ಉಡುಪಿ ಬ್ರಹ್ಮಕಲಶೋತ್ಸವದಲ್ಲಿ ಸೂರ್ಯ, ಕಂಗನಾ, ಪೂಜಾ ಹೆಗ್ಡೆ ಸೇರಿ ಸೆಲೆಬ್ರಿಟಿಗಳು.. ಯಾರು ಯಾರು ಬಂದಿದ್ರು?

author-image
Bheemappa
Updated On
ಉಡುಪಿ ಬ್ರಹ್ಮಕಲಶೋತ್ಸವದಲ್ಲಿ ಸೂರ್ಯ, ಕಂಗನಾ, ಪೂಜಾ ಹೆಗ್ಡೆ ಸೇರಿ ಸೆಲೆಬ್ರಿಟಿಗಳು.. ಯಾರು ಯಾರು ಬಂದಿದ್ರು?
Advertisment
  • ನಟಿ ಶಿಲ್ಪಾ ಶೆಟ್ಟಿ, ಶರ್ಮಿತಾ ಶೆಟ್ಟಿ, ಕಂಗನಾ, ಪೂಜಾ ಹೆಗ್ಡೆ ಭಾಗಿ
  • ಶಾಸ್ತ್ರೋಕ್ತವಾಗಿ ನಡೆದ ಉಚ್ಛಂಗಿ ದೇವಿಯ ಬ್ರಹ್ಮಕಲಶೊತ್ಸವ
  • ದೇವರ ದರ್ಶನ ಪಡೆದ ಖ್ಯಾತ ಕ್ರಿಕೆಟಿಗ ಸೂರ್ಯ ಕುಮಾರ್

ಉಡುಪಿಯ ಕಾಪು ಹೊಸ ಮಾರಿಗುಡಿ ಪ್ರಸಿದ್ಧಿ ವಿಶ್ವಮಟ್ಟಕ್ಕೇರಿದೆ. ನೂತನ ದೇವಸ್ಥಾನ ನಿರ್ಮಾಣ ಬ್ರಹ್ಮಕಲಶ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಮಾರಿಯಮ್ಮನ ಪ್ರತಿಷ್ಠಾ ಮಹೋತ್ಸವ ಉಚ್ಛಂಗಿ ದೇವಿಯ ಬ್ರಹ್ಮಕಲಶೊತ್ಸವ ಶಾಸ್ತ್ರೋಕ್ತವಾಗಿ ನಡೆದಿದೆ. ವಿಶೇಷ ಅಶ್ವಪೂಜೆ ನಡೆದಿದ್ದು, ಕ್ಷೇತ್ರಕ್ಕೆ ಬಹುಭಾಷಾ ನಟಿಯರು, ಕ್ರಿಕೆಟ್ ಲೋಕದ ದಿಗ್ಗಜರು, ರಾಜಕಾರಣಿಗಳು, ಉದ್ಯಮಿಗಳ ದಂಡೇ ಹರಿದು ಬಂದಿದೆ.

ಉಡುಪಿಯ ಕಾಪು ಹೊಸ ಮಾರಿಗುಡಿ ಭವ್ಯ ಮಂದಿರವಾಗಿ ತಲೆಯೆತ್ತಿದೆ. ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ದೇವಸ್ಥಾನದ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಮಹಾಯಾಗ, ಪೂಜೆ ಪುನಸ್ಕಾರಗಳು ವೈಭವದಿಂದ ಶಾಸ್ತ್ರೋಕ್ತವಾಗಿ ನಡೆಯುತ್ತಿವೆ. ಬಾಗಲಕೋಟೆಯ ಇಳಕಲ್ ಕೆಂಪು ಕಲ್ಲಿನ ದೇಗುಲ ಕಣ್ಮನ ಸೆಳೆಯುತ್ತಿದೆ. ದೇಶ ವಿದೇಶಗಳ ಉದ್ಯಮಿಗಳು, ರಾಜಕಾರಣಿಗಳು, ನಟ-ನಟಿಯರು ಬಂದು ಮಾರಿಯಮ್ಮ ಉಚ್ಚಂಗಿಯ ದರ್ಶನಗೈಯ್ಯುತ್ತಿದ್ದಾರೆ.

publive-image

ಇನ್ನು ಕಾಪು ಹೊಸ ಮಾರಿಗುಡಿ ನಿರ್ಮಾಣದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಕೂಡ ದೇವಾಲಯ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಟಿಯರಾದ ಶಿಲ್ಪಾ ಶೆಟ್ಟಿ, ಶರ್ಮಿತಾ ಶೆಟ್ಟಿ, ಸಂಸದೆ ಕಂಗಣಾ ರಾಣಾವತ್, ಪೂಜಾ ಹೆಗ್ಡೆ, ಖ್ಯಾತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಬಂದು ದೇವರ ದರ್ಶನ ಮಾಡಿದ್ದಾರೆ. ಸನಾತನ ಪರಂಪರೆ ಬಗ್ಗೆ ಮಾತನಾಡಿರುವ ಕಂಗನಾ, ಸರ್ಕಾರದ ನಿಯಮಗಳಿಂದ ಅನ್ನದಾನ, ಶಿಕ್ಷಣ ಮತ್ತು ಆರೋಗ್ಯ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿಲ್ಲ ಅಂತ ಖೇದ ವ್ಯಕ್ತಪಡಿಸಿದ್ದಾರೆ.

publive-image

ಈ ಮಾರಿಯಮ್ಮ ದೇಗುಲ ಅತಿಯಾದ ಸಂತೋಷ, ಸಂತೃಪ್ತಿಯನ್ನ ನನಗೆ ಕೊಟ್ಟಿದೆ. ನಮ್ಮ ಕಾಲಘಟ್ಟದಲ್ಲಿ ನಮ್ಮ ಜನರಿಗೆ ನಾವು ಏನಾದ್ರೂ ಮಾಡ್ತಿದ್ದೇವೆ ಅಂದ್ರೆ ಅದು ನಮ್ಮ ಪೂರ್ವಜರು ತೋರಿಸಿಕೊಟ್ಟ ಮಾನವೀಯತೆ. ದೇಗುಲಗಳಿಗೆ ದೇಣಿಗೆ ಬರ್ತಿದೆ. ಸನಾತನ ಧರ್ಮದ ದೇವಾಲಯಗಳು ಲಕ್ಷಾಂತರ ಜನರಿಗೆ ಅನ್ನ ಹಾಕ್ತಿವೆ. ದೇಗುಲಗಳ ಅಡಿ ವೈದ್ಯಕೀಯ ಸೇವೆಗಳು, ಆಸ್ಪತ್ರೆ ಸೇವೆಗಳು ಲಬಿಸ್ತಿವೆ.

ಕಂಗಣಾ ರಾಣಾವತ್, ಸಂಸದೆ,‌ ಬಹುಭಾಷಾ ನಟಿ

ನೂತನ ದೇವಾಲಯದಲ್ಲಿ ಸ್ವರ್ಣ ಗದ್ದುಗೆ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಸುಮಾರು 20 ಕೆಜಿ ತೂಕದ ಬಂಗಾರದ ಗದ್ದುಗೆಯಲ್ಲಿ ದೇವಿ ವಿರಾಜಮಾನಳಾಗಿದ್ದಾಳೆ. ಭಕ್ತರು ಕೊಡುಗೆ ರೂಪದಲ್ಲಿ ನೀಡಿದ ಚಿನ್ನದಲ್ಲಿ ಈ ಸೇವೆ ಮಾಡಲಾಗಿದೆ. ಗದ್ದುಗೆ ಜೊತೆ ಮಾರಿಯಮ್ಮನ ಚಿನ್ನದ ಮುಖ, ಉಚ್ಚಂಗಿ ದೇವಿಗೂ ಚಿನ್ನದ ಮುಖ, ಬೆಳ್ಳಿರಥ ಕ್ಷೇತ್ರಕ್ಕೆ ಸಮರ್ಪಣೆಯಾಗಿದೆ. ವಿಶೇಷ ಅಶ್ವಪೂಜೆಗಳನ್ನು ನಡೆಸಿ ಹೋಮ ಹವನಗಳನ್ನು ನೆರವೇರಿಸಿ, ಉಚ್ಚಂಗಿದೇವಿಗೆ ಬ್ರಹ್ಮಕುಂಭಾಭಿಷೇಕ ನಡೆಸಿಕೊಡಲಾಗಿದೆ. ದೇಗುಲದ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು ಸಭಾಂಗಣ ಸುತ್ತಮುತ್ತ ಗುಡಿಗಳು, ಭಜನಾ ಮಂದಿರ ಸೇರಿದಂತೆ ಒಟ್ಟು 70 ಕೋಟಿ ರೂಪಾಯಿಯ ಕಾಮಗಾರಿ ನಡೆಯುತ್ತಿದೆ.

ಇದನ್ನೂ ಓದಿ: 13 ವರ್ಷದ ಬಾಲಕನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಆಗಿ ನೇಮಿಸಿದ ಡೋನಾಲ್ಡ್ ಟ್ರಂಪ್!

publive-image

ನವ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಶಾಸ್ತ್ರೋಕ್ತವಾಗಿ ಮಾರಿಯಮ್ಮನಿಗೆ ಬ್ರಹ್ಮಕಲಶಾಭಿಷೇಕ ನಡೆದಿದೆ. ಮುಂದಿನ 48 ದಿವಸಗಳ ಕಾಲ ಹೋಮ ಹವನ ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದಲ್ಲಿ ನಡೆಯಲಿದೆ. ಮಾರಿಯಮ್ಮನ ಪ್ರತಿಷ್ಠಾ ಮಹೋತ್ಸವ ಉಚ್ಛಂಗಿ ದೇವಿಯ ಬ್ರಹ್ಮಕಲಶೊತ್ಸವ ಶಾಸ್ತ್ರೋಕ್ತವಾಗಿ ನಡೆದಿದೆ.

ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನವಾದ್ರೂ ಸರ್ಕಾರದಿಂದ ದೇವಾಲಯದ ಅಭಿವೃದ್ಧಿಗೆ 1 ರೂಪಾಯಿ ಕೂಡ ಇನ್ನೂ ಬಿಡುಗಡೆ ಆಗಿಲ್ಲ. 6 ಕೋಟಿಯಷ್ಟು ಹಣ ಕಾಪು ಮಾರಿಯಮ್ಮ ದೇವಾಲಯಕ್ಕೆ ಸಂಬಂಧಿಸಿದ ಹಣವಿದ್ರೂ ಅಭಿವೃದ್ಧಿ ಕಾರ್ಯಕ್ಕೆ ಉಪಯೋಗಿಸಲು ಸರ್ಕಾರ ಅನುಮತಿ ನೀಡಿಲ್ಲ. ಇನ್ನಾದ್ರೂ ಸರ್ಕಾರ ಈ ಕಡೆಗೆ ಗಮನ ಹರಿಸಲಿ ಅನ್ನೊದು ಭಕ್ತರ ಆಶಯ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment