿ ಹೈದ್ರಾಬಾದ್ ತಂಡ ರೋಚಕ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ವೇಗದ ಸೆಂಚುರಿ ಸಿಡಿಸಿದ್ದ ಅಭಿಷೇಕ್ ಶರ್ಮಾ, ತನ್ನ ಪ್ಯಾಂಟ್ ಜೇಬಿನಿಂದ ಚೀಟಿಯೊಂದು ತೆಗೆದು ಪಿಚ್ನಲ್ಲೇ ಎಲ್ಲರಿಗೂ ತೋರಿಸಿದ್ದರು.
ಇದನ್ನೂ ಓದಿ:ವಿಸ್ಫೋಟಕ ಬ್ಯಾಟರ್ಗಳಿದ್ದರೂ ಅಲ್ಪ ಮೊತ್ತದ ಟಾರ್ಗೆಟ್ ಕೊಟ್ಟ SRH.. ಎಷ್ಟು ರನ್?
ಹೀಗಾಗಿ ಈ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಚೀಟಿ ಏನಾದರೂ ತಂದಿರಬಹುದು ಎಂದು ಸೂರ್ಯಕುಮಾರ್ ಯಾದವ್ ಚೆಕ್ ಮಾಡಿದ್ದಾರೆ. ಆದರೆ ಸೂರ್ಯಕುಮಾರ್ ಚೆಕ್ ಮಾಡಿದಾಗ ಅಭಿಷೇಕ್ ಶರ್ಮಾ ಜೇಬಿನಲ್ಲಿ ಯಾವುದೇ ಚೀಟಿ ಪತ್ತೆ ಆಗಿಲ್ಲ. ಇನ್ನು ಪಂಜಾಬ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದ ಅಭಿಷೇಕ್ ಶರ್ಮಾ, ಒಟ್ಟು 55 ಬಾಲ್ಗಳನ್ನ ಎದುರಿಸಿ 14 ಫೋರ್ ಹಾಗೂ 10 ಸಿಕ್ಸರ್ಗಳಿಂದ 141 ರನ್ ಗಳಿಸಿ ಔಟ್ ಆಗಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ