ಟೀಂ ಇಂಡಿಯಾದಲ್ಲಿ ‘ಸೂರ್ಯ ಗ್ರಹಣ’..! ಸಂಕಷ್ಟಕ್ಕೆ ಸಿಲುಕಿದ ಸ್ಟಾರ್​​ ಬ್ಯಾಟ್ಸ್​​ಮನ್

author-image
Ganesh
Updated On
IND vs SA; ಚಾಂಪಿಯನ್ಸ್​ vs ರನ್ನರ್​ ಅಪ್​ ಮಧ್ಯೆ ಜಿದ್ದಾಜಿದ್ದಿ.. ಯುವ ಆಟಗಾರರಿಗೆ ಇದು ಚಾಲೆಂಜ್!
Advertisment
  • ಇಂಗ್ಲೆಂಡ್​ ಎದುರು ಸೂರ್ಯ ಕಂಪ್ಲೀಟ್ ಫೇಲ್
  • 6 ಪಂದ್ಯಗಳಿಂದ ಸೂರ್ಯ ಗಳಿಸಿದ್ದು 38 ರನ್
  • 10 ಪಂದ್ಯ.. 158 ರನ್.. 1 ಫಿಫ್ಟಿ.. ಏನಾಯ್ತು SKY..?

ಸೂರ್ಯಕುಮಾರ್ ಯಾದವ್.. ಇದು ಹೆಸರಲ್ಲ. ಟಿ20 ಕ್ರಿಕೆಟ್​ನ ಬ್ರ್ಯಾಂಡ್.. ಟಿ20 ಕ್ರಿಕೆಟ್​​​ ಆಡೋದು ಹೀಗೆ ಅನ್ನೋದು ಜಗತ್ತಿಗೆ ಅದ್ಭುತವಾಗಿ ತೋರಿಸಿದ್ದೇ ಈ ಸೂರ್ಯ.. ಆದ್ರೀಗ ಇದೇ ಸೂರ್ಯನಿಗೆ ಗ್ರಹಣ ಹಿಡಿದಂತಿದೆ.

ಅಷ್ಟ ದಿಕ್ಕುಗಳಿಗೂ ಚೆಂಡನ್ನ ಬಡಿದಟ್ಟುವ ಸೂರ್ಯನ ಶಾಕಕ್ಕೆ ಎದುರಾಳಿ ವಿಲವಿಲ ಎದ್ದಾಡ್ತಾರೆ. ಆದ್ರೀಗ ಇಂಥಹ ಸೂರ್ಯನಿಗೆ ಗ್ರಹಣ ಹಿಡಿದಂತಿದೆ. ಪ್ರಜ್ವಲಿಸ್ತಿದ್ದ ಸೂರ್ಯ ಮುಸುಕಾಗ್ತಿದ್ದಾನೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್ ಸೂರ್ಯ​ನ ಇತ್ತೀಚಿನ ಆಟ.

ಇಂಗ್ಲೆಂಡ್​ ಎದುರು ಸೂರ್ಯ ಕಂಪ್ಲೀಟ್ ಫೇಲ್..!

ಇಂಗ್ಲೆಂಡ್ ಎದುರು ಟೀಮ್ ಇಂಡಿಯಾ ಎರಡಕ್ಕೆ ಎರಡೂ ಮ್ಯಾಚ್ ಗೆದ್ದಿದೆ. ಈ ಎರಡೂ ಮ್ಯಾಚ್​ಗಳಲ್ಲಿ ಸೂರ್ಯೂನ ಬ್ಯಾಟ್ ಸೈಲೆಂಟ್ ಆಗಿದೆ. ಸಿಕ್ಸರ್​ಗಳ ಸುನಾಮಿ ಸೃಷ್ಟಿಸಬೇಕಿದ್ದ ಬ್ಯಾಟ್​​ನ ಕೆಳಗಿಳಿಸಿ ಪೆವಿಲಿಯನ್​ನತ್ತ ಹೆಜ್ಜೆ ಹಾಕ್ತಾ ಹೊರಡ್ತಿದ್ದಾರೆ. ಈಡನ್ ಗಾರ್ಡನ್​ನಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದ ಸೂರ್ಯ, ಚೆಪಾಕ್​ನಲ್ಲಾದ್ರೂ ಇಂಗ್ಲೆಂಡ್​ನ ಚಿಂದಿ ಚಿತ್ರನ್ನ ಮಾಡ್ತಾರೆ ಅಂದ್ಕೊಂಡ್ರೆ 12 ರನ್​​ಗೆ ಆಟ ಮುಗಿಸಿದ್ರು.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟ.. ಬಲಿಷ್ಠ ಟೀಂ ಇಂಡಿಯಾದಲ್ಲಿ 5 ದೊಡ್ಡ ಬದಲಾವಣೆಗಳು..!

6 ಪಂದ್ಯ.. 5 ಇನ್ನಿಂಗ್ಸ್​.. ಗಳಿಸಿದ್ದು ಜಸ್ಟ್​ 38 ರನ್

ಇಂಗ್ಲೆಂಡ್ ಎದುರಿನ ಮೊದಲ ಎರಡು ಪಂದ್ಯಗಳಲ್ಲೇ ಸೂರ್ಯ ಫೇಲ್ಯೂರ್ ಆಗಿಲ್ಲ. ಈ ಹಿಂದಿನ ಸೌತ್ ಆಫ್ರಿಕಾ ಪ್ರವಾಸದಲ್ಲೂ ತೀವ್ರ ವೈಫಲ್ಯ ಅನುಭವಿಸಿದ್ದಾರೆ. ಎರಡಂಕಿ ರನ್​ ಗಡಿದಾಟಲು ಹರಸಾಹಸ ಪಡ್ತಿರುವ ಸೂರ್ಯ, 6 ಪಂದ್ಯಗಳಿಂದ ಗಳಿಸಿದ್ದು ಜಸ್ಟ್​ 38 ರನ್​. ಆತಂಕದ ವಿಚಾರ ಅಂದ್ರೆ, 6 ಪಂದ್ಯಗಳಿಂದ 38 ರನ್​ ಕಲೆಹಾಕಿರುವ ಸೂರ್ಯರ ಹೆಯೆಸ್ಟ್​ ಸ್ಕೋರ್ 21.. ಅದು ಕೂಡ 95ರ ಸ್ಟ್ರೈಕ್​ರೇಟ್​​ನಲ್ಲಾಗಿದೆ. ಸೂರ್ಯರ ಈ ವೈಫಲ್ಯ ಜಸ್ಟ್​ 6 ಪಂದ್ಯಗಳಿಗೆ ಮಾತ್ರವೇ ಸಿಮೀತವಾಗಿಲ್ಲ. ಕಳೆದ 10 ಪಂದ್ಯಗಳಿಂದಲೂ ಇದೇ ಕಥೆ.. ವ್ಯಥೆಯಾಗಿದೆ.

ಸೂರ್ಯ ಬ್ಯಾಟಿಂಗ್

ಕಳೆದ 10 ಪಂದ್ಯಗಳಿಂದ 158 ರನ್ ಗಳಿಸಿರುವ ಸೂರ್ಯ, 17.55ರ ಬ್ಯಾಟಿಂಗ್ ಅವರೇಜ್​ ಹೊಂದಿದ್ದಾರೆ. ಈ ಪೈಕಿ 1 ಅರ್ಧಶತಕ ಸಿಡಿಸಿರುವ ಸೂರ್ಯ, 146.29ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

ಇದನ್ನೂ ಓದಿ: BIGG BOSS ರನ್ನರ್ ಅಪ್ ತ್ರಿವಿಕ್ರಮ್ ಫಸ್ಟ್ ರಿಯಾಕ್ಷನ್.. ವಿನ್ನರ್ ಹನುಮಂತು ಬಗ್ಗೆ ಏನಂದ್ರು?

ಸೂರ್ಯನ ಅಂದಿನ ಬ್ಯಾಟಿಂಗ್​ ಕನ್ಸಿಸ್ಟೆನ್ಸಿ ಈಗಿಲ್ಲ

ಟಿ20ಯಲ್ಲಿ ಕನ್ಸಿಸ್ಟೆನ್ಸಿ ಅಂದ್ರೆ ಸೂರ್ಯ.. ಸೂರ್ಯ ಅಂದ್ರೆ ಕನ್ಸಿಸ್ಟೆನ್ಸಿ ಅನ್ನೋ ಮಾತಿತ್ತು. ಇದಕ್ಕೆ ತಕ್ಕನಂತೆಯೇ ಬ್ಯಾಟ್ ಬೀಸಿದ್ದ ಸೂರ್ಯ, ಮೂರ್ನಾಲ್ಕು ಪಂದ್ಯಕೊಮ್ಮೆ ಫಿಫ್ಟಿ ಸಿಡಿಸೋದು ಮಿಸ್ಸಾಗ್ತಿರಲಿಲ್ಲ. ಇದು ಮಿಸ್​ ಆಗಿದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್. ಕಳೆದ 10 ಇನ್ನಿಂಗ್ಸ್​ಗಳಿಂದ ಕೇವಲ ಒಂದು ಒಂದು ಹಾಫ್ ಸೆಂಚುರಿ ದಾಖಲಿಸಿದ್ದಾಗಿದೆ.

ಸೂರ್ಯಗೆ ಹೊರೆ ಆಗ್ತಿದೆಯಾ ಟಿ20 ಕ್ಯಾಪ್ಟನ್ಸಿ?

ಕ್ಯಾಪ್ಟನ್ ಆಗಿ ಸೂರ್ಯ ಅದ್ಭುತವಾಗಿ ತಂಡ ಮುನ್ನಡೆಸ್ತಿದ್ದಾರೆ. 2022, 2023ರಲ್ಲಿ ಫ್ಯಾನ್ಸ್​ ಕಂಡಿದ್ದ ಸೂರ್ಯ ಮರೆಯಾಗಿದ್ದಾನೆ. ಬಿಗ್ ಸ್ಕೋರ್ ಕಲೆಹಾಕಲು ಎಡವುತ್ತಿದ್ದಾನೆ. ತಾನೇ ಮ್ಯಾಚ್ ವಿನ್ನರ್ ಪರ್ಫಾಮೆನ್ಸ್ ನೀಡ್ತಿದ್ದ ಸೂರ್ಯ, ಈಗ ನಾಯಕತ್ವದ ಮೆಟಿರಿಯಲ್ ಆಗಿ ಬಿಟ್ಟಿದ್ದಾನೆ. ಹೀಗಾಗಿ ಟಿ20 ನಾಯಕತ್ವದ ಹೊರೆ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಿದೆ ಅನ್ನೋ ಅನುಮಾನ ಎಲ್ಲರ ಕಾಡ್ತಿದೆ.
ಟಿ20 ಗೇಮ್​ನಲ್ಲಿ ಒನ್​​ ಇನ್ನಿಂಗ್ಸ್​ ಮ್ಯಾಟರ್ ಅಷ್ಟೇ. ಈ ಒಂದು ಇನ್ನಿಂಗ್ಸ್​ನಲ್ಲಿ ಸೂರ್ಯ ಕ್ಲಿಕ್ ಆಗಿಬಿಟ್ರೆ ಮತ್ತೆ ಸೂರ್ಯನ ಶಾಖಕ್ಕೆ ಎದುರಾಳಿ ನಿಲ್ಲೋಕು ಆಗಲ್ಲ. ಅಂಥ ಇನ್ನಿಂಗ್ಸ್​ಗಾಗಿಯೇ ಫ್ಯಾನ್ಸ್​ ಕಾಯ್ತಿದ್ದಾರೆ. ಶೀಘ್ರವೇ ಹಳೇ ಸೂರ್ಯ ದರ್ಶನವಾಗಲಿ ಅನ್ನೋದೇ ಎಲ್ಲರ ಆಶಯ.

ಇದನ್ನೂ ಓದಿ: CM ಎಚ್ಚರಿಕೆಗೂ ಮೈಕ್ರೋಫೈನಾನ್ಸ್ ಡೋಂಟ್ ಕೇರ್.. ಸಿದ್ದು ತವರಿನಲ್ಲಿ ಜೀವ ತೆಗೆದುಕೊಂಡ ಓರ್ವ ಮಹಿಳೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment