ಸಿಕ್ಸ್​ ಬಾರಿಸಿ ಸೂರ್ಯಕುಮಾರ್ ಅರ್ಧಶತಕ.. ಲಕ್ನೋಗೆ SKY ಪಂಚ್!​

author-image
Bheemappa
Updated On
ಆರೆಂಜ್​​ ಕ್ಯಾಪ್​ಗಾಗಿ ರನ್ ​ವಾರ್.. 4 ದಿನದಲ್ಲಿ ಮೂವರ ಪಾಲು..!
Advertisment
  • ಎಂದಿನಂತೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಸ್ಟಾರ್
  • ರಯಾನ್ ಅರ್ಧಶತಕದ ನಂತರ ಸೂರ್ಯ ಹಾಫ್​​ಸೆಂಚುರಿ
  • ಪಂದ್ಯದಲ್ಲಿ 4ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡಿದ ಸೂರ್ಯ

ತವರಿನಲ್ಲಿ ನಡೆಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್​ ಜೊತೆಗಿನ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್​ ಭರ್ಜರಿ ಹಾಫ್​ಸೆಂಚುರಿ ಬಾರಿಸಿದ್ದಾರೆ.

ವಾಂಖೆಡೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ತಂಡದ ನಾಯಕ ರಿಷಭ್ ಪಂತ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ತೆಗೆದುಕೊಂಡರು. ಇದರಿಂದ ಮುಂಬೈ ಇಂಡಿಯನ್ಸ್​ ತವರಿನಲ್ಲಿ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತು. ಮುಂಬೈ ಪರ ಓಪನರ್​ಗಳಾಗಿ ಕ್ರೀಸ್​ಗೆ ಬಂದ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಒಳ್ಳೆಯ ಆರಂಭ ಪಡೆಯಲಿಲ್ಲ. ರೋಹಿತ್ ಕೇವಲ 12 ರನ್​ಗೆ ಔಟ್ ಆದರು. ಆದರೆ ರಯಾನ್ ಸ್ಫೋಟಕ 58 ರನ್​ ಚಚ್ಚಿದರು.

ಇದನ್ನೂ ಓದಿ: 2 ಸಿಕ್ಸರ್​ ಸಿಡಿಸಿ ಬ್ಯಾಟಿಂಗ್ ಮುಗಿಸಿದ ರೋಹಿತ್​.. ಓಪನರ್​ ರಯಾನ್ ಸಿಡಿಲಬ್ಬರದ ಅರ್ಧಶತಕ

publive-image

ಓಪನರ್ ರಯಾನ್ ರಿಕೆಲ್ಟನ್ ಔಟ್​ ಆದ ಬಳಿಕ ಕ್ರೀಸ್​ಗೆ​ ಆಗಮಿಸಿದ್ದ ಸೂರ್ಯಕುಮಾರ್ ಯಾದವ್ ಎಂದಿನಂತೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ರಿಷಭ್ ಪಂತ್​ ಪಡೆ ವಿರುದ್ಧ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿದ ಮಿಸ್ಟರ್ 360 ಪಂದ್ಯದಲ್ಲಿ 48 ರನ್​ ಆಗಿದ್ದಾಗ ಸಿಕ್ಸರ್​ ಬಾರಿಸೋ ಮೂಲಕ ಹಾಫ್​ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್​ 4 ಫೋರ್, 4 ಮುಗಿಲೆತ್ತರದ ಸಿಕ್ಸರ್​ಗಳಿಂದ 54 ರನ್​ ಗಳಿಸಿದರು.

ಅರ್ಧಶತಕ ಬಾರಿಸಿದ ಸಂಭ್ರಮದಲ್ಲಿ ಬ್ಯಾಟ್​ ಬೀಸುತ್ತಿದ್ದ ಸೂರ್ಯಕುಮಾರ್​ ಆವೇಶ್​ ಖಾನ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ಕೊನೆ ಹಂತದಲ್ಲಿ ಸೂರ್ಯ ವಿಕೆಟ್​ ಕಳೆದುಕೊಂಡಿರುವುದು ಮುಂಬೈ ಇಂಡಿಯನ್ಸ್​ಗೆ ರನ್​ಗಳ ನಷ್ಟವಾದವು ಎನ್ನಬಹುದು. ಏಕೆಂದರೆ 20 ಓವರ್​ ಮುಗಿಯಲು ಇನ್ನು 3 ಓವರ್​ ಮಾತ್ರ ಬಾಕಿ ಇದ್ದವು. ಇದೇ ವೇಳೆ ಸೂರ್ಯಕುಮಾರ್ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ರನ್​ಗಳ ಹಿನ್ನಡೆ ಆಯಿತು ಎಂದು ಹೇಳಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment